ಬ್ರೇಕಿಂಗ್ ನ್ಯೂಸ್
04-02-22 09:55 pm HK Desk news ಕ್ರೈಂ
ಬೆಂಗಳೂರು, ಫೆ.4 : ವಿಕೃತ ಲೈಂಗಿಕ ಸುಖಕ್ಕಾಗಿ ಪತಿ - ಪತ್ನಿಯರಿಬ್ಬರೂ ತಮ್ಮನ್ನು ಪರಸ್ಪರ ಇತರರಿಗೆ ಹಂಚಿಕೊಂಡು ಹಣಕ್ಕಾಗಿ ಹೈಟೆಕ್ ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳದಲ್ಲಿ ಪತ್ನಿಯರ ಷೇರಿಂಗ್ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಅದೇ ಮಾದರಿಯ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ಬಯಲಿಗೆ ಬಂದಿದ್ದು ಪತಿ - ಪತ್ನಿ ಇಬ್ಬರೂ ಸೇರಿಕೊಂಡು ಸಮ್ಮತಿಯಿಂದಲೇ ತಮ್ಮನ್ನು ಷೇರ್ ಮಾಡುತ್ತಿದ್ದರು. ಇವರ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.

ಪತ್ನಿ ಇನ್ನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನು ನೋಡಿ ಆನಂದಿಸುತ್ತಿದ್ದ ಪತಿರಾಯ, ಅದಕ್ಕಾಗಿ ಇಂತಿಷ್ಟು ರೇಟ್ ಫಿಕ್ಸ್ ಮಾಡುತ್ತಿದ್ದ. ಇದಕ್ಕಾಗಿ ಆನ್‌ಲೈನ್ ತಾಣದಲ್ಲಿ ಗಾಳ ಹಾಕುತ್ತಿದ್ದ ಪತಿರಾಯ ವಿನಯ ಕುಮಾರ್ ಎಂಬಾತ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಶಾಪ್ ನಲ್ಲಿ ಸೇಲ್ಸ್ ಮನ್ ಆಗಿರುವ ವಿನಯ್ ಕುಮಾರ್, ಸಹೋದ್ಯೋಗಿ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ.

ಆಬಳಿಕ ಪತ್ನಿಯನ್ನ ಇತರರಿಗೆ ಷೇರ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ವಿನಯ್ ಕುಮಾರ್ ಗೆ ಪತ್ನಿಯಿಂದಲೂ ಸಮ್ಮತಿ ಸಿಕ್ಕಿದೆ. ಇಬ್ಬರ ಬಯಕೆ ಈಡೇರುವುದರ ಜೊತೆಗೆ ಆರ್ಥಿಕ ಲಾಭವೂ ಇದೆ ಎಂದು ಯೋಚಿಸಿದ್ದ ದಂಪತಿ, ಅದಕ್ಕಾಗಿ ಜಾಲತಾಣದಲ್ಲಿ ತಮ್ಮನ್ನೇ ಹರಾಜಿಗೆ ಇಟ್ಟಿದ್ದರು. ವಿನಯ ಕುಮಾರ್ ಟ್ವಿಟರ್, ಟೆಲಿಗ್ರಾಂ, ಫೇಸ್ಬುಕ್ ಹೀಗೆ ಹಲವಾರು ಸೋಶಿಯಲ್ ಮೀಡಿಯಾಗಳಲ್ಲಿ ಖಾತೆಯನ್ನು ತೆರೆದು ವೈಫ್ ಸ್ವಾಪಿಂಗ್ ದಂಧೆಗೆ ಆಹ್ವಾನ ನೀಡುತ್ತಿದ್ದ. ಪತ್ನಿಯ ಮಾದಕ ಭಂಗಿಗಳ ಫೋಟೊ ತೆಗೆದು, ನನ್ ಹೆಂಡ್ತಿ ತುಂಬ ಹಾಟ್ ಇದಾಳೆ. ಯಾರಾದ್ರೂ ಬಯಸಿದರೆ ಸಂಪರ್ಕಿಸಿ ಎಂದು ಬಹಿರಂಗವಾಗಿಯೇ ಆಹ್ವಾನ ನೀಡುತ್ತಿದ್ದ. ವೈಫ್ ಸ್ವಾಪಿಂಗ್ ಬಗ್ಗೆ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದ ವಿನಯ ಕುಮಾರ್, ತನ್ನ ನಂಬರ್ ನೀಡದೇ ಮೆಸೇಜ್ ಮಾಡುವಂತೆ ಹೇಳುತ್ತಿದ್ದ.

ಈತನ ವಿಲಕ್ಷಣ ಆಫರ್ ಕಂಡು ಕೆಲವರು ನೇರವಾಗಿ ಅದನ್ನು ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡುತ್ತಿದ್ದರು. ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಸೈಬರ್ ಪೊಲೀಸರ ಗಮನಕ್ಕೂ ತಂದಿದ್ದರು. ಇದರಿಂದ ಆ್ಯಕ್ಟೀವ್ ಆಗಿದ್ದ ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಪೊಲೀಸರು, ಸುಮೊಟೋ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದಾಗ, ಟ್ವಿಟರ್ ಖಾತೆ ಸಿಂಗಸಂದ್ರ ಬಳಿ ಆ್ಯಕ್ಟಿವ್ ಇರುವುದು ಪತ್ತೆಯಾಗಿದ್ದು ಆರೋಪಿ ವಿನಯ್ ಕುಮಾರ್ ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ವಿಕೃತ ಗಂಡ - ಹೆಂಡತಿ ಈಗಾಗಲೇ ಹಲವರ ಜೊತೆ ಲೈಂಗಿಕ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬಯಲಾಗಿದೆ. ಅದಕ್ಕಾಗಿ ಹಣವನ್ನೂ ಪಡೆದಿದ್ದರು. ಟ್ವಿಟರ್ ನಲ್ಲಿ 25 ರಿಂದ 30 ರ ಒಳಗಿನವರಿಗೆ ಆದ್ಯತೆ ಎಂದು ಮೊದಲೇ ಕಂಡಿಷನ್ ಇಡುತ್ತಿದ್ದರು. ಹೀಗಾಗಿ ಯುವಕರನ್ನು ಮಾದಕ ಫೋಟೊ ತೋರಿಸಿ ಸೆಳೆದುಕೊಂಡು ತಮ್ಮ ಮನೆಗೇ ಕರೆಸಿಕೊಳ್ಳುತ್ತಿದ್ದರು. ಈಮೂಲಕ ಒಂದು ಕಡೆ ಹಣ, ಇನ್ನೊಂದ್ಕಡೆ ಮಜಾ ಮಾಡುತ್ತಿದ್ದರು.
The police on Friday, February 4, arrested a man on charges of going public with his wife on social media, seeking partners in Bengaluru. The arrested person has been identified as Vinay Kumar, a salesman in an electric shop. According to police, the accused Vinay Kumar had married his colleague after falling in love with her and the couple shared similar weird fantasies.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm