ಬ್ರೇಕಿಂಗ್ ನ್ಯೂಸ್
04-12-21 05:49 pm Source: News 18 Kannada ಡಾಕ್ಟರ್ಸ್ ನೋಟ್
Acidity: ಗ್ಯಾಸ್ಟ್ರಿಕ್ ಗ್ರಂಥಿಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಗತ್ಯಕ್ಕಿಂತ ಹೆಚ್ಚು ಆಮ್ಲವನ್ನು ರಚಿಸಿದಾಗ, ಜನರು ಎದೆಯ ಮೂಳೆಯ ಕೆಳಗೆ ಉರಿಯುವಂತಹ ಸಂವೇದನೆಯನ್ನು ಅನುಭವಿಸುತ್ತಾರೆ. ಇದನ್ನು ಆಮ್ಲೀಯತೆ ಅಥವಾ ಅಸಿಡಿಟಿ (Acidity) ಎಂದು ಕರೆಯಲಾಗುತ್ತದೆ.
ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ (Gastric ) ಗ್ರಂಥಿಗಳು ಆಮ್ಲವನ್ನು ಉತ್ಪಾದಿಸುತ್ತವೆ. ಇದು ಆಹಾರ ಜೀರ್ಣಿಸಿಕೊಳ್ಳಲು ಅವಶ್ಯಕವಾಗಿದೆ. ಆದರೆ ಗ್ಯಾಸ್ಟ್ರಿಕ್ ಗ್ರಂಥಿಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಗತ್ಯಕ್ಕಿಂತ ಹೆಚ್ಚು ಆಮ್ಲವನ್ನು ರಚಿಸಿದಾಗ, ಜನರು ಎದೆಯ ಮೂಳೆಯ ಕೆಳಗೆ ಉರಿಯುವಂತಹ ಸಂವೇದನೆಯನ್ನು ಅನುಭವಿಸುತ್ತಾರೆ. ಇದನ್ನು ಆಮ್ಲೀಯತೆ ಅಥವಾ ಅಸಿಡಿಟಿ (Acidity) ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ, ಹೊಟ್ಟೆಯ ಆಮ್ಲವು ಆಹಾರದ ಪೈಪ್‍ಗೆ ಹಿಂತಿರುಗುತ್ತದೆ, ಇದನ್ನು ಆ್ಯಸಿಡ್ ರಿಫ್ಲಕ್ಸ್ ಎಂದು ಕರೆಯಲಾಗುತ್ತದೆ. ಆಮ್ಲೀಯತೆಯನ್ನು ಎದೆಯ ಉರಿ ಲಕ್ಷಣದ ಮೂಲಕ ಗುರುತಿಸಬಹುದಾಗಿದೆ. ಇದು ಎದೆಯ ಕೆಳಭಾಗದ ಪ್ರದೇಶದ ಸುತ್ತಲೂ ಅನುಭವಕ್ಕೆ ಬರುತ್ತದೆ. ಎದೆಯಲ್ಲಿ ಉರಿಯ ಸಂವೇದನೆ ಅಥವಾ ನೋವು ಸಾಮಾನ್ಯ ಲಕ್ಷಣವಾಗಿದೆ.
ಊಟ ಬಿಟ್ಟುಬಿಡುವುದು ಅಥವಾ ಅನಿಯಮಿತ ಸಮಯದಲ್ಲಿ ತಿನ್ನುವುದು, ಮಲಗುವ ಮುನ್ನ ತಿನ್ನುವುದು, ಮಸಾಲೆಯುಕ್ತ ಆಹಾರ ಸೇವಿಸುವುದು, ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಅಥವಾ ಸಕ್ಕರೆ ಉತ್ಪನ್ನಗಳ ಸೇವನೆ, ಕಡಿಮೆ ಫೈಬರ್ ಆಹಾರ, ಅತಿಯಾದ ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು, ಜಂಕ್ ಫುಡ್ ಇವುಗಳು ಅಸಿಡಿಟಿ ಗೆ ಕಾರಣಗಳಾಗಿವೆ.
ಫಿಟ್‍ನೆಸ್ ತರಬೇತುದಾರ ನಿಧಿ ಗುಪ್ತಾ ತಮ್ಮ ಇತ್ತೀಚಿನ ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕೆಲವು ಸಲಹೆಗಳ ಮೂಲಕ ಅಸಿಡಿಟಿ ಯನ್ನು ಹೇಗೆ ಗುಣಪಡಿಸಬಹುದು ಎಂದು ಹಂಚಿಕೊಂಡಿದ್ದಾರೆ. ನಿಧಿ ಪ್ರಕಾರ, ಯುವ ಪೀಳಿಗೆಯು ಅವರ "ಕಳಪೆ ಜೀವನಶೈಲಿ, ಅನಾರೋಗ್ಯಕರ ಆಹಾರಗಳ ಹೆಚ್ಚಿನ ಬಳಕೆಯಿಂದ ಹೆಚ್ಚು ಅಸಿಡಿಟಿ ಅನುಭವಿಸುತ್ತಾರೆ. ಆಮ್ಲೀಯತೆಗೆ ಕೆಲವು ಪರಿಹಾರಗಳಿವೆ, ಇದು ಅದ್ಭುತವಾದ ಫಲಿತಾಂಶ ನೀಡುತ್ತದೆ. ಅಡುಗೆ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ನಮ್ಮನ್ನು ಕಾಡುವ ಅಸಿಡಿಟಿ ಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
1. ರಾತ್ರಿಯಿಡೀ ನೆನೆಸಿದ ಒಣದ್ರಾಕ್ಷಿ
ಐದು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಬೇಕು. ಅದನ್ನು ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂದು ಸಲಹೆ ನೀಡಿದರು.
2. ಒಂದು ಲೋಟ ಮಜ್ಜಿಗೆ
ಒಂದು ಲೋಟ ತಾಜಾ ಮಜ್ಜಿಗೆಯು ನಿಮ್ಮನ್ನು ಕಾಡುತ್ತಿರುವ ಆಮ್ಲೀಯತೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನದಲ್ಲಿ ಒಮ್ಮೆಯಾದರೂ ಕುಡಿಯುವುದನ್ನು ರೂಢಿಸಿಕೊಂಡರೆ ಒಳಿತು ಎನ್ನುತ್ತಾರೆ ಪೌಷ್ಟಿಕ ತಜ್ಞರು.
3. ಮಸಾಲೆ ಪಾನೀಯ
ಏಲಕ್ಕಿ, ಕರಿಮೆಣಸು, ಲವಂಗ, ಸೋಂಪು, ಅರಿಶಿನ, ತುಳಸಿ ಎಲೆಗಳನ್ನು ನೀರಿನಲ್ಲಿ ಬೆರೆಸಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವು ಸಿದ್ಧವಾದ ನಂತರ, ನೀರಿನಲ್ಲಿ ಚಹಾದ ರೀತಿಯಲ್ಲಿ ಕುದಿಸಿ ಖಾಲಿ ಮಿಶ್ರಣ ಕುಡಿಯಬೇಕು.
4. ಗುಲ್ಕನ್
ಗುಲ್ಕನ್ ಆಮ್ಲೀಯತೆ ನಿರ್ವಹಿಸಲು ಉತ್ತಮ ಪ್ರಯೋಜನಕಾರಿ ಪದಾರ್ಥ ಎಂದು ಫಿಟ್ನೆಸ್ ಕೋಚ್ ಹೇಳಿದ್ದಾರೆ. ಅಸಿಡಿಟಿ ಸಮಸ್ಯೆ ಇರುವವರು ತಮ್ಮ ಊಟದ ನಡುವೆ ಹೆಚ್ಚು ಅಂತರ ಇಟ್ಟುಕೊಳ್ಳಬಾರದು ಎಂದು ಸಲಹೆ ಹೇಳಿದರು. ಅಸಿಡಿಟಿ ಮಟ್ಟವನ್ನು ನಿಯಂತ್ರಣದಲ್ಲಿಡಲು ತಡರಾತ್ರಿ ಊಟ ಮಾಡುವುದನ್ನು ಮೊದಲು ತಪ್ಪಿಸಬೇಕು ಮತ್ತು ಊಟ ಮಾಡಿದ ತಕ್ಷಣವೇ ಮಲಗಬಾರದು ಎಂದು ಪೌಷ್ಟಿಕತಜ್ಞರು ಸಲಹೆ ನೀಡಿದರು.
The food we eat goes into our stomach through the esophagus. The gastric glands in your stomach create acid, which is necessary to digest the food. When the gastric glands create more acid than needed for the digestion process, you can feel a burning sensation below the breastbone. This condition is commonly known as acidity.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm