ಬ್ರೇಕಿಂಗ್ ನ್ಯೂಸ್
05-03-22 10:54 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನಾವು ಪ್ರತಿನಿತ್ಯ ಅನ್ನ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ, ಉಪ್ಪಿಟ್ಟು ಎಂದೆಲ್ಲಾ ಉಪಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತೇವೆ. ಮೈದಾ ಮಿಶ್ರಣ ಮಾಡದ ಚಪಾತಿ, ಅಂದರೆ ಗೋದಿ ಹಿಟ್ಟಿನ ಚಪಾತಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ನೀವು ಕೇಳಿರುತ್ತೀರಿ. ಜಾಹೀರಾತುಗಳಲ್ಲಿ ನೋಡಿರುತ್ತೀರಿ.
ಸಾಮಾನ್ಯವಾಗಿ ಚಪಾತಿಯಲ್ಲಿ ನಾರಿನ ಅತ್ಯುತ್ತಮವಾದ ಮೂಲವನ್ನು ಹೊಂದಿದೆ. ಇದು ರಕ್ತದ ಕೊಲೆಸ್ಟ್ರಾಲ್, ಮಲಬದ್ಧತೆಯನ್ನು ತಡೆಯುತ್ತದೆ. ಅಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.
ಅಷ್ಟಕ್ಕೂ ಚಪಾತಿಯನ್ನು ಪ್ರತಿನಿತ್ಯ ಸೇವನೆ ಮಾಡಬಹುದೇ? ಚಪಾತಿ ತೂಕವನ್ನು ಹೇಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದಕ್ಕೆ ಉತ್ತರ ಲೇಖನದಲ್ಲಿ ಓದಿ.
ಅಪೋಲೋ ಹಾಸ್ಪಿಟಲ್ಸ್‌ನ ವೈದ್ಯರು ಏನು ಹೇಳುತ್ತಾರೆ?
ಚಪಾತಿಗಳು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದ್ದು, ನಿರಂತರ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಪದೇ ಪದೇ ಹಸಿವಿನ ಕಡು ಬಯಕೆಯನ್ನು ತಗ್ಗಿಸುತ್ತದೆ.
ಚಪಾತಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಸೋಡಿಯಂ ಅನ್ನು ಹೊಂದಿದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದು ಹಂತ ಹಂತವಾಗಿ ತಗ್ಗಿಸುತ್ತದೆ.
ಅಪೋಲೋ ಹಾಸ್ಪಿಟಲ್ಸ್‌ನ ಮುಖ್ಯ ಕ್ಲಿನಕಲ್ ನ್ಯೂಟ್ರಿಷನಿಸ್ಟ್ ಡಾ, ಪ್ರಿಯಾಂಕಾ ರೋಹ್ಟಗಿ, ರಾತ್ರಿ ಸಮಯದಲ್ಲಿ ಚಪಾತಿ ತಿನ್ನಲು ಸಲಹೆ ನೀಡುತ್ತಾರೆ. ಏಕೆಂದರೆ ಇದು ಫೈಬರ್‌ನಿಂದ ತುಂಬಿದೆ.
ಇವು ಚಪಾತಿಯಲ್ಲಿರುವ ಶ್ರೀಮಂತ ಪೋಷಕಾಂಶಗಳು
ನಮ್ಮ ಭಾರತದ ಕೆಲವು ಭಾಗಗಳಲ್ಲಿ ರೊಟ್ಟಿ ಅಥವಾ ಚಪಾತಿ ಎಂದು ಕರೆಯುತ್ತಾರೆ. ಇದನ್ನು ಸಂಪೂರ್ಣವಾಗಿ ಗೋಧಿಯಿಂದ ತಯಾರಿಸಲಾಗುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ 1, ಬಿ 2, ಬಿ 3, ಬಿ 6 ಮತ್ತು ಬಿ 9 ಇದೆ. ಇನ್ನು ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿಂದ ಶ್ರೀಮಂತವಾಗಿದೆ.
ಚಪಾತಿಗಳು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಂದರೆ ಮಧುಮೇಹ ಹೊಂದಿರುವವರು ಚಪಾತಿಗಳನ್ನು ರಾತ್ರಿಯ ವೇಳೆ ಸೇವನೆ ಮಾಡುವುದು ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಜೀಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು
ಚಪಾತಿಗಳಲ್ಲಿರುವ ಈ ಮೇಲಿನ ಪೋಷಕಾಂಶಗಳು ಕೂದಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಾಕಷ್ಟು ಸಹಾಯ ಮಾಡುತ್ತದೆ.
ಅನೇಕ ಅಧ್ಯಯನಗಳ ಪ್ರಕಾರ, ಗೋಧಿ ಹಿಟ್ಟು ತ್ವಚೆಯ ಮೇಲಿನ ಮೊಡವೆಗಳಿಗೆ ಒಳಗಿನಿಂದ ಚಿಕಿತ್ಸೆ ನೀಡುತ್ತದೆ ಎಂದು ತಿಳಿಸುತ್ತವೆ. ಅಷ್ಟೇ ಅಲ್ಲ, ಚಪಾತಿ ಸೇವನೆ ಮಾಡುವುದರಿಂದ ಅದರಲ್ಲಿರುವ ಪೌಷ್ಟಿಕ ಸತ್ವಗಳು ನೇರವಾಗಿ ಕೇಶ ಸೌಂದರ್ಯವನ್ನು ಹೆಚ್ಚಿಸಲು ಉತ್ತೇಜಿಸುತ್ತವೆಯಂತೆ.
ಚಪಾತಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಲಾಭಗಳು
ತೂಕ ಇಳಿಕೆಗೆ ಸಹಕಾರಿ
ಚಪಾತಿಗಳು ನಿಮ್ಮ ತೂಕ ಇಳಿಸುವ ಸಮಸ್ಯೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಅನೇಕ ಪೌಷ್ಟಿಕ ತಜ್ಞರು ಕೂಡ ತೂಕ ಕಳೆದುಕೊಳ್ಳಲು ಚಪಾತಿಯನ್ನು ಸೇವನೆ ಮಾಡಲು ಸಲಹೆ ನೀಡುತ್ತಾರೆ. ಹಾಗಾಗಿ ನಿಮ್ಮ ಡಯಟ್ ಚಾರ್ಟ್‌ನಲ್ಲಿ ತಪ್ಪದೇ ಚಪಾತಿಗಳನ್ನು ಸೇರಿಸಿ. ಇದು ದೀರ್ಘಾಕಾಲದವರೆಗೆ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ. ಪದೇ ಪದೇ ಹಸಿವಿನ ಕಡು ಬಯಕೆಯನ್ನು ನಿಗ್ರಹಿಸುತ್ತದೆ.
Benefits Of Eating Chapati Everyday In Kannada.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm