ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ತೊಕ್ಕೊಟ್ಟಿನ ವಸ್ತ್ರ ಮಳಿಗೆಯಲ್ಲಿ ಬುರ್ಖಾಧಾರಿ ಮಹಿಳೆಯರ ಕೈಚಳಕ ; ಬಟ್ಟೆ ಪ್ಯಾಕೆಟ್ ಎಗರಿಸುತ್ತಿರುವ ಸಿಸಿಟಿವಿ ದೃಶ್ಯ ಸೆರೆ !

08-03-22 10:57 pm       mangalore correspondent   ಕ್ರೈಂ

ತೊಕ್ಕೊಟ್ಟಿನ ಸ್ಟುಡಿಯೊ ಕಮ್ ವಸ್ತ್ರ ಮಳಿಗೆಯೊಂದರಲ್ಲಿ‌ ಇಬ್ಬರು ಬುರ್ಖಾಧಾರಿ ಮಹಿಳೆಯರು ಕೈಚಳಕ ತೋರಿದ್ದು, ನೈಟಿಗಳನ್ನು ಬುರ್ಖಾದ ಒಳಗಿಟ್ಟು ಎಗರಿಸಿದ ಸಿಸಿಟಿವಿ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. 

 ಉಳ್ಳಾಲ, ಮಾ.8 : ತೊಕ್ಕೊಟ್ಟಿನ ಸ್ಟುಡಿಯೊ ಕಮ್ ವಸ್ತ್ರ ಮಳಿಗೆಯೊಂದರಲ್ಲಿ‌ ಇಬ್ಬರು ಬುರ್ಖಾಧಾರಿ ಮಹಿಳೆಯರು ಕೈಚಳಕ ತೋರಿದ್ದು, ನೈಟಿಗಳನ್ನು ಬುರ್ಖಾದ ಒಳಗಿಟ್ಟು ಎಗರಿಸಿದ ಸಿಸಿಟಿವಿ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ತೊಕ್ಕೊಟ್ಟು ಒಳಪೇಟೆಯ ಚರ್ಚ್ ರಸ್ತೆಯಲ್ಲಿರುವ ವೆಲಂಕಣಿ ಲೇಡೀಸ್ ಸೆಲೆಕ್ಷನ್ಸ್ ಕಮ್ ಸ್ಟುಡಿಯೋದಲ್ಲಿ ಪಮಾ.7ರಂದು ಮಧ್ಯಾಹ್ನ ಘಟನೆ ನಡೆದಿದೆ. ಮಳಿಗೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದ ವೇಳೆ ಗ್ರಾಹಕರ ಸೋಗಲ್ಲಿ ಬಂದಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರು ಬಟ್ಟೆ ಖರೀದಿಸುವ ನೆಪದಲ್ಲಿ ಸಿಬ್ಬಂದಿಯನ್ನ ಯಾಮಾರಿಸಿ ಕೈಚಳಕ ತೋರಿದ್ದಾರೆ. ಸಿಬ್ಬಂದಿ ಕೆಳಗಡೆ ಬಾಗಿ ಹುಡುಕಾಟ ನಡೆಸುತ್ತಿದ್ದಾಗ ಕಪಾಟಿನಿಂದ ಏಳೆಂಟು ನೈಟಿಗಳನ್ನ ಬುರ್ಖಾದೊಳಗೆ ತೂರಿಸಿಕೊಂಡು ಕಾಲ್ಕಿತ್ತಿದ್ದಾರೆ. ಮಳಿಗೆಯ ಮಾಲಕರು ಅನುಮಾನ ಬಂದು ರಾತ್ರಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬುರ್ಖಾಧಾರಿ ಇಬ್ಬರು ಮಹಿಳೆಯರು ಬ್ಯಾರಿ ಭಾಷೆ ಮಾತನಾಡುತ್ತಿದ್ದುದಾಗಿ ಮಳಿಗೆಯ ಮಹಿಳಾ ಸಿಬ್ಬಂದಿ ಹೇಳಿದ್ದಾರೆ. ಸದ್ಯ ಈ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Mangalore Muslims woman hide Nighty inside hijab at Thokottu store, caught on CCTV. The video of this has gone viral on social media. The two nab the nighty from the store and hide it inside their hijab.