ಬ್ರೇಕಿಂಗ್ ನ್ಯೂಸ್
25-10-21 10:13 pm Headline Karnataka News Desk ಕ್ರೈಂ
Photo credits : ANI News Agency
ಗಾಜಿಯಾಬಾದ್, ಅ.25: ಆ ದಂಪತಿಗೆ ಹನಿಟ್ರ್ಯಾಪ್ ಮಾಡುವುದೇ ಫುಲ್ ಟೈಮ್ ಕಸುಬು. ಸಿರಿವಂತ ಉದ್ಯಮಿಗಳು, ದೊಡ್ಡ ಕಂಪನಿಗಳಲ್ಲಿ ಎಕ್ಸಿಕ್ಯೂಟಿವ್ ಆಗಿರೋರನ್ನು ಗುರಿಯಾಗಿಸಿ ಟ್ರಾಪ್ ಮಾಡುತ್ತಿದ್ದರು. ಇದೇ ದಂಧೆಯಲ್ಲಿ ಕೇವಲ ಎರಡು ವರ್ಷದಲ್ಲಿ ಅವರು ಗಳಿಸಿದ್ದು ಬರೋಬ್ಬರಿ 22 ಕೋಟಿ. ಹೌದು.. ಈ ದಂಪತಿಯ ಹನಿ ಹನಿ ಕಹಾನಿ ಕೇಳಿದರೆ, ನೀವು ದಂಗಾಗಲೇಬೇಕು.
ಗಾಜಿಯಾಬಾದ್ ನಗರದ ರಾಜ್ ನಗರ್ ಎಕ್ಸ್ ಟೆನ್ಶನ್ ಎಂಬಲ್ಲಿ ಐಷಾರಾಮಿ ಫ್ಲಾಟ್ ಒಂದರಲ್ಲಿ ನೆಲೆಸಿದ್ದ ದಂಪತಿ ಸೇರಿ ಐವರು ಸದಸ್ಯರ ಗ್ಯಾಂಗ್ ಅನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ. ಅಷ್ಟೇ ಅಲ್ಲ, ಕಳೆದ ಎರಡು ವರ್ಷಗಳಲ್ಲಿ 200 ಮಂದಿಯನ್ನು ಬ್ಲಾಕ್ಮೇಲ್ ಮಾಡಿ, 22 ಕೋಟಿಗೂ ಹೆಚ್ಚು ಹಣವನ್ನು ಕಬಳಿಸಿರುವುದನ್ನು ಪತ್ತೆ ಮಾಡಿದ್ದಾರೆ. ಇದಕ್ಕಾಗಿ ತಮ್ಮ ಫ್ಲಾಟ್ ನಲ್ಲಿ ತಿಂಗಳಿಗೆ 25 ಸಾವಿರ ರೂ. ಸಂಬಳ ಕೊಟ್ಟು ಮೂವರು ಯುವತಿಯರನ್ನೂ ಇಟ್ಟುಕೊಂಡಿದ್ದರು. ಬಾಡಿಗೆ ಯುವತಿಯರನ್ನು ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದುದಲ್ಲದೆ, ಪ್ರತೀ ವಹಿವಾಟಿನಲ್ಲಿ ಒಟ್ಟು ಗಳಿಕೆಯ ಮೇಲೆ ಇಂತಿಷ್ಟು ಎಂದು ಅವರಿಗೆ ಪಾಲನ್ನೂ ಕೊಡುತ್ತಿದ್ದರು.
ಹನಿಟ್ರಾಪ್ ಪ್ರಕರಣದ ಬೆನ್ನು ಹಿಡಿದು ಗುಜರಾತಿನ ರಾಜಕೋಟ್ ಪೊಲೀಸರು ಗಾಜಿಯಾಬಾದ್ ನಗರಕ್ಕೆ ಬಂದು ಶೋಧ ನಡೆಸಿದಾಗ, ಭಾರೀ ದಂಧೆ ಹೊರಬಿದ್ದಿದೆ. ಇದಕ್ಕೆ ಕಾರಣವಾಗಿದ್ದು ಬಿಸಿನೆಸ್ ಮ್ಯಾನ್ ಒಬ್ಬ ತನ್ನ ಕಂಪನಿಯ ನೌಕರನ ಮೇಲೆ ನೀಡಿದ್ದ ಕೇಸು. ರಾಜಕೋಟ್ ನಗರದಲ್ಲಿ ಉದ್ಯಮಿಯಾಗಿರುವ ವ್ಯಕ್ತಿ ತನ್ನ ಕಂಪನಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ತುಷಾರ್ ಎಂಬಾತ, ಕಂಪನಿಯ ಖಾತೆಯಿಂದ 80 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿದ್ದಾಗಿ ದೂರು ನೀಡಿದ್ದರು.
ತುಷಾರ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ಹನಿಟ್ರಾಪ್ ಆಗಿದ್ದು ಸೆಕ್ಸ್ ಚಾಟಿಂಗ್, ಫೋಟೋ ಹಂಚಿಕೊಂಡಿದ್ದು ಮತ್ತು ಅದಕ್ಕಾಗಿ ಭಾರೀ ಪ್ರಮಾಣದ ಹಣವನ್ನು ನೀಡಬೇಕಾಗಿ ಬಂದ ವಿಚಾರವನ್ನು ಹೇಳಿದ್ದ. ಆತನ ಮಾಹಿತಿ ಆಧರಿಸಿ, ರಾಜಕೋಟ್ ಪೊಲೀಸರು ಗಾಜಿಯಾಬಾದ್ ನಗರಕ್ಕೆ ಬಂದು ಶೋಧ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಕೃತ್ಯಕ್ಕೂ ಮುನ್ನ ಯುವಕರನ್ನು ಬಲೆಗೆ ಬೀಳಿಸುವ ಬಗೆಯನ್ನು ಅಲ್ಲಿನ ಎಸ್ಪಿ ನಿಪೂರ್ಣ ಅಗರ್ವಾಲ್ ಹೀಗೆ ಬಿಚ್ಚಿಟ್ಟಿದ್ದಾರೆ.
ದಂಪತಿ ನೇತೃತ್ವದ ಐವರು ಸದಸ್ಯರು ಪ್ರತ್ಯೇಕವಾಗಿ ಫೇಸ್ಬುಕ್, ಇನ್ ಸ್ಟಾಗ್ರಾಮ್ ಖಾತೆ ತೆರೆದು ಪುರುಷರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದರು. ಆನಂತರ, ಚಾಟಿಂಗ್ ಮಾಡುತ್ತಾ ಗೆಳೆತನ ಮಾಡುತ್ತಿದ್ದರು. ಕೆಲವು ದಿನಗಳಲ್ಲಿ ಹತ್ತಿರವಾಗುತ್ತಿದ್ದ ಯುವತಿಯರು ಬಳಿಕ ವಾಟ್ಸಪ್ ನಂಬರ್ ಪಡೆದು ವಿಡಿಯೋ ಕರೆ ಮಾಡುತ್ತಿದ್ದರು. ತಮ್ಮದನ್ನು ತೋರಿಸಿಕೊಂಡು ಹುಡುಗರನ್ನು ನಗ್ನವಾಗಲು ಹೇಳಿ, ವಿಡಿಯೋ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದರು. ನಂತರ, ಅದೇ ಸೆಕ್ಸ್ ಚಾಟ್ ಮತ್ತು ವಿಡಿಯೋವನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದರು ಎಂದು ಗಾಜಿಯಾಬಾದ್ ಎಸ್ಪಿ ನಿಪೂರ್ಣ್ ಅಗರ್ವಾಲ್ ಹೇಳುತ್ತಾರೆ.
ಉದ್ಯಮಿಗಳು, ದೊಡ್ಡ ಕಂಪನಿಗಳಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿರೋರನ್ನೇ ಇವರು ಕೇಂದ್ರೀಕರಿಸಿ ಬಲೆ ಬೀಸುತ್ತಿದ್ದರು. ಒಮ್ಮೆ ಸಿಕ್ಕಿಬಿದ್ದ ಬಳಿಕ ತಮ್ಮ ವಿಡಿಯೋ ಹೊರಬಂದು ಮರ್ಯಾದೆ ಹೋಗುತ್ತದೆ ಎಂದು ಪೊಲೀಸ್ ದೂರು ನೀಡುತ್ತಿರಲಿಲ್ಲ, ಅಷ್ಟೇ ಅಲ್ಲ, ಅವರು ಕೇಳುತ್ತಿದ್ದಷ್ಟು ಹಣವನ್ನು ಕೊಟ್ಟು ಸುಮ್ಮನಾಗುತ್ತಿದ್ದರು. ಇದರಿಂದಾಗಿ ದಂಪತಿ ಸರದಿಯಂತೆ ಮಿಕಗಳನ್ನು ಟಾರ್ಗೆಟ್ ಮಾಡಿ, ಹಣ ದೋಚುತ್ತಿದ್ದರು.
ಯೋಗೇಶ್ ಗೌತಮ್ ಮತ್ತು ಆತನ ಪತ್ನಿ ಸಪ್ನಾ ಈ ಗ್ಯಾಂಗಿನ ಸೂತ್ರಧಾರಿಗಳು. ಮೂವರು ಯುವತಿಯರನ್ನು ಬಾಡಿಗೆಗೆ ಇಟ್ಟುಕೊಂಡು ಆಫೀಸರ್ ಸಿಟಿಯಲ್ಲಿ ಫ್ಲಾಟ್ ಒಂದನ್ನು ಬಾಡಿಗೆಗೆ ಪಡೆದು, ಅಲ್ಲಿಂದಲೇ ಗಾಳ ಹಾಕುತ್ತಿದ್ದರು. ಆಸ್ಟ್ರೇಲಿಯಾ ಮೂಲದ ಸನ್ನಿ ಎಂಬ ಯುವಕ ಈ ಐಡಿಯಾವನ್ನು ದಂಪತಿಗೆ ಕೊಟ್ಟಿದ್ದ. ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನಾಗಿದ್ದ ಸನ್ನಿ, ಸೆಕ್ಸ್ ಚಾಟ್ ಮತ್ತು ಹನಿಟ್ರಾಪ್ ಮಾಡಿ ಬ್ಲಾಕ್ಮೇಲ್ ಮಾಡಿ ಹಣ ಪೀಕಿಸುವ ಉಪಾಯ ಹೇಳಿಕೊಟ್ಟಿದ್ದ. ವಿಚಾರಣೆ ವೇಳೆ, ದಂಪತಿ ಎಂಟು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಪತ್ತೆಯಾಗಿದೆ. ನಾಲ್ಕು ಬ್ಯಾಂಕ್ ಖಾತೆ ಸೀಜ್ ಮಾಡಲಾಗಿದ್ದು, ಅದರಲ್ಲಿ ನಾಲ್ಕು ಕೋಟಿ ರೂಪಾಯಿ ಹಣವನ್ನು ಪತ್ತೆ ಮಾಡಿ ಸೀಜ್ ಮಾಡಿದ್ದಾರೆ.
A gang that allegedly extorted businessmen and senior executives after blackmailing them with photographs and movies of intercourse chats has been busted with the arrest of 5 members from a flat in Raj Nagar Extension. The gang, police mentioned, focused round 200 folks previously two years and extorted Rs 22 crore from them. It was being run by a pair, who had employed three ladies for a month-to-month wage of Rs 25,000 and a share of the cash they made. The veil was lifted off the gang after a police group from Rajkot visited Ghaziabad in reference to a case of fraud and honeytrap.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am