ಬ್ರೇಕಿಂಗ್ ನ್ಯೂಸ್
30-05-23 02:06 pm Source: news18 ಸಿನಿಮಾ
ಕ್ರೇಜಿಸ್ಟಾರ್ ರವಿಚಂದ್ರನ್ ಈ ವರ್ಷ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಮನೆ ಮುಂದೆ ಬಂದಿರುವ ಅಭಿಮಾನಿಗಳು ನಾವು ರವಿಚಂದ್ರನ್ ಅವರನ್ನು ನೋಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದ ರವಿಚಂದ್ರನ್, ಮನೆ ಬಳಿ ಬಂದಿರುವ ಅಭಿಮಾನಿಗಳನ್ನು ಭೇಟಿಯಾಗಿಲ್ಲ. ಸದ್ಯ ಜಡ್ಜ್ಮೆಂಟ್ ಶೂಟಿಂಗ್ನಲ್ಲಿ ಬ್ಯುಸಿಯಿರುವ ರವಿಚಂದ್ರನ್, ಜನ್ಮದಿನ ಎಂದು ಮನೆಯಲ್ಲೇ ಇದ್ದಾರೆ.
ಹುಟ್ಟು ಹಬ್ಬದ ಪ್ರಯುಕ್ತ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ರವಿಚಂದ್ರನ್ ನೋಡಲು ಅಭಿಮಾನಿಗಳು ಮನೆ ಬಳಿ ಜಮಾಯಿಸಿದ್ದಾರೆ. ಆದ್ರೆ ಈ ಬಾರಿ ನಾನು ಹುಟ್ಟುಹಬ್ಬ ಆಚರಿಸೋದಿಲ್ಲ ಎಂದು ರವಿಚಂದ್ರನ್ ಹೊರಗೆ ಬರ್ತಿಲ್ಲ ರವಿಚಂದ್ರನ್ ಯಾಕೆ ಬರ್ತ್ ಡೇ ಆಚರಣೆ ಮಾಡಿಕೊಳ್ತಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವೆಲ್ಲಾ ದೂರದ ಊರುಗಳಿಂದ ಬಂದಿದ್ದೀವಿ. ಅವರ ಬರ್ತ್ ಡೇ ಆಚರಿಸಲು ಬಂದಿದ್ದೇವೆ ಆದ್ರೆ ಯಾಕೆ ಬರ್ತಡೇ ಆಚರಿಸಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಇಷ್ಟು ಜನರನ್ನು ಸಂಪಾದನೆ ಮಾಡಿ ಈಗ ಹುಟ್ಟುಹಬ್ಬ ಯಾಕೇ ಆಚರಿಸ್ತಿಲ್ಲ. ರವಿಚಂದ್ರನ್ ಮನೆಯಿಂದ ಹೊರಬಂದು ದರ್ಶನ ನೀಡುವವರೆಗೂ ನಾವು ಹೋಗಲ್ಲ ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ರವಿಚಂದ್ರನ್ ನೋಡಲು ರಾಣಿಬೆನ್ನೂರುನಿಂದ ಇಡೀ ಕುಟುಂಬವೇ ಆಗಮಿಸಿದೆ. ಒಂದೇ ಕುಟುಂಬದ 16 ಮಂದಿ ನಿನ್ನೆಯೇ ಬೆಂಗಳೂರಿಗೆ ಬಂದಿದ್ದಾರೆ. 11 ಜನ ಮಹಿಳೆಯರು ಹಾಗೂ ಮಕ್ಕಳು ಕೂಡ ಬಂದಿದ್ದಾರೆ.
ನಮ್ಮ ಮೇಲೆ ನಿಮಗೆ ಅಭಿಮಾನ ಇದ್ರೆ ನೀವು ಇವತ್ತು ಹೊರಗೆ ಬಂದು ನಮಗೆ ದರ್ಶನ ಕೊಡಿ. ನಾವು ನಿಮಗೆ ತೊಂದರೆ ಕೊಡಲ್ಲ ದೂರದಿಂದ ನೋಡಿಕೊಂಡು ಹೋಗ್ತಿವಿ. ನೀವು ಬರೋತನಕ ನಾವು ಇಲ್ಲಿಂದ ಹೋಗಲ್ಲ ಎಂದು ಅಭಿಮಾನಿಗಳು ಹೇಳ್ತಿದ್ದಾರೆ. ಹುಷಾರ್ ಇಲ್ಲದಿದ್ರೂ ನಿಮ್ಮ ನೋಡಲೇಬೇಕು ಎಂಬ ಹಠದಲ್ಲಿ ಡ್ರಿಪ್ ಹಾಕಿಸಿಕೊಂಡು ಬಂದಿದ್ದೀವಿ. ನೀವು ಹಠವಾದಿ ನಿಮ್ಮ ಅಭಿಮಾನಿಗಳಾದ ನಾವು ಇನ್ನು ಹಠವಾದಿಗಳು ಎಂದ ಫ್ಯಾನ್ಸ್ ರವಿಚಂದ್ರನ್ ಅವರ ರಣಧೀರ ಚಿತ್ರದ ಬಾ ಬಾರೋ ಬಾರೋ ರಣಧೀರ ಹಾಡನ್ನು ಹಾಡಿ ಅವರನ್ನು ಕರೆಯುತ್ತಿದ್ದಾರೆ.
Ravichandran birthday is the backdrop of fans who insisted on seeing the actor.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 11:02 am
Mangalore Correspondent
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm