ಬ್ರೇಕಿಂಗ್ ನ್ಯೂಸ್
17-09-21 11:12 pm Headline Karnataka News Network ಕ್ರೈಂ
ಬೆಂಗಳೂರು, ಸೆ. 17 : ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಮಹಾ ಲಸಿಕೆ ಅಭಿಯಾನ ನಡೆಸಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಕೂಡ 31,75,000 ಲಸಿಕೆ ಹಂಚುವ ಗುರಿ ಹೊಂದಿತ್ತು. ಇದೀಗ ದೇಶದ ಇತರೆ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ ಇಡೀ ದೇಶದಲ್ಲಿ ದಿನವೊಂದಕ್ಕೆ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 9 ಗಂಟೆಯ ಅಂಕಿ ಅಂಶ ಪ್ರಕಾರ ಕರ್ನಾಟಕ ಒಟ್ಟು 27.8 ಲಕ್ಷ ಡೋಸ್ ಲಸಿಕೆ ಹಂಚಿಕೆ ಮಾಡಿ ಮುಂಚೂಣಿಯಲ್ಲಿದ್ದ ಉತ್ತರ ಪ್ರದೇಶ ಹಾಗೂ ಬಿಹಾರವನ್ನು ಹಿಂದಿಕ್ಕಿದೆ.
ಲಸಿಕೆ ಹಂಚಿಕೆಯಲ್ಲಿ ದೇಶದಲ್ಲೇ ಕರ್ನಾಟಕ ದಾಖಲೆ: ಇತರೆ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಐತಿಹಾಸಿಕ ರೀತಿಯಲ್ಲಿ ಲಸಿಕೆ ಹಂಚಿಕೆ ಮಾಡಿದೆ ಕರ್ನಾಟಕ. ಲಸಿಕೆ ಮಹಾ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದ ಉತ್ತರ ಪ್ರದೇಶ, ಬಿಹಾರವನ್ನು ಕರ್ನಾಟಕ ಹಿಂದಿಕ್ಕಿದೆ. ಒಂದೇ ದಿನದಲ್ಲಿ 27.8 ಲಕ್ಷ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ. ಉತ್ತರ ಪ್ರದೇಶ ಹಾಗೂ ಬಿಹಾರ ಸರಿಯಾಗಿ 27.8 ಲಕ್ಷ ಡೋಸ್ ಲಸಿಕೆ ಹಂಚಿಕೆ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ 4 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಹಂಚಲಾಗಿದೆ. ಬೆಂಗಳೂರು ಹೊರತಾಗಿ ಬೆಳಗಾವಿ 2.39 ಡೋಸ್, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ 1.33 ಡೋಸ್, ತುಮಕೂರು 1.24 ಡೋಸ್, ಮಂಡ್ಯ 1.15 ಡೋಸ್ ಹಂಚಿಕೆ ಮಾಡಿದೆ. ಶಿವಮೊಗ್ಗ, ಧಾರವಾಡ, ರಾಮನಗರ, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳಲ್ಲಿ ಶೆ. 100 ರಷ್ಟು ಲಸಿಕೆ ನೀಡಿ ಗುರಿ ಮುಟ್ಟುವಲ್ಲಿ ಯಶ ಕಂಡಿದೆ. ಈ ಮೂಲಕ ಸೆಪ್ಟೆಂಬರ್ ನಿಂದ ಈವರೆಗೆ 87 ಲಕ್ಷ ಡೋಸ್ ಲಸಿಕೆ ಹಂಚಿದ ಹೆಗ್ಗಳಿಕೆ ಕರ್ನಾಟಕದ್ದು.ಒಟ್ಟಾರೆ ರಾಜ್ಯದಲ್ಲಿ 5 ಕೋಟಿಗೂ ಅಧಿಕ ಡೋಸ್ ಲಸಿಕೆ ಹಂಚಿಕೆ:
ಈ ಲಸಿಕೆ ಮಹಾ ಅಭಿಯಾನದ ಮೂಲಕ ರಾಜ್ಯ ಸರ್ಕಾರದ ಮಹತ್ವದ ಮೈಲಿಗಲ್ಲು ಸಾಧಿಸಿದೆ. ರಾಜ್ಯದಲ್ಲಿ 5.12 ಕೋಟಿ ಡೋಸ್ ಲಸಿಕೆಯನ್ನು ಹಂಚಿಕೆ ಮಾಡಿದೆ. ಈ ಮೂಲಕ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕ ಅಲ್ಪ ಮಟ್ಟಿನ ಜಿಗಿತ ಸಾಧಿಸಿದೆ. ಇದೇ ಮಾದರಿಯಲ್ಲಿ ಲಸಿಕೆ ಹಂಚಿಕೆಯಾದರೆ ಡಿಸೆಂಬರ್ ಅಂತ್ಯೊದಳಗೆ ಇಡೀ ಕರ್ನಾಟಕದ ಜನತೆ ಲಸಿಕೆ ಹಾಕಿಸಿಕೊಂಡು ಕೊರೋನಾ ಮೂರನೇ ಅಲೆಯ ಹೊಡೆತದಿಂದ ಪಾರಾಗಲಿದೆ.ಒಂದೇ ದಿನಕ್ಕೆ ಇಡೀ ದೇಶದಲ್ಲಿ 2.25 ಕೋಟಿ ಡೋಸ್ ವ್ಯಾಕ್ಸಿನೇಷನ್:
ಅತ್ತ ಸಮರೋಪಾದಿಯಲ್ಲಿ ಎಲ್ಲಾ ರಾಜ್ಯಗಳು ಲಸಿಕೆ ಅಭಿಯಾನದ ನಡೆಸಿರುವ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ದೇಶದಲ್ಲಿ 2.25 ಕೋಟಿ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ 79 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ. ಒಟ್ಟಾರೆ ಬಿಜೆಪಿ ಪ್ರಧಾನಿ ಮೋದಿ ಹುಟ್ಟಿದ ದಿನದಂದು ಭರ್ಜರಿ ಲಸಿಕೆ ಹಂಚಿಕೆಮಾಡಿ ಬೃಹತ್ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದೆ.
With over 27.8 lakh doses of Covid-19 vaccine administered across the state on Friday, Karnataka recorded the most number of Covid vaccinations in a single day since the process commenced on January 16. According to the Department of Health and Family Welfare Services, 88 per cent of the total target set at 31.75 lakh doses was achieved as of 9.30 pm. The ‘mega vaccination drive’ was held across all 30 districts and the BBMP with Chief Minister Basavaraj Bommai announcing Tuesday that the target was to administer 25 to 30 lakh doses.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm