ಬ್ರೇಕಿಂಗ್ ನ್ಯೂಸ್
18-11-21 01:08 pm Hk Desk, Bengaluru ಕ್ರೈಂ
ಬೆಂಗಳೂರು, ನ.18: ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಎಬ್ಬಿಸಿದ್ದರೆ, ಇತ್ತ ತನಿಖೆಯ ಸ್ಪೋಟಕ ಮಾಹಿತಿಗಳು ಬಿಚ್ಚಿಕೊಳ್ಳುತ್ತಿವೆ. ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿಯ ಲ್ಯಾಪ್‌ಟಾಪ್ ಅನ್ನು ವಶಕ್ಕೆ ಪಡೆದು ಸೈಬರ್ ತಜ್ಞರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಬಿಟ್ ಕಾಯಿನ್ ಅಕೌಂಟ್ ಪ್ರವೇಶಕ್ಕೆ ಬಳಸುವ 76 ಲಕ್ಷ ಪ್ರೈವೇಟ್ ಕೀಗಳು ಪತ್ತೆಯಾಗಿವೆ ಎನ್ನೋ ಮಾಹಿತಿ ಹೊರಬಂದಿದ್ದು ಅಚ್ಚರಿಗೆ ಕಾರಣವಾಗಿದೆ.
ಈಗಾಗಲೇ ಸಿಸಿಬಿ ಅಧಿಕಾರಿಗಳು ಜಗತ್ತಿನ ವಿವಿಧೆಡೆಯ 12 ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕಂಪೆನಿಗಳಿಗೆ ಪತ್ರ ಬರೆದಿದ್ದು ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಕೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಒಂದು ಕಂಪನಿ ಮಾತ್ರ ಇದಕ್ಕೆ ಉತ್ತರ ನೀಡಿದ್ದು, ಬಿಟ್ ಕಾಯಿನ್ ಕಳವಾಗಿರುವ ಸುಳಿವು ನೀಡಿದೆ.
ಇದೇ ವೇಳೆ, ಶ್ರೀಕಿ ವಿವಿಧ ಬಿಟ್ ಕಾಯಿನ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದನ್ನು ಸೈಬರ್ ತಜ್ಞರು ಪತ್ತೆ ಮಾಡಿದ್ದಾರೆ. ಶ್ರೀಕಿ ಬಳಸುತ್ತಿದ್ದ ಲ್ಯಾಪ್‌ಟಾಪ್ ವಶಕ್ಕೆ ಪಡೆದಿರುವ ಪೊಲೀಸರು ಲ್ಯಾಪ್‌ಟಾಪ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಅಲ್ಲಿಂದ ನೀಡಿರುವ ವಿಶ್ಲೇಷಣಾ ವರದಿಗಳು ಲೀಕ್ ಆಗಿವೆ. ಬಿಟ್ ಕಾಯಿನ್ ಅಕೌಂಟ್ ಪ್ರವೇಶಿಸಿಲು ಶ್ರೀಕಿ ಸುಮಾರು 76 ಲಕ್ಷ ಪ್ರೈವೇಟ್ ಕೀಗಳನ್ನು ಬಳಸುತ್ತಿದ್ದ ಅನ್ನೋದು ಪತ್ತೆಯಾಗಿದೆ. ಶ್ರೀಕಿಯ ಕ್ಲೌಡ್ ಅಕೌಂಟ್ ನಲ್ಲಿ 27 ಇ- ವ್ಯಾಲೆಟ್, ಪ್ರೈವೇಟ್ ಕೀ, ವಿಳಾಸಗಳು ಪತ್ತೆಯಾಗಿವೆ. ಇದಲ್ಲದೆ, ಬಿಟ್‌ಕಾಯಿನ್ ವಹಿವಾಟಿಗೆ ಬಳಸುವ ‘ಬಿಟ್ ಕಾಯಿನ್ ಕೋರ್’ ಎಂಬ ತಂತ್ರಾಂಶವನ್ನೂ ಹ್ಯಾಕ್ ಮಾಡಿದ್ದಾನೆ.
ಈ ಹಿನ್ನೆಲೆಯಲ್ಲಿ ಶ್ರೀಕಿಗೆ ಸೇರಿದ ಅಮೆಜಾನ್ ವೆಬ್ ಸರ್ವಿಸ್ ಖಾತೆ, ಕ್ಲೌಡ್ ಅಕೌಂಟ್ ವಿಶ್ಲೇಷಣೆ ನಡೆಸಲಾಗುತ್ತಿದೆ. ಸೈಬರ್ ಐಡಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಆರೋಪಿ ಲ್ಯಾಪ್ ಟ್ಯಾಪ್ ವಿಶ್ಲೇಷಣೆ ನಡೆಯುತ್ತಿದೆ. ಶ್ರೀಕಿ ಖಾತೆಯಲ್ಲಿದ್ದ ಸುಮಾರು 31 ಬಿಟ್ ಕಾಯಿನ್ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ ಶ್ರೀಕಿ ಖಾತೆಯಿಂದ ಪೊಲೀಸ್ ವ್ಯಾಲೆಟ್ ಗೆ ಬಿಟ್ ಕಾಯಿನ್ ವರ್ಗಾವಣೆ ಮಾಡಲು ಸಾಧ್ಯವಾಗಿರಲಿಲ್ಲ ಅನ್ನೋದು ತಿಳಿದು ಬಂದಿದೆ.
ಪೊಲೀಸರು ತನ್ನ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ವರ್ಗಾಯಿಸಲು ಮುಂದಾಗಿದ್ದನ್ನು ತಿಳಿದು ಶ್ರೀಕಿ ತನ್ನ ವ್ಯಾಲೆಟ್ ಮೂಲ ಕೋಡ್ ಅನ್ನೇ ಬದಲಿಸಿರುವ ಸಾಧ್ಯತೆಯಿದೆ.
ಜೊಮೇಟೋ ಫುಡ್ ಡೆಲಿವರಿ ವೆಬ್ ಗೂ ಕನ್ನ !
ಇದಲ್ಲದೆ, ಹ್ಯಾಕರ್ ಶ್ರೀಕಿ ಆನ್ ಲೈನ್ ಪಾವತಿ ಪೋರ್ಟಲ್ ಖಾತೆಗೂ ಕನ್ನ ಹಾಕಿದ್ದ. ಫುಡ್ ಡೆಲಿವರಿ ಸಂಸ್ಥೆ ಜೊಮೇಟೊ ಸಂಸ್ಥೆಯ ಏಪ್ ಹ್ಯಾಕ್ ಮಾಡಲು ಯೋಜನೆ ಹಾಕಿದ್ದ ಅನ್ನೋ ವಿಚಾರವೂ ಬಯಲಾಗಿದೆ. ಶ್ರೀಕಿ ಮತ್ತು ಆತನ ಸಹವರ್ತಿ ರಾಬಿನ್ ಖಂಡೇಲ್ ವಾಲನಿಂದ ವಶಕ್ಕೆ ಪಡೆದ ಹಾರ್ಡ್ ಡಿಸ್ಕ್ ನಲ್ಲಿ ಇಂತಹ ಮಾಹಿತಿ ಸಿಕ್ಕಿದೆ.
16 ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದಕ್ಕೆ ಸಂಬಂಧಿಸಿದ ಮಾಹಿತಿ ಹಾರ್ಡ್ ಡಿಸ್ಕ್ ನಲ್ಲಿ ಇದೆ. ಆನ್ಲೈನ್ ಪಾವತಿ ಪೋರ್ಟಲ್ ಗಳಾದ ಕ್ಯಾಶ್ ಫ್ರೀ, ಪೇಯು ಮನಿ, ಪೋಕರ್ ಸೈಟ್ ಗಳಾದ ಪಿಪಿ ಪೋಕರ್ ಕ್ಲಬ್, ಕಾಲಿಂಗ್ ಸ್ಟೇಶನ್, ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಎಫ್ ಸಿಸಿಇ.ಜೆಪಿ ಈ ಪಟ್ಟಿಯಲ್ಲಿ ಇವೆ. ಗ್ರೂಪ್ ಸೈಬರ್ ಐಡಿ ಟೆಕ್ನಾಲಜಿ ಲಿ. ಎಂಬ ಸಂಸ್ಥೆಯು ಹಾರ್ಡ್ ಡಿಸ್ಕ್ ಅನ್ನು ವಿಶ್ಲೇಷಣೆಗೆ ಒಳಪಡಿಸಿದ್ದು 16 ವೆಬ್ ಸೈಟ್ ಗಳ ಹೆಸರಿತ್ತು ಎನ್ನೋದನ್ನು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಇತರ ಹಾರ್ಡ್ ಡಿಸ್ಕ್ ಗಳಲ್ಲಿರುವ ಮಾಹಿತಿ ಗೂಢ ಲಿಪಿಯಲ್ಲಿದ್ದು ಈಗ ಇರುವ ವಿಧಿ ವಿಜ್ಞಾನ ಸಾಫ್ಟ್‌ವೇರ್ ಬಳಸಿ ಅದನ್ನು ಅಧ್ಯಯನ ನಡೆಸುವುದು ಸಾಧ್ಯವಿಲ್ಲ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ. 2017 ರಲ್ಲಿ ಜೊಮ್ಯಾಟೊ ಸಂಸ್ಥೆಯು ತನ್ನ ವೆಬ್ ಗೆ ಕನ್ನ ಹಾಕಿ 1.7 ಕೋಟಿ ಬಳಕೆದಾರರ ಮಾಹಿತಿ ಕದಿಯಲಾಗಿದೆ ಎಂದು ಹೇಳಿಕೆ ನೀಡಿತ್ತು ಎನ್ನೋದನ್ನು ಇಲ್ಲಿ ಉಲ್ಲೇಖಿಸಬಹುದು.
Bitcoin Scam, shocking information revealed by Cybercrime about Hacker Sriki all you need to know. Srikrishna confessed to his involvement in alleged hacking of cryptocurrency websites. A complaint was registered in Cottonpet police station. “Neither any Bitcoins were transferred from the account of Srikrishna, nor any Bitcoin was lost. A government order dated December 8, 2020 to open a Bitcoin account was obtained. Srikrishna showed a BTC wallet, which contained 31.8 BTCs.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm