ಬ್ರೇಕಿಂಗ್ ನ್ಯೂಸ್
11-04-23 12:43 pm Source: news18 ಸಿನಿಮಾ
ನಟರಿಗೆ ಹಲವಾರು ಬಗೆಯಲ್ಲಿ ವಿಶೇಷಣೆ ಹೆಸರು ಇಟ್ಟು ಕರೆಯುತ್ತಾರೆ. ಮಾಲಿವುಡ್ ನಟ ಮಾತ್ರ ತಮಗೆ ಕೊಟ್ಟ ಈ ವಿಶೇಷತೆಯನ್ನು ಇಷ್ಟಪಟ್ಟಿಲ್ಲ. ಬದಲಾಗಿ ಈ ರೀತಿ ಕರೆಯಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಕಾರಣ ಏನು ಗೊತ್ತಾ? ನಟ ಟೊವಿನೋ ಥಾಮಸ್ ಅವರು 2018 ರ ಪ್ರವಾಹದ ಸಮಯದಲ್ಲಿ ಮಾಡಿದ ಕೆಲಸಗಳನ್ನು ನೋಡಿದ ನಂತರ, ಅವರನ್ನು ಫ್ಲಡ್ ಸ್ಟಾರ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಆದರೆ ಇದು ತಮಗೆ ಖುಷಿ ಕೊಟ್ಟಿಲ್ಲ ಎಂದಿದ್ದಾರೆ ನಟ.
ಫ್ಲಡ್ ಸ್ಟಾರ್ ಎಂದು ಕರೆಯುವ ಮೂಲಕ ನೋವುಂಟುಮಾಡಿದ್ದೀರಿ ಎಂದು ನಟ ಹೇಳಿದ್ದಾರೆ. 2018 ಸಿನಿಮಾದ ಪ್ರಚಾರದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೊವಿನೋ ಮಾತನಾಡಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಟೊವಿನೋ ಮಾಡಿದ್ದು ಇದು ಪ್ರಚಾರ ಕೆಲಸ ಎಂದು ಹಲವರು ಟೀಕಿಸಿದರು ಎಂದಿದ್ದಾರೆ. ಸಾಯುವ ಸ್ಥಿತಿಯಲ್ಲಿದ್ದ ಪಿ.ಆರ್ ಬಗ್ಗೆ ಯೋಚಿಸುವಷ್ಟು ದೂರದೃಷ್ಟಿಯಾಗಲಿ, ಬುದ್ಧಿಶಕ್ತಿಯಾಗಲಿ ನನಗಿರಲಿಲ್ಲ ಎಂದು ಟೊವಿನೊ ಹೇಳಿದ್ದಾರೆ. ಆ ಸಮಯದಲ್ಲಿ ನಾನು ಮಾಡಿದ್ದು ಯಾರಿಗಾದರೂ ನೋವಾಗಿದೆಯೋ ಗೊತ್ತಿಲ್ಲ ಎಂದಿದ್ದಾರೆ.
ನಾನು ಹುಟ್ಟಿ ಬೆಳೆದ ಸ್ಥಳದಲ್ಲಿ ಪ್ರವಾಹ ಬಂದ ಸಮಯದಲ್ಲಿ ಬಂದು ಕೆಲಸ ಮಾಡಿದೆ. ಜಲಪ್ರಳಯ ಬಂದಾಗ ನನ್ನನ್ನು ಟೀಕಿಸಲು ನಾನೇನು ತಪ್ಪು ಮಾಡಿದೆ ಎಂದು ಟೊವಿನೋ ಪ್ರಶ್ನಿಸಿದ್ದಾರೆ. ಟ್ರೋಲ್‌ಗಳು ಮತ್ತು ಟೀಕೆಗಳು ಒಂದು ಲಿಮಿಟ್ ಕ್ರಾಸ್ ಮಾಡಿದಾಗ ನನಗೆ ನೋವಾಯಿತು. ಮತ್ತು ನಾನು ಎಂದಿಗೂ ನಿರೀಕ್ಷಿಸದ ಆರೋಪಗಳು ಬಂದವು ಎಂದು ನಟ ಹೇಳಿದರು. ಮೊದಮೊದಲು ಜೋಕುಗಳನ್ನು ಎಂಜಾಯ್ ಮಾಡಿದೆ. ಆಗ ನನಗೆ ಬೇಸರವಾಯಿತು. ಆ ನಂತರ ಹೆಚ್ಚು ಹೊರಗೆ ಹೋಗಲಿಲ್ಲ ಎನ್ನುತ್ತಾರೆ ಟೊವಿನೊ.
ಪ್ರಳಯಂ ಚಿತ್ರಕ್ಕೆ ಕರೆದರೂ ಜ್ಯೂಡ್ ಆಂಟೋನಿ ಜೋಸೆಫ್ ಬರಲು ಸಿದ್ಧರಿರಲಿಲ್ಲ. ನಂತರ, ಈ ಚಿತ್ರದ ಸಾಮರ್ಥ್ಯ ಅರಿತು ನಟಿಸಲು ನಿರ್ಧರಿಸಿದ್ದೇನೆ ಎಂದು ಟೊವಿನೋ ಸ್ಪಷ್ಟಪಡಿಸಿದ್ದಾರೆ. ನಟ ಟೊವಿನೋ ಥಾಮಸ್, ಬಿಜು ಮೆನನ್, ಆಸಿಫ್ ಅಲಿ ನಟಿಸಿದ 2018 ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗಲಿದೆ. ಇದು ಪ್ರಳಯದ ಕುರಿತಾದ ಸಿನಿಮಾ ಆಗಿದೆ. ಟೊವಿನೋ ಥಾಮಸ್ ಅವರು ಮಿನ್ನಲ್ ಮರಳಿ, ವಾಶಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು.
it hurt to be called flood or pralayam star says actor tovino thomas in 2018 movie promotion function.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 04:24 pm
Mangalore Correspondent
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm