ಬ್ರೇಕಿಂಗ್ ನ್ಯೂಸ್
25-09-25 09:58 am Mangalore Correspondent ಕರಾವಳಿ
ಮಂಗಳೂರು, ಸೆ.25 : ಮಂಗಳೂರಿನಲ್ಲಿ ಅತಿ ದೊಡ್ಡ ಟೆಕ್ ಪಾರ್ಕ್ ನಿರ್ಮಾಣದ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿದೆ. ಈಗಾಗಲೇ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿದ್ದರೆ, ಮಂಗಳೂರಿನಲ್ಲಿ ಟೆಕ್ ಪಾರ್ಕ್ ಸಾಧ್ಯವಾದರೆ ಸಿಲಿಕಾನ್ ಬೀಚ್ ಎಂಬ ಹೆಸರೂ ಬರಲಿದ್ದು ಬೆಂಗಳೂರನ್ನು ಮೀರಿ ನಿಲ್ಲಬಹುದು. ಇದರ ಅನುಮೋದನೆಗಾಗಿ ಮುಂದಿನ ವಾರ ಸಚಿವ ಸಂಪುಟ ಮುಂದಿಟ್ಟು ಚರ್ಚೆ ನಡೆಸಲಾಗುವುದು ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಟಿಎಂಎ ಪೈ ಕನ್ವೆನೈನ್ ಸೆಂಟರ್ ನಲ್ಲಿ ಬುಧವಾರ ನಡೆದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಐದನೇ ಆವೃತ್ತಿ 'ಟೆಕ್ನೋವಾಂಜಾ -2025' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಂಗಳೂರಿನಲ್ಲಿ ಕಿಯೋನಿಕ್ಸ್ ಅಧೀನದ 3.25 ಎಕರೆ ಭೂಮಿಯಲ್ಲಿ ಟೆಕ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡ ಮತ್ತು 3,500 ಕೋಟಿ ರೂ.ಗಳ ಮೂಲ ಸೌಕರ್ಯದೊಂದಿಗೆ ಟೆಕ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಐದು ವರ್ಷದೊಳಗೆ ಮಂಗಳೂರನ್ನು ಐಟಿ ಕ್ಷೇತ್ರದಲ್ಲಿ ಮತ್ತೊಂದು ಬೆಂಗಳೂರು ಆಗಿ ರೂಪಿಸಲು ಪ್ರಯತ್ನಿಸಲಾಗುವುದು. ಮಂಗಳೂರಿನ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಇದೇ ವೇಳೆ, ಕೇಂದ್ರ ಸರಕಾರದ ವೀಕ್ಷಿತ್ ಭಾರತ್, ಮೇಕ್ ಇನ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳಿಗೆ ರಾಜ್ಯದ ಕಡೆಯಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಿದ್ದು, ರಾಜ್ಯದ ಸಂಸದರು ಈ ಬಗ್ಗೆ ಕಾರ್ಯ ಪ್ರವೃತ್ತರಾಗುವಂತೆ ಮನವಿ ಮಾಡಿದರು.
ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳ ನೀತಿ ಮಹಾತ್ವಾಕಾಂಕ್ಷೆಯಿಂದ ಕೂಡಿದ್ದು, 2029ರೊಳಗೆ ರಾಜ್ಯದಲ್ಲಿ ಬೆಂಗಳೂರು ಹೊರತಾಗಿ 500 ಹೊಸ ಕ್ಲಸ್ಟರ್ ಗಳನ್ನು ಆಕರ್ಷಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಈ ಮೂಲಕ 3.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯಿದ್ದು, ಇದಕ್ಕಾಗಿ ಮುಂದಿನ ತಿಂಗಳು ಸರಕಾರವು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ನೀತಿಯನ್ನು ರೂಪಿಸಲಿದೆ ಎಂದವರು ಹೇಳಿದರು.
ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಯುವ ಉದ್ಯಮಿಗಳ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನದಾಸ್ ಪೈ ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಗಳನ್ನು ಪೋಷಿಸಲು ಮತ್ತು ರಾಜ್ಯವನ್ನು ಎಐ ಹಬ್ ಆಗಿಸಲು 'ಎಲಿವೇಟ್ ಎಐ 100 ಕಾರ್ಯಕ್ರಮ'ದ ಅಗತ್ಯತೆ ಬಗ್ಗೆ ತಿಳಿಸಿದರು. ನವೆಂಬರ್ 18 ರಿಂದ 20ರ ವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ 2025 ನಲ್ಲಿ ಈ ವಿಚಾರವನ್ನು ಚರ್ಚಿಸಲಾಗುವುದು ಎಂದು ಹೇಳಿದರು. 'ಎಐ ಎಲಿವೇಟ್ 100'ಗಾಗಿ ನಾನು 5 ಕೋಟಿ ರೂ.ಗಳ ಪ್ರತಿಜ್ಞೆ ಮಾಡಲು ಸಿದ್ಧ. ದೇಶದ ಇತರ ಉದ್ಯಮ ಸಂಸ್ಥೆಗಳು ಮುಂಬರುವ ಸಭೆಯಲ್ಲಿ ಭಾಗವಹಿಸಿ ತಲಾ 5 ಕೋಟಿ ರೂ.ಗಳ ವಾಗ್ದಾನ ಮಾಡುವುದನ್ನು ಖಾತರಿಪಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು, ಕೇಂದ್ರ ಸರಕಾರದಿಂದ ಕರ್ನಾಟಕದಲ್ಲಿ ಗಿಫ್ಟ್ ಸಿಟಿ ಘೋಷಣೆಗೆ ಪ್ರಯತ್ನಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕದಿಂದ ಈಗಾಗಲೇ ಕೇಂದ್ರಕ್ಕೆ ಸಲ್ಲಿಕೆಯಾದ ಬೇಡಿಕೆ ತಿರಸ್ಕರಿಸಲ್ಪಟ್ಟಿದೆ. ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಹಬ್ ನೀಡಲು ಸಾಧ್ಯ ಎಂದು ಹೇಳಿ ಅದನ್ನು ಗುಜರಾತ್ ಗೆ ಮಾನ್ಯ ಮಾಡಲಾಗಿದೆ. ಆದರೆ, ಯುವ ಸಂಸದ ಬ್ರಿಜೇಶ್ ಚೌಟರಂತವರು ಈ ಬಗ್ಗೆ ಕೇಂದ್ರದ ಮನವೊಲಿಸಿದರೆ ಸಾಧ್ಯವಾಗಬಹುದು. ಕರ್ನಾಟಕದ ಎಲ್ಲಾ ಸಂಸದರು ಕೇಂದ್ರದ ಹಣಕಾಸು ಸಚಿವರು ಹಾಗೂ ಪ್ರಧಾನಿ ಜೊತೆ ಮಾತನಾಡಿ ಒತ್ತಡ ಹೇರಬೇಕಾಗಿದೆ ಎಂದವರು ಹೇಳಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕೆಡಿಇಎಂ ಮೂಲಕ ರಾಜ್ಯ ಸರಕಾರವು ಟೆಕ್ನೋವಾಂಜಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿರುವುದು ಅಭಿನಂದನೀಯ. ಜಿಲ್ಲೆಯ ಬಂದರು ಸೇರಿದಂತೆ ಸಾಮರ್ಥ್ಯ ಇರುವ ಇತರ ಉದ್ದಿಮೆ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿ, ಅಭಿವೃದ್ಧಿ ದಿಸೆಯಲ್ಲಿ ಜನಪ್ರತಿನಿಧಿಗಳು ಒಂದಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು. ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು, ಬೆಂಗಳೂರಿನ ಎಸ್ಟಿಪಿಐ ಸಂಸ್ಥೆಯ ಸಂಜಯ್ ತ್ಯಾಗಿ ಮಾತನಾಡಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ. ಮಂಜುನಾಥ ಭಂಡಾರಿ, ನಿವೃತ್ತ ಅಧಿಕಾರಿ ಎಲ್.ಕೆ. ಅತೀಕ್ ಮೊದಲಾದವರು ಉಪಸ್ಥಿತರಿದ್ದರು.
The state government is considering a proposal to establish Karnataka’s largest tech park in Mangaluru. While Bengaluru is already known as the “Silicon Valley of India,” Mangaluru could soon earn the title “Silicon Beach” if the project materializes, said State IT Minister Priyank Kharge. The proposal is expected to be placed before the state cabinet for approval next week.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
25-09-25 09:58 am
Mangalore Correspondent
Mangaluru City Corporation: ಮಂಗಳೂರು ಮಹಾನಗರ ಪಾ...
24-09-25 10:48 pm
ಖಾಸಗಿ ಜಮೀನಲ್ಲಿ ಅಕ್ರಮ ಹೆದ್ದಾರಿ ನಿರ್ಮಿಸಿದ್ದ ಪಿಡ...
24-09-25 08:46 pm
Priyank Kharge, Dharmasthala SIT: ಅಕ್ರಮ ಎಷ್ಟೇ...
24-09-25 07:38 pm
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಧ್ವನಿಯಡಗಿಸಿದ್...
24-09-25 06:55 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am