ಬ್ರೇಕಿಂಗ್ ನ್ಯೂಸ್
07-10-21 03:37 pm Headline Karnataka News Network ಕ್ರೈಂ
ಚೆನ್ನೈ, ಅ.7: ಲಂಕಾದಿಂದ ಬಂದು ಅಕ್ರಮವಾಗಿ ಮಂಗಳೂರಿನಲ್ಲಿ ನೆಲೆಸಿದ್ದ 38 ಮಂದಿ ಶ್ರೀಲಂಕಾ ಪ್ರಜೆಗಳ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಲಂಕನ್ನರ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ತಮಿಳುನಾಡಿನ ಆರು ಮಂದಿ ಶಾಮೀಲಾಗಿದ್ದಾರೆಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ತಮಿಳುನಾಡಿನಲ್ಲಿ ದಿನಕರನ್, ಕಾಸಿ ವಿಸ್ವನಾಥನ್, ರಸೂಲ್, ಸತ್ತಾಮ್ ಉಸೇನ್, ಅಬ್ದುಲ್ ಮುಹೀತ್, ಸೊಕ್ರೇಟ್ಸ್ ಎಂಬ ಆರು ಮಂದಿಯನ್ನು ಬಂಧಿಸಿರುವ ಎನ್ಐಎ ಅಧಿಕಾರಿಗಳು ವಿವಿಧ ಕಾಯ್ದೆಗಳಡಿ ಕೇಸು ದಾಖಲಿಸಿದ್ದಾರೆ. ಶ್ರೀಲಂಕಾದ ಪ್ರಜೆಗಳನ್ನು ಭಾರತದ ವಿವಿಧೆಡೆಗಳಲ್ಲಿ ಇರಿಸಿ ಕೆನಡಾ ಮತ್ತಿತರ ದೇಶಗಳಿಗೆ ಮಾನವ ಕಳ್ಳಸಾಗಣೆ ರೂಪದಲ್ಲಿ ಸಾಗಿಸುವ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದರು.
ಕಳೆದ ಜೂನ್ ತಿಂಗಳಲ್ಲಿ 38 ಮಂದಿ ಶ್ರೀಲಂಕಾದ ಪ್ರಜೆಗಳು ಯಾವುದೇ ದಾಖಲೆ ಇಲ್ಲದೆ ಮಂಗಳೂರಿನ ಲಾಡ್ಜ್ ಗಳಲ್ಲಿ ಪತ್ತೆಯಾಗಿದ್ದರು. ಆನಂತರ, ವಿಚಾರಣೆ ಸಂದರ್ಭದಲ್ಲಿ ಕೆನಡಾಕ್ಕೆ ತೆರಳುವುದಕ್ಕಾಗಿ ಬಂದಿದ್ದೆಂದು ತಿಳಿದುಬಂದಿತ್ತು. ಮಂಗಳೂರಿನಿಂದ ಬೋಟ್ ಗಳ ಮೂಲಕ ಕೆನಡಾಕ್ಕೆ ಸಾಗಲು ಪ್ಲಾನ್ ಆಗಿತ್ತು. ಆದರೆ, ಇವರನ್ನು ಇಲ್ಲಿಗೆ ತಂದಿರಿಸಿದ್ದು ಯಾರು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು. ಆನಂತರ, ಪ್ರಕರಣವನ್ನು ಎನ್ಐಎ ತನಿಖೆಗೆ ತೆಗೆದುಕೊಂಡಿತ್ತು.
ಪ್ರಕರಣದ ತನಿಖೆ ನಡೆಸಿದಾಗ, ಲಂಕಾದ ಪ್ರಜೆಗಳನ್ನು ಹಡಗಿನಲ್ಲಿ ಕೆನಡಾಕ್ಕೆ ತಲುಪಿಸುವುದಾಗಿ ಹೇಳಿ ಕುಟುಂಬಸ್ಥರನ್ನು ನಂಬಿಸಿ ತಂಡವೊಂದು ಹಣ ಪಡೆದಿತ್ತು. ಅಲ್ಲದೆ, ಅವರನ್ನು ಭಾರತಕ್ಕೆ ಕರೆತಂದು ತಮಿಳುನಾಡು ಮತ್ತು ಕರ್ನಾಟಕದ ವಿವಿಧೆಡೆ ಅಕ್ರಮವಾಗಿ ಇರಿಸಿತ್ತು ಎನ್ನುವುದು ಬಯಲಾಗಿತ್ತು. 38 ಮಂದಿ ಲಂಕನ್ನರು ತಲಾ 3.5 ಲಕ್ಷದಿಂದ ಹತ್ತು ಲಕ್ಷದಂತೆ ಹಣವನ್ನು ಕೊಟ್ಟಿದ್ದರು. ಒಟ್ಟು 1.83 ಕೋಟಿ ಹಣವನ್ನು ಹೀಗೆ ಸಂಗ್ರಹ ಮಾಡಲಾಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.
ಅಲ್ಲದೆ, ಮಾನವ ಕಳ್ಳಸಾಗಣೆ ಜಾಲದ ಪ್ರಮುಖ ಸೂತ್ರಧಾರಿ ಲಂಕಾ ಮೂಲದ ಈಸಾನ್ ಎಂಬಾತನಾಗಿದ್ದು ಈತ ಮತ್ತು ಸಹಚರರು ಸೇರಿ ಹಣವನ್ನು ಸಂಗ್ರಹಿಸಿದ್ದು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆತನ ಹೆಸರನ್ನೂ ಚಾರ್ಜ್ ಶೀಟ್ ನಲ್ಲಿ ಎನ್ಐಎ ಅಧಿಕಾರಿಗಳು ಸೇರಿಸಿದ್ದಾರೆ. ಈಸಾನ್ ಸೂಚನೆಯಂತೆ, ತಮಿಳುನಾಡಿನ ಆರು ಮಂದಿ ಈ ಜಾಲದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲ ಪತ್ತೆ ; ಕೆನಡಾಕ್ಕೆ ತೆರಳಲು ಪ್ಲಾನ್ ಹಾಕಿದ್ದ 38 ಲಂಕನ್ನರ ಸೆರೆ !
The NIA on Tuesday filed a charge sheet before a special court here against six persons for their alleged involvement in an organised international trafficking racket across the India-Sri Lanka maritime boundary, an official said. Dhinakaran, Kasi Viswanathan, Rasool, SathamUshen, Abdul Muheetu and Socrates, all residents of Tamil Nadu, have been charged under various sections of the IPC, the official of the premier investigation agency said. They have been charged for their involvement in the organised international trafficking racket across India-Srilanka maritime boundary by luring Srilankan nationals on the pretext of emigration to Canada and confining them in different places in India, the NIA official said. The case was registered in June in Mangaluru against 25 Sri Lankans, based on the information that some Sri Lankans were staying in a lodge without valid documents, the official said, adding that during the subsequent raids, 13 more Sri Lankans were apprehended.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm