ಬ್ರೇಕಿಂಗ್ ನ್ಯೂಸ್
03-06-23 02:46 pm Source: Vijayakarnataka ಸಿನಿಮಾ
'ಆಪರೇಶನ್ ಅಲಮೇಲ್ಲಮ್ಮ', 'ಕವಲುದಾರಿ' ಮುಂತಾದ ಚಿತ್ರಗಳ ಮೂಲಕ ಮನೆಮಾತಾಗಿರುವ ನಟ ರಿಷಿ ನಾಯಕರಾಗಿ ನಟಿಸುತ್ತಿದ್ದಾರೆ. ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕೆ ಎಸ್ ನಂದೀಶ್ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ನೆರವೇರಿತು.
ನಟ ನೀನಾಸಂ ಸತೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು ಹಾಗೂ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 'ರುದ್ರ ಗರುಡ ಪುರಾಣ' ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.
'ಚಂಬಲ್', 'ಡಿಯರ್ ವಿಕ್ರಮ್' ಚಿತ್ರಗಳು ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಉದ್ಯಮಿ ಲೋಹಿತ್ ನಿರ್ಮಾಣ ಮಾಡುತ್ತಿದ್ದಾರೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ಅಭಿನಯಿಸುತ್ತಿದ್ದಾರೆ.
'ರುದ್ರ ಗರುಡ ಪುರಾಣ' ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಜನರ ಮೇಲೆ ಉತ್ತಮ ಪ್ರಭಾವ ಬೀರಬೇಕು. ಅಂತಹ ಸಿನಿಮಾವನ್ನು ಜನರಿಗೆ ಕೊಡುವ ಆಸೆ ನನಗೆ.
2022 UPSC ಪರೀಕ್ಷೆಯಲ್ಲಿ 265ನೇ ರ‍್ಯಾಂಕ್ ಪಡೆದಿರುವ ಮೈಸೂರು ಮೂಲದ ಕೆ ಸೌರಭ್ ಅವರು ಸಂದರ್ಶನವೊಂದರಲ್ಲಿ ನನಗೆ ಪುನೀತ್ ರಾಜಕುಮಾರ್ ಅಭಿನಯದ 'ಪೃಥ್ವಿ' ಚಿತ್ರ ಪ್ರೇರಣೆ ಎಂದಿದ್ದಾರೆ.
'ಪೃಥ್ವಿ' ಚಿತ್ರ ಸೌರಭ್ ಅವರಿಗಷ್ಟೆ ಅಲ್ಲ. ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ. ನಾನು ಆ ಚಿತ್ರದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ. ನಾವು ಮಾಡುವ ಚಿತ್ರ, ಈ ರೀತಿ ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವ ಹುಮ್ಮಸ್ಸು ನಿರ್ದೇಶಕನಿಗೆ ಹೆಚ್ಚಾಗುತ್ತದೆ ಎಂದು ನಿರ್ದೇಶಕ ಕೆ.ಎಸ್ ನಂದೀಶ್ ತಿಳಿಸಿದರು.
ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ 'ಕವಲುದಾರಿ' ಚಿತ್ರದಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಹಾಗಾಗಿ, ಅದೇ ಜಾನರ್‌ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಂದೀಶ್ ಅವರು ಈ ಚಿತ್ರದ ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿದೆ. ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ 'ಗರುಡ ಪುರಾಣ' ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ 'ರುದ್ರ ಗರುಡ ಪುರಾಣ' ಅಂತ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಚಾಲನೆ ನೀಡಿದ ನೀನಾಸಂ ಸತೀಶ್ ಅವರಿಗೆ ಧನ್ಯವಾದ ಎಂದರು ನಾಯಕ ರಿಷಿ.
ನಾಯಕಿ ಪ್ರಿಯಾಂಕಾ ಕುಮಾರ್, ನಟರಾದ ಶಿವರಾಜ್ ಕೆ ಆರ್ ಪೇಟೆ, ಪವನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
rishi priyanka kumar starrer upcoming movies rudra garuda purana.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm