ಬ್ರೇಕಿಂಗ್ ನ್ಯೂಸ್
25-02-23 09:11 pm HK News Desk ಕ್ರೈಂ
ಇಂದೋರ್, ಫೆ.25 : ತನ್ನನ್ನು ಪಾಸ್ ಮಾಡಿಲ್ಲ, ಅಂಕಪಟ್ಟಿ ನೀಡಿಲ್ಲ ಎಂಬ ಸಿಟ್ಟಿನಲ್ಲಿ ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಫೆಬ್ರವರಿ 20 ರಂದು ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಮುಕ್ತಾ ಶರ್ಮಾ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ 2022ರ ಬ್ಯಾಚಿನ ಮಾಜಿ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ (24) ಬಕೆಟ್ ನಲ್ಲಿ ಪೆಟ್ರೋಲ್ ಸುರಿದಿದ್ದು ಸಿಗರ್ ಲೈಟರ್ ಎಸೆದು ಬೆಂಕಿ ಹಚ್ಚಿದ್ದ. ವಿಮುಕ್ತಾ ಶರ್ಮಾ ದೇಹ ಶೇ. 90ರಷ್ಟು ಸುಟ್ಟು ಹೋಗಿದ್ದರೆ, ಆರೋಪಿಯ ದೇಹಕ್ಕೂ ಸುಟ್ಟ ಗಾಯಗಳಾಗಿದ್ದವು. ಕೂಡಲೇ ಅವರನ್ನು ಇಂದೋರಿನ ಚೋಯಿತ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ವಿಮುಕ್ತಾ ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಆಶುತೋಷ್ ಶ್ರೀವಾಸ್ತವ ಕಳೆದ ಸಾಲಿನ ವಿದ್ಯಾರ್ಥಿಯಾಗಿದ್ದು ಏಳನೇ ಸೆಮಿಸ್ಟರ್ ನಲ್ಲಿ ಫೈಲ್ ಆಗಿದ್ದ. ತನ್ನನ್ನು ಬೇಕೆಂದೇ ಫೇಲ್ ಮಾಡಿದ್ದಾರೆಂದು ಕಾಲೇಜಿನ ಇತರೇ ಉಪನ್ಯಾಸಕರಿಗೂ ಹಲ್ಲೆ ಮಾಡಿದ್ದ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಕಾಲೇಜು ಸಿಬಂದಿ ದೂರನ್ನೂ ಕೊಟ್ಟಿದ್ದರು. ಒಬ್ಬ ಸಿಬಂದಿಗೆ ಚೂರಿ ಇರಿತವನ್ನೂ ಮಾಡಿದ್ದ. ಆದರೆ ಆರೋಪಿ ವಿರುದ್ಧ ಪೊಲೀಸರು ಕ್ರಮ ಜರುಗಿಸಿರಲಿಲ್ಲ. ಆತ ಪ್ರಭಾವಿ ಎನ್ನುವ ಕಾರಣಕ್ಕೆ ನಿರ್ಲಕ್ಷ್ಯ ವಹಿಸಿದ್ದರು.
ಇದೀಗ ಅದೇ ಆರೋಪಿ ಕಾಲೇಜು ಪ್ರಿನ್ಸಿಪಾಲ್ ಮೇಲೆಯೇ ಬೆಂಕಿ ಹಚ್ಚಿ ಕೊಂದು ಹಾಕಿದ್ದಾನೆ. ಇದರ ಬೆನ್ನಲ್ಲೇ ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ಸಿಮ್ರೋಲ್ ಠಾಣೆಯ ಎಎಸ್ಐ ಒಬ್ಬರನ್ನು ಐಜಿಪಿ ರಾಕೇಶ್ ಗುಪ್ತಾ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸು ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ. ಪ್ರಾಂಶುಪಾಲೆಯ ಕುಟುಂಬಸ್ಥರು ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಆರೋಪ ಮಾಡಿದ್ದಾರೆ.
Principal of a private Pharma college, who was set on fire by a former student succumbed to injuries on Saturday morning. The shocking incident took place last week when the accused, Ashutosh Shrivastava, 24, allegedly poured petrol and set the principal on fire over a delay in receiving his B. Pharma marksheet.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 08:56 pm
Mangalore Correspondent
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
Mangalore, Dharmasthala Case, SIT, whistle bl...
26-07-25 10:05 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm