ಬ್ರೇಕಿಂಗ್ ನ್ಯೂಸ್
27-03-23 11:50 am Source: news18 ಸಿನಿಮಾ
ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾ ಎಲ್ಲಿಗೆ ಬಂದಿದೆ. ಸಿನಿಮಾದ ರಿಲೀಸ್ ಹಂತಕ್ಕೆ ಬಂದಿದಿಯಾ? ಧ್ರುವ ಸರ್ಜಾ ಡಬ್ಬಿಂಗ್ ಮಾಡಿರೋದು ಇದೇ ಚಿತ್ರಕ್ಕೆ ಅಲ್ವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಹೌದು ಅಂತಲೇ ಹೇಳಬೇಕು. ಯಾಕೆಂದ್ರೆ, ರಾಜಮಾರ್ತಾಂಡ ಸಿನಿಮಾ ಬಹುತೇಕ ರಿಲೀಸ್‌ಗೆ ರೆಡಿ ಆಗಿದೆ. ಚಿರಂಜೀವಿ ಸರ್ಜಾ ಅವರು ತಮ್ಮ ರಾಜಮಾರ್ತಾಂಡ ಸಿನಿಮಾದ ಬಗ್ಗೆ ತುಂಬಾನೇ ಪ್ರೀತಿ ಇಟ್ಟುಕೊಂಡಿದ್ದರು. ತುಂಬಾ ಚೆನ್ನಾಗಿಯೇ ಸಿನಿಮಾ ಬರುತ್ತಿದೆ ಅಂತಲೂ ಹೇಳಿಕೊಂಡಿದ್ದರು. ಅದೇ ರೀತಿನೇ ಸಿನಿಮಾದ ಶೂಟಿಂಗ್ ಅನ್ನೂ ಪೂರ್ಣಗೊಳಿಸಿದ್ದರು. ಆದರೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಚಿರು ಎಲ್ಲರನ್ನೂ ಅಗಲಿರೋದು ಈಗಲೂ ಮಾಸದ ನೋವಾಗಿ ಉಳಿದಿದೆ.
ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾ ಚೆನ್ನಾಗಿಯೇ ಬಂದಿದೆ. ಈ ಚಿತ್ರದ ಡಬ್ಬಿಂಗ್ ಒಂದೇ ಬಾಕಿಯಿತ್ತು. ಆ ಕೆಲಸವನ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೂರ್ಣಗೊಳಿಸಿ ಚಿತ್ರ ತಂಡಕ್ಕೆ ಸಪೋರ್ಟ್ ಮಾಡಿದ್ದಾರೆ. ಅಣ್ಣನ ಚಿತ್ರಕ್ಕೆ ಡಬ್ಬಿಂಗ್ ಮಾಡೋದೇ ಖುಷಿನೇ. ಆದರೆ ಅಣ್ಣನಿಲ್ಲದೇ ಹೇಗೆ ಅನ್ನೋ ನೋವು ಕಾಡಿದ್ದು ಇದೆ. ಅದು ಡಬ್ಬಿಂಗ್ ವೇಳೆ ಇನ್ನೂ ಹೆಚ್ಚಾಗಿತ್ತು. ಆ ಕಾರಣಕ್ಕೇನೆ ಡಬ್ಬಿಂಗ್ ಮಾಡೋವಾಗ ಅಣ್ಣನನ್ನ ನೆನೆದು ಧ್ರುವ ತುಂಬಾ ಭಾವುಕರಾಗಿದ್ದರು.
ರಾಜಮಾರ್ತಾಂಡ ಸಿನಿಮಾದ ಶೂಟಿಂಗ್ ಡಬ್ಬಿಂಗ್ ಹೀಗೆ ಎಲ್ಲವೂ ಈಗ ಪೂರ್ಣ ಆಗಿದೆ. ಸದ್ಯ ಚಿತ್ರಕ್ಕೆ ಡಿ.ಟಿ.ಎಸ್. ಕೆಲಸ ನಡೆಯುತ್ತಿದೆ. ಇದೇ ಏಪ್ರಿಲ್‌ನಲ್ಲಿ ಸಿನಿಮಾ ತೆರೆಗೆ ತರೋ ಪ್ಲಾನ್ ಅನ್ನ ಸಿನಿಮಾ ತಂಡ ಹಾಕಿಕೊಂಡಿದೆ. ರಾಜಮಾರ್ತಾಂಡ ಚಿತ್ರದಲ್ಲಿ ಚಿರುಗೆ ಮೇಘಶ್ರೀ ಮತ್ತು ದೀಪ್ತಿ ಸಾತಿ ಜೋಡಿ ಆಗಿದ್ದಾರೆ. ಇದೇ ಚಿತ್ರದಲ್ಲಿ ಟಗರು ಚಿತ್ರ ಖ್ಯಾತಿಯ ನಟಿ ತ್ರಿವೇಣಿ ಕೂಡ ಅಭಿನಯಿಸಿದ್ದಾರೆ.
ರಾಜಮಾರ್ತಾಂಡ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ದೇವರಾಜ್, ಚಿಕ್ಕಣ್ಣ, ಭಜರಂಗಿ ಲೋಕಿ, ಶಂಕರ್ ಅಶ್ವಥ್ ಇವರೆಲ್ಲ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಕೆ. ರಾಮನಾರಾಯಣ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.
kannada actor chiranjeevi sarja movie rajamarthand almost ready to release.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm