ಬ್ರೇಕಿಂಗ್ ನ್ಯೂಸ್
19-11-21 02:43 pm Mangaluru Correspondent ಕ್ರೈಂ
ಮಂಗಳೂರು, ನ.19: ಮಹತ್ವದ ಕಾರ್ಯಾಚರಣೆಯಲ್ಲಿ ಮಂಗಳೂರಿನ ಬರ್ಕೆ ಠಾಣೆ ಪೊಲೀಸರು ಭಾರೀ ಪ್ರಮಾಣದಲ್ಲಿ ಕಾರಿನಲ್ಲಿ ಒಯ್ಯುತ್ತಿದ್ದ ನಿಷೇಧಿತ 500 ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದು, ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಒಂದು ಕೋಟಿ 92 ಲಕ್ಷ 50 ಸಾವಿರ ಮೌಲ್ಯದ ನೋಟುಗಳಿದ್ದವು ಎನ್ನುವುದನ್ನು ಪೊಲೀಸರು ಮಾಹಿತಿ ನೀಡಿದ್ದಾರೆ.
ಒಂದು ಸಾವಿರ ಮತ್ತು 500 ಮುಖಬೆಲೆಯ ನೋಟು ಅಮಾನ್ಯಗೊಂಡು ಮೂರು ವರ್ಷ ಕಳೆದರೂ, ಭಾರೀ ಪ್ರಮಾಣದಲ್ಲಿ ಬಂಡಲ್ ಗಟ್ಟಲೆ ನೋಟುಗಳು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಪ್ರಕರಣ ಸಂಬಂಧಿಸಿ ನಗರದ ಕಣ್ಣೂರು ನಿವಾಸಿ ಜುಬೈರ್ ಹಮ್ಮಬ್ಬ(52), ಪಡೀಲ್ ವೀರನಗರ ನಿವಾಸಿ ದೀಪಕ್ ಕುಮಾರ್ (32), ಬಜ್ಪೆ ನಿವಾಸಿ ಅಬ್ದುಲ್ ನಾಸೀರ್ (40) ಎಂಬವರನ್ನು ಬಂಧಿಸಲಾಗಿದೆ.
ನ.18ರಂದು ರಾತ್ರಿ 11.30 ಗಂಟೆಗೆ ಕಾರಿನಲ್ಲಿ ಹಳೆ ನೋಟುಗಳನ್ನು ತರಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಡ್ಯಾರ್ ಕಡೆಯಿಂದ ಮಂಗಳೂರು ನಗರಕ್ಕೆ ಬಂದಿದ್ದ ಟೊಯೊಟಾ ಇನ್ನೋವಾ ಕಾರು ಲಾಲ್ ಬಾಗ್ ಮೂಲಕ ಮಣ್ಣಗುಡ್ಡಕ್ಕೆ ಬಂದಿದ್ದು, ಅಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ. ಕಾರನ್ನು ನಿಲ್ಲಿಸಿ, ಡಿಕ್ಕಿ ತೆಗೆದು ಪರಿಶೀಲನೆ ನಡೆಸಿದಾಗ ಎರಡು ಬ್ಯಾಗ್ ಕಂಡುಬಂದಿದ್ದು, ಅದರಲ್ಲಿ 500 ಮತ್ತು 1000 ಮುಖಬೆಲೆಯ ರಾಶಿ ರಾಶಿ ನೋಟುಗಳು ಪತ್ತೆಯಾಗಿವೆ. ಒಂದು ಸಾವಿರ ನೋಟಿನ ಹತ್ತು ಬಂಡಲ್ ಗಳಿದ್ದು, 50 ಲಕ್ಷ ಮೌಲ್ಯದ ನೋಟುಗಳಿದ್ದವು. 500 ಮುಖಬೆಲೆಯ 57 ಬಂಡಲ್ ಗಳಿದ್ದು ಒಂದು ಕೋಟಿಗೂ ಹೆಚ್ಚಿದ್ದವು. ಒಟ್ಟು 1.92 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಮತ್ತು ಚಿತ್ರದುರ್ಗ ಮೂಲದಿಂದ ಈ ನೋಟುಗಳನ್ನು ತಂದಿರುವುದಾಗಿ ಪ್ರಾಥಮಿಕ ಮಾಹಿತಿಗಳಿದ್ದು, ನಗದು ಹಣದ ಮೂಲದ ಬಗ್ಗೆ ಪತ್ತೆ ಮಾಡಲಾಗುವುದು. ಆರೋಪಿಗಳು ನೋಟುಗಳನ್ನು ಅಕ್ರಮವಾಗಿ ಮಂಗಳೂರಿಗೆ ತಂದು ಅದನ್ನು ನಗದೀಕರಿಸಲು ಯೋಜನೆ ಹಾಕಿದ್ದರು ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಎನ್ನಾರೈಗಳಿಗೆ ನೋಟು ನಗದೀಕರಣಕ್ಕೆ ಸೌಲಭ್ಯ
ಕೊರೊನಾ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಕ್ಕಿಬಿದ್ದು, ಎರಡು ವರ್ಷದಿಂದ ಊರಿಗೆ ಬರಲು ಸಾಧ್ಯವಾಗದೇ ಇದ್ದವರಿಗೆ ಮಾತ್ರ ತಮ್ಮಲ್ಲಿರುವ ಹಳೆಯ ನೋಟುಗಳನ್ನು ನಗದೀಕರಿಸಲು ಸರಕಾರ ಅವಕಾಶ ನೀಡಿತ್ತು. ಈ ಅವಕಾಶವನ್ನು ಉಪಯೋಗಿಸಿಕೊಂಡು ಆರೋಪಿಗಳು, ಹಲವಾರು ಮಂದಿಯನ್ನು ಸಂಪರ್ಕಿಸಿದ್ದಾರೆ. ಎನ್ನಾರೈಗಳಿಗೆ ಒಟ್ಟು ಮೌಲ್ಯದ 50 ಶೇಕಡಾ ಹಣವನ್ನು ಬ್ಯಾಂಕಿನಲ್ಲಿ ನಗದೀಕರಿಸಲು ಅವಕಾಶ ಇರುವುದರಿಂದ, ಎರಡು ಕೋಟಿ ಹಣದಲ್ಲಿ 20 ಶೇಕಡಾ ಕಮಿಷನ್ ತಮಗೆ ನೀಡಬೇಕೆಂದು ಪ್ಲಾನ್ ಮಾಡಿದ್ದರು. ಇದಕ್ಕಾಗಿ ಆರೋಪಿಗಳು ವಿವಿಧ ನೆಲೆಯಲ್ಲಿ ಗ್ರಾಹಕರನ್ನು ಸಂಪರ್ಕಿಸಿದ್ದು, ಡೀಲ್ ಕುದುರಿಸಿದ ಬಳಿಕ ಮಂಗಳೂರಿಗೆ ನೋಟಿನ ಬಂಡಲನ್ನು ತಂದಿದ್ದರು. ಆದರೆ, ಏನೋ ಯೋಜನೆ ಹಾಕ್ಕೊಂಡು ಬಂದಿದ್ದವರು ಇಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಒಟ್ಟು ಮೌಲ್ಯದ ಐದು ಪಟ್ಟು ದಂಡಕ್ಕೆ ಅವಕಾಶ
ಭಾರತ ಸರಕಾರ ಹಳೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಅವುಗಳನ್ನು ಇಟ್ಟುಕೊಳ್ಳುವುದು ಅಪರಾಧವಾಗಿರುತ್ತದೆ. ಯಾರೇ ಆಗಲಿ, ಹಳೆಯ ನೋಟುಗಳನ್ನು ಇಟ್ಟುಕೊಂಡಿದ್ದು ಪತ್ತೆಯಾದಲ್ಲಿ ಆತನಿಗೆ ಹತ್ತು ಸಾವಿರದ ವರೆಗೆ ದಂಡ ವಿಧಿಸಲು ಅವಕಾಶವಿದೆ. ಭಾರೀ ಪ್ರಮಾಣದಲ್ಲಿ ನೋಟುಗಳ ಶೇಖರಣೆ ಮಾಡಿದ್ದು ಪತ್ತೆಯಾದಲ್ಲಿ ಅದರ ಮೌಲ್ಯದ ಐದು ಪಟ್ಟು ದಂಡ ವಿಧಿಸುವುದಕ್ಕೂ ಕಾನೂನಿನಡಿ ಅವಕಾಶ ಇರುತ್ತದೆ. ಈಗ ದೊರೆತಿರುವ ನೋಟುಗಳು ಮತ್ತು ಆರೋಪಿಗಳು ಬಗ್ಗೆ ಇನ್ನಷ್ಟು ತನಿಖೆ ಮಾಡಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
City police on Friday November 19 seized Rs 1,92,50,000 worth old currency and arrested three people in connection with the case. The arrested are Zubair Hammabba (52) from Kannur, Deepak Kumar (32) from Padil and Abdul Naseer (40) from Bajpe. Zubair and Naseer are driver by profession while Deepak is an electrical contractor. The trio was carrying demonetised notes in a car and where on their way from Adyar to Lalbagh. The police stopped the car for routine checking and found the demonetized notes in two bags. There were 10 bundles of Rs 1,000 currency notes and 57 bundles of Rs 500. The police also seized the car.
02-01-25 07:42 pm
HK News Desk
ನ್ಯೂ ಇಯರ್ ದಿನವೇ ಬೆಂಗಳೂರಿನ ಯಮಹಾ ಬೈಕ್ ಶೋರೂಂನಲ್ಲ...
02-01-25 02:44 pm
ಹಾಸನ ; ಕೆರೆ ಬಳಿ ನ್ಯೂ ಇಯರ್ ಪಾರ್ಟಿ, ಮುಳುಗಿ ಇಬ್ಬ...
01-01-25 11:03 pm
Hassan Drunkards Office: ನಿತ್ಯ ದುಡಿ.. ಸತ್ಯ ನು...
31-12-24 10:06 pm
Honnavara Accident, Mangalore: ಹೊಸ ವರ್ಷಾಚರಣೆಯ...
31-12-24 05:47 pm
02-01-25 06:20 pm
HK News Desk
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
ಯೆಮನ್ ದೇಶದಲ್ಲಿ ಕೇರಳ ಮೂಲದ ನರ್ಸ್ ಗೆ ಮರಣದಂಡನೆ ;...
01-01-25 08:21 pm
ಕೊರಿಯಾ ಬಳಿಕ ಮತ್ತೊಂದು ಭೀಕರ ದುರಂತ ; ಆಫ್ರಿಕಾದಲ್ಲ...
31-12-24 11:57 am
ಬಿಹಾರದಲ್ಲಿ ಸಿಎಂ ನಿತೀಶ್ ವಿರುದ್ಧ ಬೀದಿಗಿಳಿದ ವಿದ್...
30-12-24 11:14 pm
02-01-25 09:26 pm
Mangalore Correspondent
Anil Lobo, MCC Bank, Robert Rosario, Mangalor...
02-01-25 03:16 pm
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
Veddavyas Kamath, Mangalore: ಡೆತ್ ನೋಟ್ ಬರೆದಿಟ...
01-01-25 10:16 pm
MP Brijesh Chowta, ESI Hospital in Mangalore:...
01-01-25 09:55 pm
31-12-24 11:32 am
Bangalore Correspondent
Online Fraud, Stock Market, Mangalore: ಯೂಟ್ಯೂ...
29-12-24 10:50 pm
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm