ಬ್ರೇಕಿಂಗ್ ನ್ಯೂಸ್
05-06-23 02:51 pm HK News Desk ಸಿನಿಮಾ
ಬೆಂಗಳೂರು, ಜೂನ್ 5: ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ, ನಟ ಅಭಿಷೇಕ್ ಹಾಗೂ ಫ್ಯಾಷನ್ ಉದ್ಯಮಿ ಅವಿವಾ ಬಿದ್ದಪ್ಪ ಮದುವೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿಅದ್ಧೂರಿಯಾಗಿ ನಡೆದಿದೆ. ಜೂನ್ 7ರಂದು ಗ್ರ್ಯಾಂಡ್ ರಿಸೆಪ್ಷನ್ ನೆರವೇರಲಿದೆ.
ಅಭಿಷೇಕ್ ಅವರಿಗೆ ಮುತ್ತುಗಳಿಂದ ತಯಾರಾದ ಮೈಸೂರು ಪೇಟವನ್ನು ಹಾಕಲಾಗಿತ್ತು. ಒಕ್ಕಲಿಗ ಸಂಪ್ರದಾಯದಂತೆ ಮದುವೆ ನಡೆದಿದೆ. ಇಂದು ಕರ್ಕಾಟಕ ಲಗ್ನದಲ್ಲಿ ಮದುವೆ ನಡೆದಿದೆ.
ಕಳೆದ ಶುಕ್ರವಾರ ಅರಿಷಿಣ ಶಾಸ್ತ್ರ ಮುಗಿಸಿರುವ ಅಭಿಷೇಕ್ ಮತ್ತು ಅವಿವಾ, ಭಾನುವಾರ ಕೈಗೆ ಮೆಹೆಂದಿ ಹಚ್ಚಿಕೊಂಡು ಮದುವೆ ಕಳೆಯಲ್ಲಿ ಮಿಂಚುತ್ತಿದ್ದರು. ಅವರ ಮೆಹೆಂದಿಯ ಸುಂದರ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಷೇಕ್ ಅವರು ತಮ್ಮ ಕೈಯಲ್ಲಿ ರೆಬಲ್, ಸುಮಾ, ಅವಿವಾ ಮತ್ತು ಮಂಡ್ಯ ಎಂಬ ಹೆಸರುಗಳ ಮೆಹೆಂದಿ ಹಾಕಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಸಮಯದಲ್ಲಿ ನಟ ಪ್ರಜ್ವಲ್ ದೇವರಾಜ್ ದಂಪತಿ, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಮೇಘನಾ ರಾಜ್ ಮುಂತಾದವರು ಪಾಲ್ಗೊಂಡಿದ್ದರು.
ಅದ್ದೂರಿಯಾಗಿ ಅರಿಷಿಣ ಶಾಸ್ತ್ರ, ಮೆಹೆಂದಿ, ಸಂಗೀತ ಕಾರ್ಯಕ್ರಮಗಳು ನಡೆದಿದೆ. ಅವಿವಾ ಬಿದ್ದಪ್ಪ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅರಿಷಿಣ ಶಾಸ್ತ್ರದ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್, ಅವಿವಾ ಅವರು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಕುಟುಂಬಸ್ಥರು, ಆಪ್ತರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದರು.
ಕಳೆದ ನಾಲ್ಕೈದು ವರ್ಷಗಳಿಂದ ಅಭಿಷೇಕ್ ಅಂಬರೀಶ್- ಅವಿವ ಬಿದ್ದಪ್ಪ ಪ್ರೀತಿ ಮಾಡುತ್ತಿದ್ದರು. ಅಭಿಷೇಕ್ ಅವರು ವಿದೇಶದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆ ವೇಳೆ ಅಲ್ಲಿ ಅವಿವಾ ಅವರ ಪರಿಚಯ ಆಗಿದೆ ಎನ್ನಲಾಗುತ್ತದೆ. ಪ್ರೀತಿ ವಿಷಯದ ಬಗ್ಗೆ ಅಭಿಷೇಕ್ ಅವರು ಅಷ್ಟಾಗಿ ಮಾಹಿತಿ ನೀಡಿಲ್ಲ. ಆದರೆ ನಿಶ್ಚಿತಾರ್ಥ ಮಾಡಿಕೊಳ್ಳುವ ಕೆಲ ದಿನಗಳ ಮುಂಚೆ ಅವರು ಎಲ್ಲಿಯೂ ಪ್ರೀತಿ ಬಗ್ಗೆ ಸುಳಿವು ನೀಡಿರಲಿಲ್ಲ. ಕುಟುಂಬದ ಒಪ್ಪಿಗೆ ಪಡೆದು ಅಭಿಷೇಕ್ ಅವರು ಅವಿವಾ ಜೊತೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
Superstar Rajinikanth and Kannada star Ambareesh remained good friends until the demise of the latter. However, his rapport with the family continues as he was spotted at the wedding of Ambareesh and Sumalatha’s son Abhishek. Along with his wife Latha, Rajinikanth attended the event and blessed the couple. Videos and photos of Rajinikanth from the event went viral on social media.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm