ಬ್ರೇಕಿಂಗ್ ನ್ಯೂಸ್
18-11-21 08:51 pm HK News Desk ಕ್ರೈಂ
Photo credits : Photo: ET
ನವದೆಹಲಿ, ನ.18: ಮಕ್ಕಳ ಜೊತೆಗಿನ ಲೈಂಗಿಕ ಕ್ರಿಯೆ, ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋಗಳನ್ನು ಸೃಷ್ಟಿಸಿ, ಅದನ್ನು ಜಾಲತಾಣದಲ್ಲಿ ಮಾರ್ಕೆಟ್ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ದೇಶದ 14 ರಾಜ್ಯಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, 83 ಮಂದಿಯ ವಿರುದ್ಧ ಕೇಸು ದಾಖಲಿಸಿದ್ದಾರೆ.
ಈ ರೀತಿಯ ವಿಡಿಯೋಗಳನ್ನು ಸೃಷ್ಟಿಸಿ, ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಮತ್ತು ಹಣಕ್ಕೆ ಖರೀದಿಸುತ್ತಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಇದಕ್ಕಾಗಿ 50 ವಿವಿಧ ಮಾದರಿಯ ವಾಟ್ಸಪ್ ಗ್ರೂಪ್ ತಂಡಗಳು ಸಕ್ರಿಯವಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಷೇರಿಂಗ್, ಅಪ್ಲೋಡ್ ಇತ್ಯಾದಿ ಕೃತ್ಯದಲ್ಲಿ ತೊಡಗಿಸಿರುವುದು ಪತ್ತೆಯಾಗಿದೆ. ನೂರಕ್ಕೂ ಹೆಚ್ಚು ದೇಶಗಳ ಜನರು ಈ ರೀತಿಯ ಕೃತ್ಯದಲ್ಲಿ ಖರೀದಿ – ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವ ಆತಂಕದ ಮಾಹಿತಿಯನ್ನೂ ಸಿಬಿಐ ಕಲೆಹಾಕಿದೆ.
ವಿಡಿಯೋಗಳನ್ನು ವಾಟ್ಸಪ್, ವೆಬ್ ಸೈಟ್ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಹಂಚುವುದು, ಷೇರ್ ಮಾಡುವುದು ಇತ್ಯಾದಿ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಸಾವಿರಾರು ಮಂದಿ ತೊಡಗಿಸಿದ್ದಾರೆ. ಈಮೂಲಕ ತಮ್ಮ ಕೆಲಸಕ್ಕಾಗಿ ನಿಗದಿತ ಮೊತ್ತದ ಹಣವನ್ನೂ ಪಡೆಯುತ್ತಿದ್ದರು ಅನ್ನುವುದು ತನಿಖೆಯಲ್ಲಿ ಕಂಡುಬಂದಿದೆ. ನ.17ರಂದು ಏಕಕಾಲದಲ್ಲಿ 14 ರಾಜ್ಯಗಳ 77 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಪೋರ್ನೋ ವಿಡಿಯೋಗಳನ್ನು ಇಂಟರ್ನೆಟ್ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುವುದು ಮತ್ತು ಹಂಚಿಕೆ ಮಾಡುತ್ತಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶ, ಉತ್ತರಪ್ರದೇಶ, ಪಂಜಾಬ್, ದೆಹಲಿ, ಬಿಹಾರ, ತಮಿಳುನಾಡು, ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಹರ್ಯಾಣ, ಛತ್ತೀಸ್ ಗಢ, ಮಧ್ಯಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದಾರೆ. ವಿವಿಧ ರೀತಿಯ 23 ಪ್ರಕರಣಗಳನ್ನು ದಾಖಲಿಸಿದ್ದು, 83 ಮಂದಿ ಈ ಕೃತ್ಯದಲ್ಲಿ ತೊಡಗಿರುವುದನ್ನು ಪತ್ತೆ ಮಾಡಿದ್ದಾರೆ.
50 ಗ್ರೂಪ್ ಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಯಿದ್ದು, ಪಾಕಿಸ್ಥಾನ (36 ಮಂದಿ), ಕೆನಡಾ(35), ಅಮೆರಿಕ(35), ಬಾಂಗ್ಲಾದೇಶ(31), ಶ್ರೀಲಂಕಾ(30), ನೈಜೀರಿಯಾ(28), ಅಜೆರ್ ಬೈಜಾನ್(27), ಯೆಮೆನ್(24), ಮಲೇಶ್ಯಾ(22) ಪ್ರಜೆಗಳು ತೊಡಗಿಸಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ವಿದೇಶಿ ಪ್ರಜೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿದೇಶಿ ಏಜನ್ಸಿಗಳ ಜೊತೆ ವ್ಯವಹರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ ಹಣಕ್ಕಾಗಿ ವಿಡಿಯೋ ಷೇರಿಂಗ್
ಹೆಚ್ಚಿನ ಮಂದಿ ಹಣಕ್ಕಾಗಿ ಈ ರೀತಿಯ ಕೃತ್ಯದಲ್ಲಿ ತೊಡಗಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ಸಂದರ್ಭದಲ್ಲಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಡಿಯೋಗಳನ್ನು ಷೇರ್ ಮಾಡುವುದು, ಲಿಂಕ್ ಷೇರ್ ಮಾಡುವುದು, ವಿವಿಧ ಗ್ರೂಪ್ ಗಳಲ್ಲಿ ಪೋಸ್ಟ್ ಮಾಡುತ್ತಿದ್ದುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ನಿಗದಿತ ಆನ್ಲೈಲ್ ಪ್ಲಾಟ್ ಫಾರಂಗಳಲ್ಲಿ ಈ ರೀತಿಯ ವಿಡಿಯೋಗಳನ್ನು ಷೇರ್ ಮಾಡುವುದರಿಂದ ನಿಶ್ಚಿತ ಮೊತ್ತದ ಹಣ ಬ್ಯಾಂಕ್ ಖಾತೆಗೆ ಸಂದಾಯ ಆಗುತ್ತಿತ್ತು. ಹಲವಾರು ಮಂದಿ ಈ ವಿಡಿಯೋವನ್ನು ಪಡೆದು ನೇರವಾಗಿ ಖರೀದಿ, ಮಾರಾಟ ಪ್ರಕ್ರಿಯೆಯನ್ನೂ ನಡೆಸುತ್ತಿದ್ದರು.
ಮಕ್ಕಳ ಪೋರ್ನೋ ವಿಡಿಯೋಗೆ ಭಾರೀ ಬೇಡಿಕೆ
ಲಿಂಕ್ ಷೇರ್ ಆಗಿ ಹೆಚ್ಚೆಚ್ಚು ಜನರು ವೀಕ್ಷಿಸುವುದರಿಂದ ಅದರಿಂದ ಇನ್ನಷ್ಟು ಮೊತ್ತ ಇವರ ಖಾತೆಗೆ ಸೇರ್ತಿತ್ತು. ಅದನ್ನು ಕೆಲವರು ಹಂಚಿಕೊಳ್ಳುತ್ತಿದ್ದರು ಅನ್ನೋದು ಕೂಡ ಪತ್ತೆಯಾಗಿದೆ. ಇಂಟರ್ಪೋಲ್ ರಿಪೋರ್ಟ್ ಪ್ರಕಾರ, ಭಾರತದಲ್ಲಿ 2017ರಿಂದ 2020ರ ನಡುವೆ 2.4 ಮಿಲಿಯನ್ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದ್ದು, ಇವುಗಳಲ್ಲಿ 80 ಶೇ. 14 ವರ್ಷಕ್ಕಿಂತ ಕೆಳಗಿನ ಹುಡುಗಿಯರೇ ಆಗಿದ್ದಾರೆ. ಗೂಗಲ್ ನಲ್ಲಿ ಮಕ್ಕಳ ಪೋರ್ನೋ ವಿಡಿಯೋಗಳಿಗಾಗಿ ಜನರ ಹುಡುಕಾಟ ಹೆಚ್ಚಿರುವುದು ಕಂಡುಬಂದಿದ್ದು ಇದರ ರೇಟಿಂಗ್ ಹೆಚ್ಚಲು ಕಾರಣ ಎನ್ನಲಾಗುತ್ತಿದೆ. ನಿಗದಿತ ವೆಬ್ ಸೈಟ್ ಪ್ರವೇಶಕ್ಕೇ ನಿಶ್ಚಿತ ಮೊತ್ತವನ್ನು ತೆರಬೇಕಾಗುತ್ತದೆ. ಪ್ರತಿದಿನ ಗೂಗಲ್ ಸರ್ಚ್ ಇಂಜಿನಲ್ಲಿ 1.16 ಲಕ್ಷ ಮಂದಿ ಮಕ್ಕಳ ಪೋರ್ನೋ ವಿಡಿಯೋಗಳಿಗಾಗಿ ಹುಡುಕಾಟ ನಡೆಸುತ್ತಾರೆ ಅನ್ನುವುದನ್ನು ಅಂಕಿಅಂಶ ಹೇಳುತ್ತದೆ.
As part of its crackdown on child pornography, the Central Bureau of Investigation (CBI) based on its initial probe has found involvement of more than 50 groups, having more than 5,000 offenders sharing child sexual abuse material on social media and other platforms, which involves foreign nationals and mobile numbers of around 100 nationalities. Sources in the CBI said that the investigative agency plans to take up the matter with social media websites and hosting platforms under the relevant legal provisions to examine their role and liability.
02-01-25 07:42 pm
HK News Desk
ನ್ಯೂ ಇಯರ್ ದಿನವೇ ಬೆಂಗಳೂರಿನ ಯಮಹಾ ಬೈಕ್ ಶೋರೂಂನಲ್ಲ...
02-01-25 02:44 pm
ಹಾಸನ ; ಕೆರೆ ಬಳಿ ನ್ಯೂ ಇಯರ್ ಪಾರ್ಟಿ, ಮುಳುಗಿ ಇಬ್ಬ...
01-01-25 11:03 pm
Hassan Drunkards Office: ನಿತ್ಯ ದುಡಿ.. ಸತ್ಯ ನು...
31-12-24 10:06 pm
Honnavara Accident, Mangalore: ಹೊಸ ವರ್ಷಾಚರಣೆಯ...
31-12-24 05:47 pm
02-01-25 06:20 pm
HK News Desk
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
ಯೆಮನ್ ದೇಶದಲ್ಲಿ ಕೇರಳ ಮೂಲದ ನರ್ಸ್ ಗೆ ಮರಣದಂಡನೆ ;...
01-01-25 08:21 pm
ಕೊರಿಯಾ ಬಳಿಕ ಮತ್ತೊಂದು ಭೀಕರ ದುರಂತ ; ಆಫ್ರಿಕಾದಲ್ಲ...
31-12-24 11:57 am
ಬಿಹಾರದಲ್ಲಿ ಸಿಎಂ ನಿತೀಶ್ ವಿರುದ್ಧ ಬೀದಿಗಿಳಿದ ವಿದ್...
30-12-24 11:14 pm
02-01-25 09:26 pm
Mangalore Correspondent
Anil Lobo, MCC Bank, Robert Rosario, Mangalor...
02-01-25 03:16 pm
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
Veddavyas Kamath, Mangalore: ಡೆತ್ ನೋಟ್ ಬರೆದಿಟ...
01-01-25 10:16 pm
MP Brijesh Chowta, ESI Hospital in Mangalore:...
01-01-25 09:55 pm
31-12-24 11:32 am
Bangalore Correspondent
Online Fraud, Stock Market, Mangalore: ಯೂಟ್ಯೂ...
29-12-24 10:50 pm
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm