ಬ್ರೇಕಿಂಗ್ ನ್ಯೂಸ್
04-01-26 06:38 pm Mangalore Correspondent ದೇಶ - ವಿದೇಶ
ವಾಷಿಂಗ್ಟನ್, ಜ.4: ದಿಢೀರ್ ಬೆಳವಣಿಗೆಯಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕಾ ಭದ್ರತಾ ಪಡೆಗಳು ಕಿಡ್ನಾಪ್ ಮಾಡಿ, ನ್ಯೂಯಾರ್ಕ್‌ಗೆ ಕರೆತಂದು ಜೈಲಿಗೆ ತಳ್ಳಿದೆ. ತನ್ನ ಬಗಲಲ್ಲೇ ನಿಂತುಕೊಂಡು ಅಮೆರಿಕಾ ವಿರುದ್ಧ ಕೆಂಡ ಕಾರುತ್ತಿದ್ದ ವೆನಿಜುವೆಲಾ ಅಧ್ಯಕ್ಷನ ವಿರುದ್ಧ ಡೊನಾಲ್ಡ್ ಟ್ರಂಪ್ ಪ್ರತೀಕಾರದ ಕ್ರಮ ತೆಗೆದುಕೊಂಡಿದ್ದು ಈ ಕ್ರಮವನ್ನು ಚೀನಾ ಸೇರಿದಂತೆ ವಿಶ್ವ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.
ಮಡುರೊ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಚೀನಾ ಒತ್ತಾಯಿಸಿದೆ. ಶನಿವಾರ ರಾತ್ರಿ 12 ಹೆಲಿಕಾಪ್ಟರ್ ಗಳಲ್ಲಿ ಬಂದಿದ್ದ ಅಮೆರಿಕದ ಭದ್ರತಾ ಪಡೆಗಳು ನೇರವಾಗಿ ಕಾರ್ಯಾಚರಣೆ ನಡೆಸಿದ್ದು ಮಡುರೋ ಅವರ ನೆಲೆಯನ್ನು ಪತ್ತೆ ಮಾಡಿ ಬಂಧನ ಮಾಡಿವೆ. ವೆನಿಜುವೆಲಾ ಭದ್ರತಾ ಪಡೆಗಳು ಏನಾಗುತ್ತಿದೆ ಎಂದು ಊಹಿಸುವಷ್ಟರಲ್ಲಿ ಮಡುರೋ ಅವರನ್ನು ಅಮೆರಿಕಾ ವಶಕ್ಕೆ ಪಡೆದು ಹೊತ್ತೊಯ್ದಿತ್ತು.



ಇತ್ತ ವೆನಿಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್ ನೇಮಕವಾಗಿದ್ದಾರೆ. ಶನಿವಾರ ರಾತ್ರಿ ವೆನುಜುವೆಲಾದ ರಾಜಧಾನಿ ಕ್ಯಾರಕಸ್ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ತನ್ನ ಮನೆಯಲ್ಲಿದ್ದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಅಮೆರಿಕಾದ ಕ್ರಮ ಅಂತರಾಷ್ಟ್ರೀಯ ಕಾನೂನನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ. ವೆನಿಜುವೆಲಾದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ. ಅಲ್ಲದೆ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಒಡ್ಡುತ್ತದೆ. ಅಮೆರಿಕವು ವಿಶ್ವಸಂಸ್ಥೆಯ ಧ್ಯೇಯ ಮತ್ತು ತತ್ವಗಳಿಗೆ ಬದ್ಧವಾಗಿರಬೇಕು. ಇತರ ದೇಶಗಳ ಸಾರ್ವಭೌಮತ್ವ ಉಲ್ಲಂಘಿಸುವುದನ್ನು ನಿಲ್ಲಿಸಬೇಕು" ಎಂದು ಚೀನಾ ಒತ್ತಾಯಿಸಿದೆ.
ಮಡುರೊ ಮಾದಕ ವಸ್ತು ಕಳ್ಳಸಾಗಣೆ ಜಾಲದ ಮುಖ್ಯಸ್ಥರಾಗಿ ನಾರ್ಕೋ ಟೆರರಿಸಂನಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್, ಅಮೆರಿಕಕ್ಕೆ ಅಕ್ರಮ ವಲಸೆ ಹೆಚ್ಚಾಗಲು ಇವರೇ ಕಾರಣ. ಮಡುರೊ ಅಧಿಕಾರದಲ್ಲಿ ಇರುವುದೇ ಅಕ್ರಮ ಎಂದು ಆರೋಪಿಸಿದ್ದು ಮಡುರೊ ಅವರನ್ನು ಅಪರಾಧಿಯಂತೆ ಕೈಗೆ ಕೋಳ ಹಾಕಿ ಬಂಧಿಸಿಟ್ಟಿದೆ.
In a dramatic overnight operation, US security forces allegedly entered Venezuela, detained President Nicolás Maduro and his wife, and transported them to New York, sparking international condemnation. China and several world nations denounced the move as a blatant violation of international law and Venezuelan sovereignty, demanding Maduro’s immediate release and urging dialogue. Following the incident, Delsy Rodríguez has been named interim president, while Washington accuses Maduro of leading a major narco-terrorism network and fueling illegal migration into the US.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am