ಬ್ರೇಕಿಂಗ್ ನ್ಯೂಸ್
09-07-23 05:31 pm H K News Desk ಕ್ರೈಂ
ಬೆಳಗಾವಿ, ಜುಲೈ 9: ಜೈನಮುನಿ ಕೊಲೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಜೈನ ಮುನಿಗಳ ಮೃತದೇಹವನ್ನು ರಾಯಭಾಗ ತಾಲೂಕಿನ ಖಟಕಬಾವಿ ಗ್ರಾಮದ ತೋಟದಲ್ಲಿ ತುಂಡು ತುಂಡು ಮಾಡಿ ಹಾಳು ಕೊಳವೆಬಾವಿಗೆ ಹಾಕಿದ್ದನ್ನು ಪತ್ತೆ ಮಾಡಲಾಗಿತ್ತು. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಇವರ ಜೊತೆಗೆ ಬೇರೆಯವರ ಕೈವಾಡ ಇದೆಯಾ ಅನ್ನುವ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಎಸ್ಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಮುನಿಗಳ ಕೊಲೆ ವಿಚಾರ ತಿಳಿಯುತ್ತಲೇ ತೀವ್ರ ಮಳೆಯ ನಡುವೆಯೂ ಸುಮಾರು 20 ಅಡಿ ಆಳದ ವರೆಗೆ ಕೊಳವೆ ಬಾವಿ ಗುಂಡಿಯನ್ನು ಅಗೆದು ಸ್ವಾಮೀಜಿ ಮೃತದೇಹದ ತುಣುಕುಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಬಟ್ಟೆಯಲ್ಲಿ ಕಟ್ಟಿ ಕೊಳವೆ ಬಾವಿಗೆ ಸುರಿಯಲಾಗಿತ್ತು. ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮುನಿಗಳ ಮೃತದೇಹವನ್ನು ಆಶ್ರಮಕ್ಕೆ ಬಿಟ್ಟುಕೊಡಲಾಗಿತ್ತು.
ಕಳೆದ ಬುಧವಾರ ಹಿರೇಕೊಡಿಯ ನಂದಿಪರ್ವತದ ಜೈನ ಆಶ್ರಮದಲ್ಲಿ ವಾಸವಿದ್ದ ಕಾಮಕುಮಾರ ನಂದಿ ಮಹಾರಾಜರನ್ನು ಆರೋಪಿ, ಆಶ್ರಮದ ಕೆಲಸಗಾರ ನಾರಾಯಣ ಮಾಳಿ ಎಂಬಾತ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದ. ನಂತರ ಮೃತದೇಹವನ್ನು ಎಲ್ಲಿ ಎಸೆಯುವುದು ಎಂಬ ಪ್ರಶ್ನೆ ಮೂಡಿದಾಗ ಪ್ರಕರಣದ ಎರಡನೇ ಆರೋಪಿ ಹಸನ್ ಡಲಾಯತ್ ಎಂಬಾತನ ಸಹಾಯ ಕೇಳಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಂದ್ವ ಹೇಳಿಕೆ ನೀಡುತ್ತಿದ್ದ ಸ್ವಾಮೀಜಿ ಆಪ್ತ ನಾರಾಯಣ ಮಾಳಿ ಎಂಬಾತನನ್ನು ವಿಚಾರಣೆ ನಡೆಸಿದ್ದಾಗ ಸನ್ಯಾಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಘಟನೆ ತಿಳಿಯುತ್ತಿದ್ದಂತೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಮುನಿಗಳ ಮೃತದೇಹ ಪತ್ತೆ ಹಚ್ಚುವವರೆಗೂ ಮಂದೆ ನಿಂತು ಪರಿಸ್ಥಿತಿ ನಿಭಾಯಿಸಿದರು.
ಸೌಮ್ಯ ಸ್ವಭಾವದ ಕಾಮಕುಮಾರ ನಂದಿ ಮಹಾರಾಜರು ಪೂರ್ವಾಶ್ರಮ ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದಲ್ಲಿ ಜನಿಸಿದ್ದರು. ಸಣ್ಣ ವಯಸ್ಸಿನಲ್ಲೇ ಆಧ್ಯಾತ್ಮದತ್ತ ಹೆಚ್ಚಿನ ಒಲವು ಹೊಂದಿದ್ದರು. ಜೈನ ಸಂಪ್ರದಾಯದ ಪೂಜ್ಯರ ಜೊತೆ ಒಡನಾಟ ಗಳಿಸಿದ್ದು ಆನಂತರ ಸನ್ಯಾಸ ದೀಕ್ಷೆ ಪಡೆದು ಧರ್ಮದ ಕೆಲಸ ಮುಂದುವರಿಸಿದ್ದರು. ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ನಂದಿ ಪರ್ವತ ಜೈನ ಆಶ್ರಮದ ಪೂಜ್ಯರಾಗಿ ತಮ್ಮ ದಿನ ಕಳೆಯುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಪಂಚಕಲ್ಯಾಣ ಮಹೋತ್ಸವ ನೆರವೇರಿಸಿದ್ದ ಇವರು ಆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದಿದ್ದರು
The search for the missing Jain monk in Belagavi district ended on Saturday with the shocking revelation of his murder and recovery of his body parts from an open defunct borewell in a field at Katakabavi in Raibag taluk of the district.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm