ಬ್ರೇಕಿಂಗ್ ನ್ಯೂಸ್
22-07-25 03:02 pm HK News Desk ಕರ್ನಾಟಕ
ಮಂಡ್ಯ, ಜುಲೈ 22 : ಬೇಕರಿಯಿಂದ ತಂದಿದ್ದ ಕಲರ್ ಫುಲ್ ಕೇಕ್ ತಿಂದು ಒಂದು ವರ್ಷದ ಮಗು ಅಸ್ವಸ್ಥಗೊಂಡಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.
ಆನಂದ್ ಎಂಬುವವರು ತಮ್ಮ ಪುಟ್ಟ ಮಗಳಿಗಾಗಿ ಪಟ್ಟಣದ ಹೈ ಟೆಕ್ ಕಾವೇರಿ ಬೇಕರಿಯಿಂದ ಕೇಕ್ ಖರೀದಿಸಿದರು. ಕೇಕ್ ತಿಂದ ಕೆಲ ಹೊತ್ತಲ್ಲೇ ಮಗು ಅಸ್ವಸ್ಥಗೊಂಡಿದೆ. ಕೊನೆಗೆ ಆಕೆಯ ತಂದೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ತಪಾಸಣೆ ಮಾಡಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ತಂದಿದ್ದ ಕೇಕ್ ಪರಿಶೀಲಿಸಿದಾಗ ಅದರಲ್ಲಿ ಹುಳುಗಳ ರಾಶಿ ಇರೋದು ಪತ್ತೆಯಾಗಿದೆ. ಬೆನ್ನಲ್ಲೇ ಆನಂದ್, ಆತನ ಸ್ನೇಹಿತರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಬೇಕರಿ ಹೋಗಿ ಕಿಚನ್ ಪರಿಶೀಲನೆ ಮಾಡಿದ್ದಾಗ ಬೆಚ್ಚಿ ಬಿದ್ದಿದ್ದಾರೆ. ಕಿಚನ್ ಗಬ್ಬು ನಾರುತ್ತಿದ್ದು, ತಯಾರಿ ಮಾಡಿದ್ದ ಕೇಕ್ ಗಳನ್ನ ಮೂರು ನಾಲ್ಕು ದಿನ ಫ್ರಿಜ್ಜಿನಲ್ಲಿಟ್ಟು, ಹುಳಗಳಿಂದ ತೇಲಾಡುತ್ತಿದ್ದ ಸ್ವೀಟ್ ಹಾಗೂ ಕೇಕ್ ಗಳನ್ನ ಗ್ರಾಹಕರಿಗೆ ಮಾರುತ್ತಿದ್ದ ವಿಷಯ ತಿಳಿದು ಬಂದಿದೆ.
ಬೇಕರಿ ಮಾಲೀಕ ಮಹೇಶ್ಗೆ ಪೋಷಕರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದು, ನಂತರ ಪುರಸಭಾ ಅಧಿಕಾರಿಗಳು, ವೈದ್ಯಾಧಿಕಾರಿಗಳು ಬೇಕರಿಗೆ ಬೀಗ ಜಡಿದಿದ್ದಾರೆ.
A shocking case of food contamination has emerged from Nagamangala, Mandya, where a one-year-old baby girl was hospitalized after consuming a worm-infested, colorful cake bought from a local bakery.
22-07-25 11:10 pm
Bangalore Correspondent
GST Notices: ಜಿಎಸ್ಟಿ ತೆರಿಗೆ ನೋಟಿಸ್ ; ವ್ಯಾಪಾರಸ...
22-07-25 10:41 pm
GST Notice, Union Minister Pralhad Joshi: ರಾಜ...
22-07-25 10:30 pm
Mandya Bakery, Cake, Sealed: ಕಲರ್ ಫುಲ್ ಕೇಕ್ ನ...
22-07-25 03:02 pm
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
22-07-25 11:13 pm
Mangalore Correspondent
ಧರ್ಮಸ್ಥಳ ಕೇಸ್ ; ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ...
22-07-25 10:57 pm
Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ...
22-07-25 09:42 pm
Mangalore Hotel Kodakkene Owner Suicide: ಹೊಟೇ...
22-07-25 01:27 pm
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
22-07-25 09:45 pm
Mangalore Correspondent
Kalaburagi Jewellery Robbery, Arrest: ಕಲಬುರಗಿ...
22-07-25 12:38 pm
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm