ಬ್ರೇಕಿಂಗ್ ನ್ಯೂಸ್
12-10-22 10:32 pm HK News Desk ಕ್ರೈಂ
ಕೊಚ್ಚಿ, ಅ.12: ಕೇರಳದ ನರಬಲಿ ಕೃತ್ಯದಲ್ಲಿ ಪೊಲೀಸರು ಬೆಚ್ಚಿಬೀಳಿಸುವ ವಿಚಾರಗಳನ್ನು ಹೊರಗೆಡವಿದ್ದಾರೆ. ಒಟ್ಟು ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಎನ್ನಲಾಗಿರುವ ಮಹಮ್ಮದ್ ಶಫಿ, ಮಹಿಳೆಯರನ್ನು ಪೋರ್ನ್ ವಿಡಿಯೋದಲ್ಲಿ ನಟಿಸುವುದಕ್ಕಾಗಿ ದಂಪತಿ ಮನೆಗೆ ಕರೆತಂದಿದ್ದ. ಅದಕ್ಕಾಗಿ ದೊಡ್ಡ ಮೊತ್ತದ ಹಣ ನೀಡುವುದಾಗಿ ಆಮಿಷವನ್ನೂ ಒಡ್ಡಿದ್ದ ಎನ್ನುವ ವಿಚಾರ ಪತ್ತೆಯಾಗಿದೆ.
ಪ್ರಕರಣದ ತನಿಖೆಗೆ ಕೊಚ್ಚಿ ಪೊಲೀಸ್ ಕಮಿಷನರ್ ನಾಗರಾಜು ಚಕ್ಕಿಲಂ ವಿಶೇಷ ತಂಡವನ್ನು ರಚಿಸಿದ್ದಾರೆ. ಜೂನ್ ನಲ್ಲಿ ಪರಿಚಯ ಆಗಿದ್ದ ರೋಸ್ಲಿನ್ ಳನ್ನು ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಹೇಳಿ, ಬ್ಲೂಫಿಲಂ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ ದಂಪತಿ ಮನೆಗೆ ಕರೆತರಲಾಗಿತ್ತು. ರೋಸ್ಲಿನ್ ಮನೆಗೆ ತಲುಪುತ್ತಲೇ ಕೆಲ ಹೊತ್ತಿನಲ್ಲಿ ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ಕೇಳಿದಾಗ, ಅದು ಪೋರ್ನ್ ವಿಡಿಯೋದಲ್ಲಿ ಕೈಕಾಲು ಕಟ್ಟಿ ಹಾಕುವ ಸನ್ನಿವೇಶ ಇದೆಯೆಂದು ಹೇಳಿ ನಂಬಿಸಿದ್ದರು.
ಆಕೆಯನ್ನು ಬೆಡ್ಡಿನಲ್ಲಿ ಮಲಗಿಸಿ, ಆರೋಪಿಗಳಲ್ಲಿ ಒಬ್ಬಳಾದ ಲೈಲಾ ತಲೆಗೆ ಮಚ್ಚಿನಲ್ಲಿ ಹೊಡೆದಿದ್ದಳು. ಆನಂತರ, ಆಕೆಯ ಗುಪ್ತಾಂಗಕ್ಕೆ ಮಹಮ್ಮದ್ ಶಫಿ ಚೂರಿಯಿಂದ ಇರಿದಿದ್ದ. ಕೆಲಕಾಲ ಚಿತ್ರಹಿಂಸೆ ಕೊಟ್ಟು ಬಳಿಕ ಕುತ್ತಿಗೆಯನ್ನು ಸೀಳಿ ರಕ್ತವನ್ನು ಚೆಲ್ಲಿದ್ದ. ಭಗವಾಲ್ ಸಿಂಗ್, ಲೈಲಾ ಮತ್ತು ಮಹಮ್ಮದ್ ಶಫಿ ಮೂವರೂ ಸೇರಿ ಕೃತ್ಯ ಎಸಗಿದ್ದರು. ಭಗವಾಲ್ ಸಿಂಗ್, ರೋಸ್ಲಿನ್ ಎದೆಯನ್ನು ಸೀಳಿ ಸ್ತನವನ್ನು ಕೊಯ್ದು ಪ್ರತ್ಯೇಕವಾಗಿ ತೆಗೆದಿಟ್ಟಿದ್ದ. ಬಳಿಕ ಇಡೀ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೂವರೂ ಸೇರಿ, ಮನೆ ಹಿಂಬದಿ ಹೊಂಡ ತೋಡಿ ಹೂತು ಹಾಕಿದ್ದರು. ಸ್ತನದ ಭಾಗವನ್ನೇ ಬಳಿಕ ಬೇಯಿಸಿ ತಿಂದಿದ್ದರು ಎನ್ನಲಾಗುತ್ತಿದೆ.
ಇನ್ನೊಬ್ಬ ಮಹಿಳೆ ಪದ್ಮಾಳನ್ನೂ ಅದೇ ರೀತಿ ಪೋರ್ನ್ ವಿಡಿಯೋ ಮಾಡುವುದಾಗಿ ಹೇಳಿ, ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಶಫಿ ಕರೆತಂದಿದ್ದ. ಸೆ.26ರಂದು ಪದ್ಮಾಳನ್ನು ಕಾರಿನಲ್ಲಿ ಶಫಿ ಕರೆದೊಯ್ದಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಪೊಲೀಸರು ಅದೇ ಕ್ಲೂ ಇಟ್ಟುಕೊಂಡು ತನಿಖೆ ನಡೆಸಿದ್ದರು. ಮೊದಲಿಗೆ, 15 ಸಾವಿರ ಹಣ ಕೊಡುವುದಾಗಿ ಶಫಿ ಹೇಳಿದ್ದರಿಂದ ಪದ್ಮಾ ದಂಪತಿಯ ಮನೆ ಮುಟ್ಟುತ್ತಲೇ ತನಗೆ ಹಣ ಕೊಡುವಂತೆ ಪೀಡಿಸಿದ್ದಳು. ಮಾತಿಗೆ ಮಾತು ಬೆಳೆಯುತ್ತಿದ್ದಾಗಲೇ ಒಬ್ಬಾತ ಹಗ್ಗ ತೆಗೆದುಕೊಂಡು ಬಂದು ಪದ್ಮಾಳ ಕುತ್ತಿಗೆಯನ್ನು ಬಿಗಿದಿದ್ದಾನೆ. ಮಹಿಳೆ ಅರೆ ಜೀವ ಇರುವಾಗಲೇ ಬೆಡ್ ರೂಮಿಗೆ ಕರೆದೊಯ್ದು ಶಫಿ ಚೂರಿಯಿಂದ ಆಕೆಯ ಗುಪ್ತಾಂಗಕ್ಕೆ ಇರಿದು ವಿಕೃತ ಸಂತಸಪಟ್ಟಿದ್ದ. ಬಳಿಕ ಕುತ್ತಿಗೆ ಸೀಳಿ ಮಹಿಳೆಯನ್ನು ಕೊಲ್ಲಲಾಗಿತ್ತು. ಕೊನೆಗೆ, ಮೂವರೂ ಸೇರಿಕೊಂಡು ಆಕೆಯ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿದ್ದರು. ಕೊನೆಯದಾಗಿ ಎರಡು ಗುಂಡಿಗಳನ್ನು ತೋಡಿ ದೇಹದ ತುಂಡುಗಳನ್ನು ಸಮಾಧಿ ಮಾಡಿದ್ದರು.
ಕೊಚ್ಚಿ ಸಿಟಿ ಪೊಲೀಸ್ ಕಮಿಷನರ್ ನಾಗರಾಜು ಚಕ್ಕಿಲಮ್ ಬುಧವಾರ ಸುದ್ದಿಗೋಷ್ಟಿ ನಡೆಸಿ, ಹೇಯ ಕೃತ್ಯದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಹಮ್ಮದ್ ಶಫಿಯೇ ಪ್ರಮುಖ ಆರೋಪಿಯಾಗಿದ್ದು ದಂಪತಿಯನ್ನು ಸಂಪತ್ತು ವೃದ್ಧಿಗಾಗಿ ನರಬಲಿ ಕೊಡುವಂತೆ ಪ್ರೇರೇಪಿಸಿದ್ದ ಎಂದು ತಿಳಿಸಿದ್ದಾರೆ. ಡಿಎನ್ಎ ಟೆಸ್ಟ್ ಇನ್ನಿತರ ವೈಜ್ಞಾನಿಕ ಸಾಕ್ಷ್ಯಗಳ ಪತ್ತೆಗಾಗಿ ಒಟ್ಟು ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
When the Kadavanthra police station in Kochi city, on September 27, received a complaint from a woman about her 52-year-old sister, Padmam, having gone missing a day before, it appeared to be a routine case. The police tried to reach Padmam, a resident of Kochi’s Elamkulam locality, on her mobile phone but it was switched off.Padmam, originally from Dharmapuri district in Tamil Nadu, had been living in Kochi for the past 15 years and sold lottery tickets for a living. The police complaint was filed by her sister Palaniamam after she and Padmam’s two sons found her to be missing and inaccessible on her mobile phone.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm