ಬ್ರೇಕಿಂಗ್ ನ್ಯೂಸ್
12-01-22 09:47 pm HK Desk news ಕ್ರೈಂ
ಕೊಟ್ಟಾಯಂ, ಜ.12 : ಪತ್ನಿಯರನ್ನು ಪರ ಪುರುಷರ ಜೊತೆ ಸೆಕ್ಸ್ ನಡೆಸಲು ಒಪ್ಪಿಸುವ ಹೀನ ದಂಧೆಯೊಂದು ಕೇರಳದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಗ್ರೂಪ್ ಮಾಡಿಕೊಂಡಿದ್ದು, ಎರಡು ಸಾವಿರಕ್ಕೂ ಹೆಚ್ಚು ಮಂದಿ ಗ್ರೂಪ್ ಸದಸ್ಯರಿದ್ದಾರೆ. ಅಲ್ಲದೆ, ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿಯೂ ಇದು ಸಕ್ರಿಯವಾಗಿತ್ತು. ಪತ್ನಿಯರನ್ನು ಪರ ಪುರುಷರಿಗೆ ಒಪ್ಪಿಸುವುದು, ತಾವು ಇನ್ನೊಬ್ಬ ಮಹಿಳೆಯೊಂದಿಗೆ ಮಲಗುವುದು ಹೀಗೆ ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧ ಏರ್ಪಟ್ಟಿತ್ತು. ಆದರೆ, ಕೆಲವು ಮಹಿಳೆಯರು ಈ ರೀತಿಯ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು.
ಜನವರಿ 8ರಂದು ಕೊಟ್ಟಾಯಂ ಜಿಲ್ಲೆಯ ಕರುಕಾಚಲ್ ಎಂಬ ಗ್ರಾಮದ 27 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಗಂಡನೇ ತನ್ನನ್ನು ಪರ ಪುರುಷರೊಂದಿಗೆ ಮಲಗಲು ಒತ್ತಾಯಿಸುತ್ತಿದ್ದಾನೆ. ಆತನ ಸೂಚನೆಯಂತೆ ಕೆಲವು ಯುವಕರು ಮನೆಗೆ ಬಂದು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಶಾಕ್ ಆಗುವ ರೀತಿಯ ವಿಚಾರ ಬೆಳಕಿಗೆ ಬಂದಿದೆ. ಆಕೆಯ ದೂರಿನಂತೆ, ಐದು ಮಂದಿ ತಮ್ಮ ಪತ್ನಿಯರ ಜೊತೆ ಮನೆಗೆ ಭೇಟಿ ನೀಡಿದ್ದಾರೆ. ಇಬ್ಬರು ಮದುವೆಯಾಗದ ಪುರುಷರು ಬಂದಿದ್ದಾರೆ. ತನ್ನನ್ನು ಅವರೊಂದಿಗೆ ಮಲಗುವಂತೆ ಗಂಡನೇ ಒತ್ತಾಯಿಸುತ್ತಿದ್ದಾನೆ ಎಂದು ತನ್ನ ಸೋದರನ ಜೊತೆ ಯುವತಿ ಪೊಲೀಸ್ ದೂರು ನೀಡಿದ್ದಾಳೆ.
ತನಿಖೆ ವೇಳೆ 14 ವಿವಿಧ ಗ್ರೂಪ್ ಪತ್ತೆ
ತನಿಖೆ ಸಂದರ್ಭದಲ್ಲಿ ಯುವತಿಯ ಗಂಡ, ಪತ್ನಿಯನ್ನು ಪರ ಪುರುಷರಿಗೆ ಒಪ್ಪಿಸಿ ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ ಅನ್ನುವ ವಿಚಾರವೂ ತಿಳಿದುಬಂದಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, 14 ವಿವಿಧ ಮಾದರಿಯ ಸೋಶಿಯಲ್ ಮೀಡಿಯಾ ಗ್ರೂಪ್ ಗಳು ಪತ್ನಿಯರನ್ನು ಹಂಚಿಕೊಳ್ಳುವ (wife swapping) ಕೃತ್ಯದಲ್ಲಿ ತೊಡಗಿಸಿವೆ. ಅಂದಾಜು ಎರಡು ಸಾವಿರಕ್ಕೂ ಹೆಚ್ಚು ದಂಪತಿ ಇದರಲ್ಲಿ ಸದಸ್ಯರಾಗಿದ್ದಾರೆ. ಇತರ ಮದುವೆಯಾಗದ ಸದಸ್ಯರು ಕೂಡ ಗ್ರೂಪಿನಲ್ಲಿದ್ದಾರೆ. ಕೆಲವರು ಮದುವೆಯಾಗದ ಪುರುಷರ ಜೊತೆ ತಮ್ಮ ಪತ್ನಿಯರನ್ನು ಹಣಕ್ಕಾಗಿ ಒಪ್ಪಿಸುತ್ತಿದ್ದರು.
ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್
ತನಿಖೆಯಲ್ಲಿ ಕಂಡುಬಂದ ಮಾಹಿತಿ ಪ್ರಕಾರ, ಮಹಿಳೆಯೊಬ್ಬಳು ಆರೋಪಿ ಪೈಕಿ ಒಬ್ಬನನ್ನು 2013ರಲ್ಲಿ ಮದುವೆಯಾಗಿದ್ದಳು. ಆನಂತರ, ಆತ ವಿದೇಶಕ್ಕೆ ತೆರಳಿದ್ದು 2018ರಲ್ಲಿ ಹಿಂತಿರುಗಿ ಬಂದಿದ್ದ. ವಿದೇಶದಿಂದ ಬಂದ ಬಳಿಕ ಆಕೆಯ ಗಂಡ ವೈಫ್ ಸ್ವಾಪಿಂಗ್ ಗ್ರೂಪಿನಲ್ಲಿ ಸಕ್ರಿಯನಾಗಿದ್ದು, ಪತ್ನಿಯನ್ನು ಇದಕ್ಕೆ ಸಹಕರಿಸುವಂತೆ ಒತ್ತಾಯಿಸಿದ್ದ. ವಿರೋಧ ವ್ಯಕ್ತಪಡಿಸಿದ್ದಕ್ಕೆ ಗ್ಯಾಸ್ ಉರಿಸಿ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದ. ಆನಂತರ ಇವರ ಮನೆಗೆ ಗೆಳೆಯರು ಅನ್ನುವ ಹೆಸರಲ್ಲಿ ಕೆಲವು ಪುರುಷರು ಬರತೊಡಗಿದ್ದರು. ಮನೆಯಲ್ಲಿ ರಾತ್ರಿ ಉಳಿಯುತ್ತಿದ್ದರು. ಇದರಿಂದ ಪರಿಸರದ ನಿವಾಸಿಗಳಲ್ಲಿ ಅನುಮಾನ ಬಂದಿದ್ದರಿಂದ ಪತ್ನಿ, ಈ ಬಗ್ಗೆ ಗಂಡನಲ್ಲಿ ನಿರಾಕರಣೆ ಮಾಡಿದ್ದಳು. ಆದರೆ, ಆಕೆಯ ಗಂಡ ತನ್ನಲ್ಲಿ ನಿನ್ನ ಪರ ಪುರುಷರ ಜೊತೆಗಿನ ಸೆಕ್ಸ್ ವಿಡಿಯೋ ಇದೆಯೆಂದು ಹೇಳಿ, ಕುಟುಂಬಸ್ಥರಿಗೆ ಕಳಿಸಿಕೊಡುವುದಾಗಿ ಬೆದರಿಕೆ ಹಾಕಿದ್ದ.
ದೂರು ನೀಡಿದ ಯುವತಿಯ ಸೋದರ ಮನೋರಮಾ ಸುದ್ದಿಸಂಸ್ಥೆಗೆ ಆಘಾತಕಾರಿ ಮಾಹಿತಿಯನ್ನು ನೀಡಿದ್ದಾನೆ. ಎಂಟು ಮಂದಿ ಸೇರಿ ತನ್ನ ಸೋದರಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ. ವಿರೋಧಿಸಿದ್ದಕ್ಕೆ ಆರೋಪಿಗಳು ಆಕೆಯನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದರು. ನನಗೆ ಮೊದಲು ವಿಷಯ ತಿಳಿದಾಗ, ನನ್ನ ಭಾವ ನನಗೆ ಹಲ್ಲೆ ನಡೆಸಲು ಮುಂದಾಗಿದ್ದ. ಆನಂತರ, ಈ ವಿಚಾರ ಯಾರಿಗೂ ಹೇಳಬೇಡ ಎಂದು ಹೇಳಿ ಕ್ಷಮೆಯನ್ನೂ ಯಾಚಿಸಿದ್ದ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದ. ಆದರೆ, ಆರೋಪಿಗಳ ಕಿರುಕುಳ ನಿಂತಿರಲಿಲ್ಲ. ಆರೋಪಿಗಳು ನೇರವಾಗಿ ಮನೆಗೆ ಬಂದು, ಮಕ್ಕಳ ತಲೆಯ ಮೇಲೆ ಚೂರಿ ಇಟ್ಟು ಆಕೆಯನ್ನು ತಮ್ಮ ಜೊತೆ ಮಲಗಲು ಒತ್ತಾಯಿಸುತ್ತಿದ್ದರು. ಮಕ್ಕಳು ಈ ಬಗ್ಗೆ ತಂದೆಗೆ ಹೇಳಿದರೂ, ಆತ ಕೇಳುತ್ತಿರಲಿಲ್ಲ ಎಂದು ಸೋದರ ತಿಳಿಸಿದ್ದಾನೆ.
ಮೆಸೆಂಜರ್, ಟೆಲಿಗ್ರಾಮ್ ನಲ್ಲಿ ದಂಧೆ ಶುರು
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ಎಸ್ ಸುದ್ದಿಸಂಸ್ಥೆಗೆ ಈ ಜಾಲದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಮೆಸೆಂಜರ್, ಟೆಲಿಗ್ರಾಮ್ ಗ್ರೂಪ್ ಮೂಲಕ ಸದಸ್ಯರ ಸಂಪರ್ಕ ಆಗುತ್ತದೆ. ಆನಂತರ, ಎರಡು- ಮೂರು ದಂಪತಿ ಒಬ್ಬರಿಗೊಬ್ಬರು ಕನೆಕ್ಟ್ ಆಗಿ ಒಂದೆಡೆ ಸೇರುತ್ತಾರೆ. ಮನೆಯಲ್ಲಾದರೆ ಸ್ಥಳೀಯರಿಗೆ ಸಂಶಯ ಬರುತ್ತೆ ಎಂದು ಹೊಟೇಲುಗಳಿಗೆ ತೆರಳುವುದನ್ನು ರೂಢಿ ಮಾಡುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ, ಒಬ್ಬ ಮಹಿಳೆಯನ್ನು ನಾಲ್ವರು ಪುರುಷರು ಸೇರಿ ಏಕಕಾಲದಲ್ಲಿ ಭೋಗಿಸುತ್ತಾರೆ. ಇದಕ್ಕಾಗಿ ಆಕೆಯ ಗಂಡ ದೊಡ್ಡ ಮೊತ್ತದ ಹಣವನ್ನೂ ಪಡೆಯುತ್ತಾನೆ. ಹಣಕ್ಕಾಗಿ ಒಂದು ದಿನಕ್ಕೆ ತನ್ನ ಪತ್ನಿಯನ್ನು ಇತರರಿಗೆ ಒಪ್ಪಿಸುತ್ತಾರೆ. ಹೊಟೇಲಿಗೆ ತೆರಳಿ, ಉಳಿದುಕೊಂಡು ಅಲ್ಲಿಯೇ ಈ ರೀತಿಯ ವೇಶ್ಯಾವಾಟಿಕೆ ನಡೆಯುತ್ತದೆ ಎಂದು ಅಧಿಕಾರಿ ಹೇಳುತ್ತಾರೆ.
ವಕೀಲರು, ವೈದ್ಯರಿಂದಲೂ ದಂಧೆಗೆ ಸಾಥ್
ಪ್ರಮುಖ ಆರೋಪಿಯಾಗಿರುವ ಒಬ್ಬ ಮಹಿಳೆಯ ಗಂಡ, ಸದ್ಯಕ್ಕೆ ವಿದೇಶಕ್ಕೆ ತೆರಳಿದ್ದು ಆತನನ್ನು ಬಂಧಿಸಲು ಪ್ರಯತ್ನ ನಡೆದಿದೆ. ಆದರೆ, ಈ ರೀತಿಯ ಕೊಡು- ಕೊಳ್ಳುವಿಕೆ, ಒಪ್ಪಿತ ವೇಶ್ಯಾವಾಟಿಕೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದರೂ, ಕೆಲವು ಮಹಿಳೆಯರ ವಿರೋಧ ಇದ್ದರೂ, ಯಾರು ಕೂಡ ದೂರು ನೀಡಲು ಮುಂದೆ ಬಂದಿರಲಿಲ್ಲ. ಕೇರಳದ ಎರಡು – ಮೂರು ಜಿಲ್ಲೆಗಳ ಸಮಾಜದಲ್ಲಿ ಪ್ರತಿಷ್ಠಿತ ಎನ್ನಿಸಿಕೊಂಡವರು ಇದರಲ್ಲಿ ಸದಸ್ಯರಾಗಿದ್ದಾರೆ. ವಕೀಲರು, ವೈದ್ಯರು ಕೂಡ ಈ ಗ್ರೂಪಿನಲ್ಲಿ ನಕಲಿ ಹೆಸರಿನ ಮೂಲಕ ಸದಸ್ಯರಾಗಿದ್ದಾರೆ. ಕೆಲವು ಪ್ರತಿಷ್ಠಿತ ಮಹಿಳೆಯರು ಕೂಡ ಇಂಥ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದಾರೆ. ತುಂಬ ವ್ಯವಸ್ಥಿತವಾಗಿ ಸೆಕ್ಸ್ ಹಗರಣದ ರೂಪದಲ್ಲಿ ಹೈಟೆಕ್ ದಂಧೆ ನಡೆಯುತ್ತಿದ್ದು, ಭಾರೀ ಮೊತ್ತದ ಹಣವೂ ಅದಲು ಬದಲಾಗುತ್ತಿದೆ. ಮೂರು- ನಾಲ್ಕು ಮಂದಿ ಒಬ್ಬ ಮಹಿಳೆಯನ್ನು ಹಂಚಿಕೊಳ್ಳುವುದಕ್ಕೆ ದೊಡ್ಡ ಮೊತ್ತವನ್ನು ಕೊಡಲಾಗುತ್ತಿತ್ತು.
On Sunday, seven people were detained when police raided a wife-swapping network in Kottayam. The police crackdown occurred when a woman claiming to be the wife of one of the racket’s participants made shocking internet revelations. The lady, a housewife, also filed a complaint with Karukachal police, alleging that her husband pushed her to have sexual intercourse with someone else. The arrest of the accused, a Karukachal local, led the authorities to unearth a larger network. According to the authorities, around 1,000 couples were involved in the racket.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm