ಇವರೇ ಕೀರ್ತಿ ಸುರೇಶ್ ಬಾಯ್ ಫ್ರೆಂಡ್! 'ಮಹಾನಟಿ' ಮದುವೆ ಫಿಕ್ಸ್​?

18-05-23 02:32 pm       Source: news18   ಸಿನಿಮಾ

ನಟಿ ಕೀರ್ತಿ ಸುರೇಶ್ ಅವರು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ರೂಮರ್ಸ್ ಹರಿದಾಡುತ್ತಿದೆ. ಇದೇ ವೇಳೆ ನಟಿ ಕೀರ್ತಿ ಸುರೇಶ್ ಒಬ್ಬ ಹುಡುಗನ ಜೊತೆ ಕಾಣಿಸಿಕೊಂಡಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿಗೆ ಯಂಗ್ ಹೀರೋಯಿನ್​ಗಳು ಒಬ್ಬರ ನಂತರ ಒಬ್ಬರಂತೆ ಮದುವೆಯಾಗುತ್ತಿದ್ದು, ಟಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ಗಳ ಮದುವೆಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ ನಾಯಕಿ ಕೀರ್ತಿ ಸುರೇಶ್ ಮದುವೆ ಬಗ್ಗೆಯೂ ಹಲವು ಸುದ್ದಿಗಳು ಹರಿದಾಡುತ್ತಿವೆ. ಕೀರ್ತಿ ಸುರೇಶ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಈ ಸಮಯದಲ್ಲಿ ಕೀರ್ತಿ ಒಬ್ಬ ಹುಡುಗನ ಜೊತೆ ಕಾಣಿಸಿಕೊಂಡಿದ್ದು, ಹಲವು ಚರ್ಚೆಗೆ ಕಾರಣವಾಗಿತ್ತು. ಈತ ಬ್ಯುಸಿನೆಸ್ ಮ್ಯಾನ್ ಫರ್ಹಾನ್, ಕೀರ್ತಿ ಅನೇಕ ವರ್ಷಗಳಿಂದ ಈತನನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೀರ್ತಿ ಸುರೇಶ್ ಜೊತೆ ಇರುವ ಫರ್ಹಾನ್, ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಲಾಗ್ತಿದೆ. ಉದ್ಯಮಿ ಫರ್ಹಾನ್ ನನ್ನು ಕೀರ್ತಿ ಸುರೇಶ್ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರ ಮದುವೆ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಫೋಟೋ ಇದೀಗ ವೈರಲ್ ಆಗಿದ್ದು, ಇವರೇ ಕೀರ್ತಿಯ ಭಾವಿ ಪತಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹಾನಟಿ ಚಿತ್ರದ ಮೂಲಕ ಮಹಾನಟಿ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣದ ಚೆಲುವೆ ಕೀರ್ತಿ ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಶೈಲಿಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಕೀರ್ತಿ ಸುರೇಶ್ ಅನೇಕ ಸಿನಿಮಾಗಳಲ್ಲಿ ಸಾಫ್ಟ್ ಮತ್ತು ಟ್ರೆಡಿಷನ್ ಗರ್ಲ್ ಪಾತ್ರಗಳಲ್ಲಿ ನಟಿಸಿದ್ದಾರೆ.

Pics: Keerthy Suresh's multicoloured lehenga at Venky Atluri's wedding  leaves netizens upset | Telugu Movie News - Times of India

Actress Keerthi Suresh Likely Marriage With A Business Man!, Pic Goes Viral  - Sakshi

ಸೌತ್, ನಾರ್ತ್ ಎಂಬ ಬೇಧವಿಲ್ಲದೆ ಪ್ರತಿ ನಾಯಕಿಯೂ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗಾಗಿ ಗಳಿಸಿದ್ದಾರೆ. ಆ ಪಟ್ಟಿಗೆ ಈ ಮಹಾನಟಿ ಕೂಡ ಸೇರಿಕೊಂಡಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್​​ನಲ್ಲಿ ಯಾರೊಂದಿಗಾದರೂ ಸ್ಪರ್ಧಿಸುವಂತೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗೆ ಸರ್ಕಾರ ವರಿ ಹಾಡಿನಲ್ಲಿ ಸ್ವಲ್ಪ ನಾಟಿ ಪಾತ್ರದಲ್ಲಿ ನಟಿಸಿದ ಕೀರ್ತಿ ಸುರೇಶ್ ಸಾಮಾಜಿಕ ಜಾಲತಾಣಗಳಲ್ಲಿ ಅದೇ ಗತಿಯನ್ನು ಮುಂದುವರೆಸಿದ್ದಾರೆ. ಕೀರ್ತಿಸುರೇಶ್ ಶೇರ್ ಮಾಡಿರುವ ಫೋಟೋಗಳು ಇದೀಗ ವೈರಲ್ ಆಗಿದೆ.

Keerthy Suresh Going to Marry A Business Man Goes Viral

Keerthy Suresh – Is Keerthy Suresh Lover?.. Marriage Soon?.. Released Photo  | A photo is going viral on social media claiming that Keerthy Suresh's  boyfriend and that they are getting married soon

ಕೀರ್ತಿ ಸುರೇಶ್ ಗುಡ್ ಲಕ್ ಸಖಿ, ಮಹಾನಟಿ ಮತ್ತು ಸಾನಿ ಮುಂತಾದ ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸುವ ಮೂಲಕ ಫೇಮಸ್ ಆಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇತ್ತೀಚೆಗೆ, ಮತ್ತೊಂದು ಯಶಸ್ವಿ ದಸರಾ ಚಿತ್ರವನ್ನು ಮಾಡಿದರು. ಕೀರ್ತಿ ಸುರೇಶ್ ಪ್ರಸ್ತುತ ಮೆಗಾಸ್ಟಾರ್ ಚಿರಂಜೀವಿ ಜೊತೆ ಭೋಲಾ ಶಂಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾ ವೇದಾಲಂ ರಿಮೇಕ್ ಆಗಿ ಈ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸುತ್ತಿದ್ದು, ಎಕೆ ಎಂಟರ್ಟೈನ್​ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಾಮಬ್ರಹ್ಮ ಸುಂಕರ ನಿರ್ಮಿಸುತ್ತಿದ್ದಾರೆ.

keerthy suresh marriage issue viral on social media.