ಬ್ರೇಕಿಂಗ್ ನ್ಯೂಸ್
28-10-21 09:23 pm HK News Desk ಕ್ರೈಂ
ಕೋಝಿಕ್ಕೋಡ್, ಅ.28: 17 ವರ್ಷದ ಯುವತಿಯೊಬ್ಬಳು ನೆರೆಮನೆಯ ಯುವಕನ ಜೊತೆಗಿನ ಸ್ನೇಹದಿಂದ ಗರ್ಭವತಿಯಾಗಿದ್ದಲ್ಲದೆ, ಅದನ್ನು ಮುಚ್ಚಿಟ್ಟು ತನ್ನ ಮನೆಯ ಕೋಣೆಯೊಳಗಿದ್ದುಕೊಂಡೇ ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ ನೀಡಿದ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೋಟಕ್ಕಲ್ ಎಂಬಲ್ಲಿ ಈ ರೀತಿಯ ಘಟನೆ ನಡೆದಿದ್ದು, ಅ.20ರಂದು ಕೋಣೆಯೊಳಗಿದ್ದುಕೊಂಡೇ ಯುವತಿ ಹೆರಿಗೆ ಮಾಡಿಕೊಂಡಿದ್ದಾಳೆ. ಆನಂತರ, ಕರುಳ ಬಳ್ಳಿಯನ್ನು ಯೂಟ್ಯೂಬ್ ನೋಡಿಕೊಂಡು ಕಡಿದುಕೊಂಡಿದ್ದಾಳೆ. ಆದರೆ, ಹೆರಿಗೆಯಾದ ಬಳಿಕ ಮೂರು ದಿನಗಳ ಬಾಗಿಲು ಹಾಕ್ಕೊಂಡು ಕೋಣೆಯ ಒಳಗೇ ಇದ್ದಳು. ಮಗು ಅಳುತ್ತಿರುವುದು ಮತ್ತು ಮಗಳು ಅನುಭವಿಸುತ್ತಿರುವ ವಿಚಾರ ತಿಳಿದ ತಾಯಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಚೈಲ್ಡ್ ವೇಲ್ಫೇರ್ ಸೆಂಟರ್ ಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ತಿಳಿದು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆದರೆ, ಯುವತಿ ಆರೋಪಿ ಬಗ್ಗೆ ಮೊದಲಿಗೆ ಮಾಹಿತಿ ನೀಡಿರಲಿಲ್ಲ. ತಾಯಿಗೆ ದೃಷ್ಟಿ ದೋಷವಿದ್ದರಿಂದ ಮಗಳು ಗರ್ಭಿಣಿಯಾಗಿದ್ದು ಆಕೆಗೂ ತಿಳಿದಿರಲಿಲ್ಲ ಎನ್ನಲಾಗಿದೆ. ಮಗಳು ಹೊಟ್ಟೆ ನೋವೆಂದು ತಾಯಿ ಜೊತೆಗೆ ಎರಡು ಬಾರಿ ಆಸ್ಪತ್ರೆಗೆ ತೆರಳಿದ್ದರು. ಆದರೆ, ವೈದ್ಯರು ಮಗಳು ಗರ್ಭಿಣಿಯಾಗಿದ್ದ ವಿಚಾರವನ್ನು ತಾಯಿಗೆ ತಿಳಿಸಿರಲಿಲ್ಲ. ಚೈಲ್ಡ್ ಲೈನ್ ಸಿಬಂದಿ, ಮನೆಮಂದಿ ಮಗಳು ಗರ್ಭಿಣಿಯಾಗಿದ್ದನ್ನು ತಿಳಿಯದೇ ಇರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. 50 ವರ್ಷದ ತಾಯಿಗೆ ದೃಷ್ಟಿ ದೋಷ ಇತ್ತು. ತಂದೆ ಸೆಕ್ಯುರಿಟಿ ಗಾರ್ಡ್ ಆಗಿದ್ದು, ದಿನವೂ ರಾತ್ರಿ ವೇಳೆ ಕೆಲಸಕ್ಕೆ ಹೋಗುತ್ತಿದ್ದರು. ಹಗಲಲ್ಲಿ ಮಲಗುತ್ತಿದ್ದರು. ಮಗಳು ಆನ್ಲೈನ್ ಕ್ಲಾಸ್ ಎಂದು ಹೇಳಿ ಸದಾ ಕೋಣೆಯೊಳಗೇ ಇರುತ್ತಿದ್ದಳು. ಇದೇ ರೀತಿ ತಾನು ಗರ್ಭಿಣಿಯಾಗಿದ್ದನ್ನು ಮುಚ್ಚಿಟ್ಟಿದ್ದಳು ಎಂದಿದ್ದಾರೆ.
ಪೊಲೀಸರು ಆರೋಪಿ, ಯುವತಿಯ ಪಕ್ಕದಮನೆಯ 21 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಇವರಿಬ್ಬರ ಸಂಬಂಧ ಎರಡೂ ಮನೆಯವರಿಗೂ ಗೊತ್ತಿತ್ತು. ಯುವತಿಗೆ 18 ವರ್ಷ ಆದ ಕೂಡಲೇ ಮದುವೆ ಮಾಡಿಕೊಳ್ಳಲು ತಯಾರಿ ನಡೆಸಿದ್ದರು. ಹುಡುಗಿ ಮನೆಯ ಕೋಣೆಯ ಒಳಗಡೆಯೇ ಹೆಚ್ಚು ಸಮಯ ಇರುತ್ತಿದ್ದಳು. ಪರಿಸರದ ನಿವಾಸಿಗಳು ಕೇಳಿದರೆ, ಆಕೆಗೆ ಆನ್ ಲೈನ್ ಕ್ಲಾಸ್ ಎಂದು ಹೇಳುತ್ತಿದ್ದರು. ಹೆರಿಗೆಯಾದ ಮಗು ಮತ್ತು ತಾಯಿ ಆಸ್ಪತ್ರೆಯಲ್ಲಿದ್ದು ಹುಷಾರಾಗಿದ್ದಾರೆ. ಯುವಕನೇ ಹುಡುಗಿಗೆ ಯೂಟ್ಯೂಬ್ ನೋಡಿಕೊಂಡು ಹೆರಿಗೆ ಮಾಡುವಂತೆ ಸಲಹೆ ಕೊಟ್ಟಿದ್ದ.
ಕಳೆದ ಸೆಪ್ಪಂಬರ್ ತಿಂಗಳಲ್ಲಿ ಇದೇ ರೀತಿ ಕೊಚ್ಚಿ ಆಸ್ಪತ್ರೆಗೆ ಬಂದಿದ್ದ ಅಪ್ರಾಪ್ತ ಯುವತಿಯೊಬ್ಬಳು ಟಾಯ್ಲೆಟ್ ನಲ್ಲಿ ಅಪ್ರಾಪ್ತ ಶಿಶುವಿಗೆ ಜನ್ಮ ನೀಡಿದ್ದಳು. ಆನಂತರ, ಶಿಶುವನ್ನು ಟಾಯ್ಲೆಟ್ ನಲ್ಲಿಯೇ ಬಿಟ್ಟು ತೆರಳಿದ್ದಳು. ತಾಯಿ ಜೊತೆಗೆ ಆಸ್ಪತ್ರೆಗೆ ಟೆಸ್ಟಿಂಗ್ ಬಂದ ಸಂದರ್ಭದಲ್ಲಿಯೇ ಘಟನೆ ನಡೆದಿತ್ತು. ಬಳಿಕ ಆಸ್ಪತ್ರೆ ಸಿಬಂದಿ ಗಮನಿಸಿ, ಸಿಸಿಟಿವಿ ವಿಡಿಯೋ ಆಧರಿಸಿ ಯುವತಿಯನ್ನು ಪತ್ತೆ ಮಾಡಿದ್ದರು. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ, ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ 20 ವರ್ಷದ ಯುವಕನನ್ನು ಬಂಧಿಸಿದ್ದರು.
A 17-year-old girl in Kerala’s Malappuram district is reported to have given birth to a baby boy at home secretly, by following tips from YouTube videos. The incident took place in Kottakkal a few days ago. The minor girl did not inform her mother, who is partially visually impaired, about her pregnancy or about the child birth. Police said that the mother came to know about the child's birth, a day after the delivery on October 20. The girl cut the umbilical cord and disposed of the placenta by following tips from YouTube videos, according to the police.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm