ಬ್ರೇಕಿಂಗ್ ನ್ಯೂಸ್
14-05-22 08:03 pm Source: Vijayakarnataka ಡಾಕ್ಟರ್ಸ್ ನೋಟ್
ಇತ್ತೀಚೆಗೆ ಬಹುತೇಕ ಜನರಿಗೆ ಬಿಪಿ, ಬೊಜ್ಜು ಮತ್ತು ಶುಗರ್ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಕಾರಣಗಳು ನೋಡುವುದಾದರೆ ಕೆಲವರು ಅನಾರೋಗ್ಯಕಾರಿ ಆಹಾರ ಪದ್ಧತಿ ಅನುಸರಿ ಸುತ್ತಿದ್ದರೆ, ಇನ್ನು ಕೆಲವರು ತಮ್ಮ ದೈನಂದಿನ ವ್ಯಾಯಾಮ ಮತ್ತು ವಾಕಿಂಗ್ ಮಾಡುವುದನ್ನು ಬಿಟ್ಟಿರುವುದರಿಂದ, ಇಂತಹ ದೀರ್ಘಕಾಲದ ಕಾಯಿಲೆಗಳಾದ ಕಾಯಿಲೆಗಳಿಗೆ ಗುರಿಯಾಗಿ ಬಿಟ್ಟಿದ್ದಾರೆ.
ಇದರ ಜೊತೆಗೆ ಕೆಟ್ಟ ಜೀವನಶೈಲಿಯಿಂದ ದೇಹದಲ್ಲಿ ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶ ಕೂಡ ಜಾಸ್ತಿಯಾಗಿ, ಪಡಬಾರದ ಕಷ್ಟವನ್ನು ಪಡುತ್ತಿದ್ದಾರೆ. ಹೀಗಾಗಿ ಅರೋಗ್ಯಕಾರಿ ಆಹಾರ ಪದ್ಧತಿಯನ್ನು ಅನು ಸರಿಸಿಕೊಂಡು, ಸರಿಯಾದ ಜೀವನ ಶೈಲಿಯನ್ನು ನಿರ್ವಹಣೆ ಮಾಡಿಕೊಂಡು ಹೋದರೆ, ದೀರ್ಘಾವಧಿಯವರೆಗೆ ಮನುಷ್ಯನಿಗೆ ಯಾವುದೇ ಆರೋಗ್ಯ ತೊಂದರೆ ಎದುರಾಗುವುದಿಲ್ಲ.
ಉದಾಹರಣೆಗೆ ನೋಡುವುದಾದರೆ ದೀರ್ಘಕಾಲದವರೆಗೆ ಕಾಡುವ ಕಾಯಿಲೆಗಳಾದ ಬಿಪಿ, ಮಧುಮೇಹ, ಹೃದಯದ ಸಮಸ್ಯೆ, ದೇಹದ ಬೊಜ್ಜಿನ ಸಮಸ್ಯೆಗಳಿಗೆಲ್ಲಾ ಉತ್ತಮವಾದ ಆಹಾರ ಪದ್ಧತಿ, ಒಳ್ಳೆಯ ವ್ಯಾಯಾಮ, ವೈದ್ಯರು ನೀಡಿರುವ ಔಷಧಿಗಳು, ಸಮಯಕ್ಕೆ ಸರಿಯಾಗಿ ಸೇವನೆ ಮಾಡುತ್ತಾ ಹೋದರೆ, ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡುವುದಿಲ್ಲ. ಬನ್ನಿ ಇಂದಿನ ಲೇಖನದಲ್ಲಿ ದೇಹದ ಸಂಪೂರ್ಣ ಆರೋಗ್ಯ ಸದೃಢ ತೆಗಾಗಿ ಸೇವನೆ ಮಾಡಬೇಕಾದ ಕೆಲವು ಬಗೆಯ ಕಾಳುಗಳನ್ನು ತಿಳಿಸಿಕೊಡಲಾಗಿದೆ, ಅವು ಯಾವುದು ಎಂಬುದನ್ನು ಮುಂದೆ ಓದಿ...
ಚಿಯಾ ಬೀಜಗಳು
ನೋಡಲು ಕಪ್ಪಗೆ ಹಾಗೂ ಸಣ್ಣದಾಗಿ ಕಾಣುವ ಈ ಬೀಜಗಳು, ತನ್ನಲ್ಲಿ ನಾರಿನಂಶದ ಜೊತೆಗೆ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ ಮೊದಲಾದ ಪೌಷ್ಟಿಕ ಸತ್ವಗಳು ಕೂಡ ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.
ಮುಖ್ಯವಾಗಿ ಈ ಬೀಜಗಳಲ್ಲಿ ಕ್ಯಾಲ್ಸಿಯಂನ ಪ್ರಮಾಣ ಹೆಚ್ಚಾಗಿ ಕಂಡುಬರುವುದರಿಂದ, ದೇಹದ ಮೂಳೆಗಳು, ಹಲ್ಲುಗಳ ಆರೋಗ್ಯದ ಸದೃಢತೆಗಾಗಿ ನಾವು ಇವುಗಳನ್ನು ಸೇವನೆ ಮಾಡಬೇಕು
ಇದನ್ನು ಸೇವನೆ ಮಾಡುವ ವಿಧಾನ...
ಒಂದು ಲೋಟ ಸಕ್ಕರೆ ಹಾಕದ ಬಾದಾಮಿ ಹಾಲಿಗೆ, ಸುಮಾರು ಒಂದು ಟೇಬಲ್ ಚಮಚ ಆಗುವಷ್ಟು ಮ್ಯಾಪಲ್ ಸಿರಪ್ ಮತ್ತು ಚಿಟಿಕೆಯಷ್ಟು ದಾಲ್ಚಿನ್ನಿಯನ್ನು ಪುಡಿ ಮಾಡಿ ಬೆರೆಸಿದ ಪಾನೀಯದಲ್ಲಿ, ಒಂದು ಚಮಚ ಆಗುವಷ್ಟು ಚಿಯಾ ಬೀಜಗಳನ್ನು ಹಾಕಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
ಕುಂಬಳಕಾಯಿ ಬೀಜಗಳು
ಹೃದಯದ ಅತ್ಯುತ್ತಮ ಆರೋಗ್ಯಕ್ಕೆ ಎಳ್ಳು
ಫ್ಲಾಕ್ಸ್ ಬೀಜಗಳು
ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಫ್ಲಾಕ್ಸ್ ಬೀಜಗಳಲ್ಲಿ ಅಥವಾ ಫ್ಲಾಕ್ಸ್ ಸೀಡ್ಸ್‌ಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಕ್ಯಾನ್ಸರ್ ಸಮಸ್ಯೆಯನ್ನು ನಿಯಂತ್ರಣ ಮಾಡುವ ಎಲ್ಲಾ ಪವರ್ ಈ ಬೀಜಗಳಲ್ಲಿ ಇರುತ್ತದೆ! ಅಲ್ಲದೆ ಫ್ರೀ ರಾಡಿಕಲ್ ಅಂಶಗಳು, ನಮ್ಮ ಆರೋಗ್ಯ ಕ್ಕೆ ಯಾವುದೇ ರೀತಿಯ ಹಾನಿ ಮಾಡದಂತೆ ನೋಡಿಕೊಳ್ಳುವ ಈ ಬೀಜಗಳು, ದೇಹದ ಉರಿಯೂತದ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.
ಹೆಂಪ್ ಕಾಳುಗಳು
ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಈ ಕಾಳುಗಳು ಬಹಳ ಒಳ್ಳೆಯದು. ಮಿತವಾಗಿ ಈ ಕಾಳುಗಳನ್ನು ಸೇವಿಸು ವುದರಿಂದ ದೇಹದ ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು, ಜೊತೆಗೆ ಮಾಂಸಖಂಡಗಳ ಶಕ್ತಿಯನ್ನು ಕೂಡ ವೃದ್ಧಿಸಿಕೊಳ್ಳಬಹುದು. ಮುಖ್ಯವಾಗಿ ವ್ಯಾಯಾಮ ಮಾಡಿದ ಬಳಿಕ, ಈ ಕಾಳುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಒಳ್ಳೆಯದು.
These Are The Extremely Healthy Seeds You Must Include In Your Diet.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm