ಬ್ರೇಕಿಂಗ್ ನ್ಯೂಸ್
01-12-22 05:44 pm HK News Desk ಕ್ರೈಂ
ಮುಂಬೈ, ಡಿ.1: ಕೊರಿಯಾ ಮೂಲದ ಯೂಟ್ಯೂಬರ್ ಯುವತಿಯ ಮೇಲೆ ಮುಂಬೈನಲ್ಲಿ ಇಬ್ಬರು ಯುವಕರು ಚುಡಾಯಿಸಿದ್ದಲ್ಲದೆ, ಕೈ ಎಳೆದು ಮುತ್ತಿಕ್ಕುವ ಯತ್ನ ಮಾಡಿದ್ದಾರೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮುಂಬೈನ ಖಾರ್ ಏರಿಯಾದಲ್ಲಿ ಘಟನೆ ನಡೆದಿದ್ದು, ಕೊರಿಯನ್ ಯುವತಿ ಯೂಟ್ಯೂಬಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಆಕೆಯನ್ನು ಫಾಲೋ ಮಾಡುತ್ತಿದ್ದರು. ದೇಶ- ವಿದೇಶ ಒಬ್ಬಂಟಿಯಾಗಿ ಸುತ್ತುತ್ತಾ ಬೀದಿಗಳನ್ನು ಲೈವ್ ಆಗಿ ತೋರಿಸುವ ಹವ್ಯಾಸ ಹೊಂದಿರುವ ಯುವತಿ ಮುಂಬೈಗೆ ಆಗಮಿಸಿದ್ದಾಗ ಕೆಟ್ಟ ಅನುಭವ ಆಗಿದೆ.
ಮಂಗಳವಾರ ರಾತ್ರಿ ಆಕೆ ಲೈವ್ ನಲ್ಲಿ ಇದ್ದಾಗಲೇ ಸ್ಕೂಟರಿನಲ್ಲಿ ಬಂದಿದ್ದ ಇಬ್ಬರು ಆಕೆಯನ್ನು ಜೊತೆಗೆ ಬರುವಂತೆ ಹೇಳಿದ್ದಾರೆ. ರಾತ್ರಿ 11.30 ಆಗಿದ್ದರಿಂದ ಯುವಕರು ಒಬ್ಬಂಟಿ ಯುವತಿಯ ಜೊತೆ ಅತಿರೇಕವಾಗಿ ವರ್ತಿಸಿದ್ದಾರೆ. ಒಬ್ಬಾತ ಯುವಕ ಈಕೆ ಲೈವಲ್ಲಿದ್ದಾಳೆಂದು ತಿಳಿದಿದ್ದರೂ, ಕೈ ಹಿಡಿದಿಳೆದು ಮುತ್ತಿಕ್ಕುವ ಯತ್ನ ಮಾಡಿದ್ದಾನೆ. ಆಕೆಯ ಮೊಬೈಲ್ ನಂಬರನ್ನು ಕೇಳಿದ್ದಾನೆ. ನಿನ್ನ ಹೊಟೇಲ್ ರೂಮ್ ಎಲ್ಲಿದೆ ಹೇಳು ಎಂದು ರಸ್ತೆಯಲ್ಲಿ ಅಡ್ಡ ಹಾಕಿದ್ದಾರೆ. ಇವೆಲ್ಲವೂ ಆಕೆಯ ಲೈವ್ ಸ್ಟ್ರೀಮ್ ನಲ್ಲಿ ರೆಕಾರ್ಡ್ ಆಗಿತ್ತು. ಅದನ್ನು ನೋಡಿದ ಜಾಲತಾಣ ಬಳಕೆದಾರರು ವಿಡಿಯೋವನ್ನು ಕತ್ತರಿಸಿ ಟ್ವಿಟರ್ ನಲ್ಲಿ ಹಾಕಿ, ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕೆ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರೂ, ಯುವಕರು ಅರೆಬರೆ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ಈ ರೀತಿಯ ವರ್ತನೆ ಜಗತ್ತಿನಲ್ಲಿ ಭಾರತದ ಬಗ್ಗೆ ಕೆಟ್ಟ ಭಾವನೆ ಮೂಡುವಂತಾಗಿದೆ ಎಂದು ನೆಟ್ಟಿಗರು ಟ್ವಿಟರ್ ನಲ್ಲಿ ಬರೆದಿದ್ದಾರೆ. ತನ್ನನ್ನು ಹಿಂಬಾಲಿಸುತ್ತಾ ಇಬ್ಬರು ಯುವಕರು ಬಂದಿದ್ದರು. ಆದರೆ ನನ್ನ ಲೈವ್ ನೋಡುತ್ತಿದ್ದ ಯಾರೋ ಒಬ್ಬರು ಸ್ಥಳಕ್ಕೆ ಬಂದು ನನ್ನನ್ನು ಬಚಾವ್ ಮಾಡಿದರು ಎಂದು ಯುವತಿ ಇಂಡಿಯಾ ಟುಡೇಗೆ ಮಾಹಿತಿ ನೀಡಿದ್ದಾಳೆ.
देश में अपराधियों के हौसले बहुत बढ़ गए हैं!
— Swati Maliwal (@SwatiJaiHind) December 1, 2022
कितने दुःख की बात है कि एक विदेशी लड़की मुंबई की सड़क पे विडीओ बना रही थी और उसके साथ लड़कों ने यौन शोषण किया! इन लड़कों के अपराध के कारण पूरा देश आज शर्मिंदा है। CM एकनाथ शिंडे जी से अपील है इस केस में कड़ी कार्यवाही करें। pic.twitter.com/mIB3k9peDi
The Korean woman YouTuber, who was harassed on the streets of Mumbai during her live stream on Tuesday, recounted the horror and narrated how she escaped the accused. In an exclusive interview to India Today, the woman said, "I was followed by the accused to the hotel and when they asked for my mobile number, I gave them a fake one to escape the situation."
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm