ಬ್ರೇಕಿಂಗ್ ನ್ಯೂಸ್
23-03-23 12:30 pm Source: news18 ಸಿನಿಮಾ
ದೊಡ್ಮನೆ ಯುವ ರಾಜಕುಮಾರ್ ಅಭಿನಯದ ಮೊದಲ ಸಿನಿಮಾ ಯುವ ಚಿತ್ರದ ಪೋಸ್ಟರ್ ಭಾರೀ ಗಮನ ಸೆಳೆದಿದೆ. ಮೊದಲ ಟೀಸರ್ ಅಂತೂ ಭರ್ಜರಿಯಾಗಿಯೇ ಇದೆ. ಇದನ್ನ ಕಂಡ ದೊಡ್ಮನೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ರಾಜಕುಮಾರ ಚಿತ್ರದ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಒಳ್ಳೆ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ದೊಡ್ಮನೆಯ ಯುವರಾಜನನ್ನ ಕನ್ನಡ ನಾಡಿಗೆ ಪರಿಚಯಿಸಲು ಒಳ್ಳೆ ಕಥೆಯನ್ನ ಮಾಡಿಕೊಂಡಿದ್ದಾರೆ. ಟೀಸರ್‌ನಲ್ಲಿ ಆ ಒಂದು ಕಥೆಯ ಸಣ್ಣ ಝಲಕ್ ಕೊಟ್ಟಿದ್ದಾರೆ.
ಯುವ ಚಿತ್ರದಲ್ಲಿ ಫ್ಯಾಮಿಲಿ ಎಮೋಷನಲ್ ಎಲಿಮೆಂಟ್ಸ್ ಕೂಡ ಇವೆ. ಯುವಕರಿಗೆ ಸ್ಪೂರ್ತಿ ಆಗೊ ಕಥೆಯನ್ನ ಕೂಡ ಸಂತೋಷ್ ಆನಂದ್ ರಾಮ್ ಮಾಡಿಕೊಂಡಿದ್ದಾರೆ. ಚಿತ್ರದ ಕೆಲಸ ಎಲ್ಲಿಗೆ ಬಂತು ಅನ್ನೋದಕ್ಕೂ ಉತ್ತರ ಸಿಕ್ಕಿದೆ. ಯುವ ಚಿತ್ರದ ಮೊದಲ ಟೈಟಲ್ ಟೀಸರ್ ಮಾರ್ಚ್-3 ರಂದು ರಿಲೀಸ್ ಆಗಿತ್ತು. ಈ ದಿನ ಕನ್ನಡ ಇಂಡಸ್ಟ್ರಿಗೆ ತುಂಬಾ ವಿಶೇಷ ದಿನವೇ ಆಗಿದೆ. ಕನ್ನಡದ ಮೊದಲ ಟಾಕಿ ಸಿನಿಮಾ ಸತಿ ಸುಲೋಚನಾ ಚಿತ್ರ ಈ ದಿನವೇ ರಿಲೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಯುವ ಸಿನಿಮಾದ ಫಸ್ಟ್ ಟೀಸರ್ ರಿಲೀಸ್ ಆಗಿತ್ತು.
ಯುವ ಚಿತ್ರದ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದೆ. ಟೀಸರ್ ಕೂಡ ಸ್ಪೆಷಲ್ ಆಗಿಯೇ ಕಂಡಿದೆ. ಆದರೆ ಸಿನಿಮಾ ಶೂಟಿಂಗ್ ಈಗಲೇ ಶುರು ಆಗಲಿಲ್ಲ. ಮಾರ್ಚ್-3 ರಂದು ಚಿತ್ರಕ್ಕೆ ಅದ್ಧೂರಿಯಾಗಿಯೇ ಮುಹೂರ್ತ ಕೂಡ ನಡೆದಿದೆ. ಯುವ ಸಿನಿಮಾದ ಚಿತ್ರೀಕರಣ ಇದೇ ಏಪ್ರಿಲ್ ತಿಂಗಳಲ್ಲಿ ಶುರು ಆಗುತ್ತದೆ. ಏಪ್ರಿಲ್ ಮೊದಲ ವಾರದಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಶುರು ಆಗುತ್ತಿದೆ. ಯುವ ರಾಜಕುಮಾರ್ ಈ ಚಿತ್ರದ ಟೈಟಲ್ ಟೀಸರ್ ಮತ್ತು ಪೋಸ್ಟರ್ ಮೂಲಕ ಭರವಸೆ ಮೂಡಿಸಿದ್ದಾರೆ. ಪುನೀತ್ ಅಭಿಮಾನಿಗಳು ಯುವ ರಾಜಕುಮಾರ್ ಅವರಲ್ಲಿ ಪುನೀತ್ ಅವರನ್ನ ಕಾಣುತ್ತಿದ್ದಾರೆ. ಇನ್ನುಳಿದಂತೆ ಯವ ಕನ್ನಡದ ಮತ್ತೊಂದು ಭರವಸೆ ಚಿತ್ರ ಆಗಲಿದೆ.
kannada newcomer yuva rajkumar yuva cinema new updates.
08-06-23 12:43 pm
Bangalore Correspondent
ಸಕಲೇಶಪುರ ; ಕ್ಯಾಂಪ್ನಲ್ಲಿ ಮಧ್ಯಾಹ್ನದ ಊಟ ಸೇವಿಸಿ...
07-06-23 06:54 pm
ವಯಸ್ಸು, ಅನಾರೋಗ್ಯ, ವಿರೋಧಿ ಅಲೆ ; 25ರಲ್ಲಿ 13 ಬಿಜ...
07-06-23 03:17 pm
13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸ...
06-06-23 10:38 pm
ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸುಳಿವ...
06-06-23 10:28 pm
07-06-23 10:58 pm
HK News Desk
ಟಿಪ್ಪು, ಔರಂಗಜೇಬ್ ವೈಭವೀಕರಿಸಿ ಪೋಸ್ಟ್ ; ಕೊಲ್ಲಾಪು...
07-06-23 10:32 pm
ಯುಪಿಯಲ್ಲಿ ಅತೀಕ್ ಅಹ್ಮದ್ ಬೆನ್ನಲ್ಲೇ ಮತ್ತೊಬ್ಬ ಗ...
07-06-23 08:51 pm
ಮೋದಿ ಮ್ಯಾಜಿಕ್, ಹಿಂದುತ್ವದಿಂದ ಚುನಾವಣೆ ಗೆಲ್ಲಕ್ಕಾ...
06-06-23 09:37 pm
ತ್ರಿವಳಿ ರೈಲು ದುರಂತ ; 40 ಜನರ ಸಾವಿಗೆ ವಿದ್ಯುತ್ ಶ...
06-06-23 08:18 pm
08-06-23 10:48 am
Mangalore Correspondent
ಮಂಗಳೂರು-ಅಹಮದಾಬಾದ್ ನಡುವೆ ವಿಶೇಷ ರೈಲು ; ಜೂನ್ 9ರ...
07-06-23 11:09 pm
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ ; ಕರಾವಳಿಯಲ್ಲ...
07-06-23 09:34 pm
ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿ...
07-06-23 09:13 pm
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಸಾವು ; ಎರಡು ಹು...
07-06-23 02:04 pm
06-06-23 10:43 am
Mangalore Correspondent
Illegal Cow Transport: ಕುತ್ತಾರಿನಲ್ಲಿ ಉಸಿರುಗಟ್...
05-06-23 01:02 pm
ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ; ಪ್ರಶ್ನಿಸಿದಕ್ಕೆ...
04-06-23 02:14 pm
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm