ಬ್ರೇಕಿಂಗ್ ನ್ಯೂಸ್
08-04-22 08:29 pm Source: Vijayakarnataka ಡಾಕ್ಟರ್ಸ್ ನೋಟ್
ಬದಲಾಗುತ್ತಿರುವ ಹವಾಮಾನ, ಆಹಾರ ಪದ್ಧತಿ, ರೋಗ ನಿರೋಧಕ ಶಕ್ತಿಯ ಕೊರತೆಯ ಕಾರಣದಿಂದ ಆಗಾಗ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ಜ್ವರ ಬಂದ ಅನುಭವವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ನಾವು ಆರೈಕೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಸ್ವಯಂ ಆರೈಕೆ ನಮ್ಮನ್ನು ಬೇಗನೆ ಗುಣಪಡಿಸುತ್ತದೆ . ಈಗಂತೂ ಬೇಸಿಗೆ. ಸೆಕೆಗೆ ತಂಪಾಗಿರಲು ತಣ್ಣನೆಯ ನೀರು, ಜ್ಯೂಸ್‌ಗಳನ್ನು ಹೆಚ್ಚಾಗಿ ಸೇವಿಸುವ ಪರಿಣಾಮ ದೇಹದಲ್ಲಿ ತಾಪಮಾನದ ಏರಿಳಿತವಾಗುತ್ತದೆ. ಇದರಿಂದ ಗಂಟಲು ನೋವು, ಮೂಗಿನಲ್ಲಿ ಸೋರುವಿಕೆ, ಮೈಕೈ ನೋವು, ದೇಹದ ಉಷ್ಣಾಂಶ ಒಂದೇ ಬಾರಿಗೆ ಏರಿಕೆಯಾಗುವ ಸಂದರ್ಭಗಳು ಎದುರಾಗುತ್ತವೆ. ಇಂತಹ ಲಕ್ಷಣಗಳನ್ನು ಕಡೆಗಣಿಸುವುದು ಒಳಿತಲ್ಲ. ಸಾಮಾನ್ಯ ಜ್ವರವನ್ನು ಕಡೆಗಣಿಸಿದರೆ ದೇಹಕ್ಕೆ ಇನ್ನಷ್ಟು ಅಪಾಯವನ್ನು ತಂದುಕೊಂಡಂತೆ ಸರಿ. ಆದ್ದರಿಂದ ಜ್ವರ ಬಂದ ಸಂದರ್ಭಗಳಲ್ಲಿ ಈ ರೀತಿ ಸ್ವಯಂ ಕೇರ್ ಮಾಡಿಕೊಳ್ಳಿ. ಸಾಮಾನ್ಯ ಜ್ವರ ಬಂದಾಗ ಯಾವ ಕೆಲಸಗಳನ್ನು ಮಾಡಬಾರದು ಎನ್ನುವ ಬಗ್ಗೆ ತಿಳಿದುಕೊಳ್ಳಿ
ಸ್ನಾನ ಮಾಡಬೇಡಿ
ಜ್ವರ ಬಂದ ಅನುಭವವಾದರೆ ಸ್ನಾನ ಮಾಡುವುದು ಒಳ್ಳೆಯದಲ್ಲ. ಕೆಲವರು ದೇಹಕ್ಕೆ ಆರಾಮದಾಯಕ ಅನುಭವವಾಗಲಿದೆ ಎಂದು ಜ್ವರ ಬಂದ ಲಕ್ಷಣವಿದ್ದರೂ ಸ್ನಾನ ಮಾಡುತ್ತಾರೆ. ಆದರೆ ಅದು ಒಳ್ಳೆಯದಲ್ಲ. ಸ್ನಾನದಿಂದ ಜ್ವರ ತಲೆಗೆ ಏರುವ ಅಪಾಯವಿರುತ್ತದೆ. ಇದರಿಂದ ದೇಹದಲ್ಲಿ ಮತ್ತೊಂದು ಸಮಸ್ಯೆ ಉಲ್ಬಣವಾಗಲು ಕಾರಣವಾಗಬಹುದು. ಹೀಗಾಗಿ ಜ್ವರ ಬಂದಾಗ ಬಿಸಿ ಅಥವಾ ತಣ್ಣನೆಯ ನೀರಿನ ಸ್ನಾನ ಬೇಡ. ಜ್ವರ ಇಳಿದು ಒಂದು ದಿನವಾದ ನಂತರ ಸ್ನಾನ ಮಾಡಿ.
ಮೊಸರಿನ ಸೇವನೆ ಮಾಡಬೇಡಿ
ಜ್ವರ ಬಂದಾಗ ಯಾವುದೇ ತಣ್ಣನೆಯ ಆಹಾರಗಳ ಸೇವನೆ ಬೇಡ. ತಣ್ಣನೆಯ ಮೊಸರಿನ ಸೇವನೆಯಿಂದ ಜ್ವರದ ತಾಪಮಾನ ಹೆಚ್ಚುವ ಸಾಧ್ಯತೆಗಳಿರುತ್ತದೆ. ಜೊತೆಗೆ ಹೊಟ್ಟೆಗೆ ಭಾರ ಎನಿಸುವ ಆಹಾರಗಳನ್ನು ಸೇವಿಸಬೇಡಿ. ಆದಷ್ಟು ಕೆಫಿನ್ ಅಂಶಗಳಿರುವ ಆಹಾರಗಳನ್ನು ಅವೈಡ್ ಮಾಡಿ. ಕೆಫಿನ್ ಅಂಶಗಳಿರುವ ಪದಾರ್ಥಗಳಿದ ದೇಹ ನಿರ್ಜಲೀಕರಣವಾಗುತ್ತದೆ. ಸಾಮಾನ್ಯ ಜ್ವರವೇ ಆದರೂ ದೇಹ ನಿರ್ಜಲೀಕರಣಗೊಂಡಾಗ ತಾಪಮಾನ ಹೆಚ್ಚಲು ಕಾರಣವಾಗಿ ಹೆಚ್ಚಿನ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಮೊಸರು ಸೇರಿದಂತೆ ಕೆಫಿನ್ ಅಂಶಗಳಿರುವ ಅಹಾರಕ್ಕೆ ನೋ ಎನ್ನಿ.
ಹಣ್ಣುಗಳ ಆಯ್ಕೆಯಲ್ಲಿ ಎಚ್ಚರವಿರಲಿ
ಜ್ವರ ಬಂದಾಗ ಆಹಾರ ಸೇವನೆ ಲಘುವಾಗಿರಲಿ. ಬಾಳೆಹಣ್ಣು, ಕಿತ್ತಳೆ, ಕಲ್ಲಂಗಡಿ ಹಣ್ಣುಗಳನ್ನು ಸೇವಿಸಬೇಡಿ. ಅದೇ ರೀತಿ ಹಾಲಿನ ಸೇವನೆಯೂ ಮಿತವಾಗಿರಲಿ. ಏಕೆಂದರೆ ಹಾಲಿನ ಸೇವನೆಯಿಂದ ಕಫ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ಬಾಳೆಹಣ್ಣಿನಿಂದ ದೇಹ ಮತ್ತಷ್ಟು ತಂಪಾಗಿ ಜ್ವರ ಹೆಚ್ಚಾಗಲು ಕಾರಣವಾಗಬಹುದು. ಹೀಗಾಗಿ ಜ್ವರದ ವೇಳೆಯಲ್ಲಿ ಆಹಾರದ ಆಯ್ಕೆ ಬಗ್ಗೆ ಜಾಗೃತೆಯಿರಲಿ
ವ್ಯಾಯಾಮ ಬೇಡ
ಒಮ್ಮೆ ಜ್ವರ ಬಂದರೆ ದೇಹ ಹೆಚ್ಚು ಸುಸ್ತಾಗುತ್ತದೆ. ಆದ್ದರಿಂದ ಮತ್ತೆ ವ್ಯಾಯಾಮ ಬೇಡ. ಇದರಿಂದ ದೇಹ ಮತ್ತಷ್ಟು ದಣಿಯುತ್ತದೆ. ಜ್ವರ ಬಂದಾಗ ವ್ಯಾಯಾಮ ಮಾಡಿದರೆ ಮೈ ಕೈ ನೋವು ಹೆಚ್ಚಾಗಿ ಜ್ವರದ ತೀವ್ರತೆ ಕೂಡ ಅಧಿಕವಾಗುತ್ತದೆ. ಲೈಂಗಿಕ ಸಂಪರ್ಕ ಕೂಡ ಜ್ವರ ಬಂದಾಗ ಒಳ್ಳೆಯದಲ್ಲ. ಬದಲಾಗಿ ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸಿ. ಗಂಜಿ, ಅರಿಶಿನ ಹಾಕಿದ ಹಾಲು, ಎಳನೀರಿನಂತಹ ಆಹಾರ ಹೆಚ್ಚು ಅದ್ಯತೆಯಾಗಿರಲಿ. ಇದರಿಂದ ಜ್ವರ ಬೇಗನೆ ಗುಣವಾಗುತ್ತದೆ. ದೇಹದಲ್ಲಿ ಶಕ್ತಿಯೂ ಬಲವಾಗುತ್ತದೆ.
ಗಾಳಿಯಲ್ಲಿ ಹೆಚ್ಚು ತಿರುಗಾಡಬೇಡಿ
ಜ್ವರ ಬಂದಾಗ ದೇಹ ಸೂಕ್ಷ್ಮವಾಗಿರುತ್ತದೆ. ದೇಹದಲ್ಲಿ ವೈರಸ್ ಹೆಚ್ಚು ಬಲಶಾಲಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗಾಳಿಯಲ್ಲಿ ತಿರುಗಾಡಿದರೆ ಸೋಂಕು ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಜೊತೆಗೆ ತಂಪಗಿನ ಗಾಳಿಯಿಂದ ದೇಹದ ಆರೋಗ್ಯ ಇನ್ನಷ್ಟು ಹದಗೆಡಬಹುದು. ಆದ್ದರಿಂದ ಜ್ವರ ಬಂದಾಗ ಸಾಮಾನ್ಯ ಜ್ವರವೇ ಆದರೂ ಕಡೆಗಣಿಸುವುದು ಒಳಿತಲ್ಲ. ಪರಿಸ್ಥಿತಿ ಕೈಮೀರಿದ ಮೇಲೆ ಚಿಕಿತ್ಸೆಗಾಗಿ ಹುಡುಕಾಡುವುದಕ್ಕಿಂತ ಆರಂಭಿಕ ಲಕ್ಷಣಗಳಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದು ಒಳಿತು.
Dont Do These Thing While Normal Fever.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm