ಬ್ರೇಕಿಂಗ್ ನ್ಯೂಸ್
07-06-23 01:42 pm Source: news18 ಸಿನಿಮಾ
ಇದೇ ಮೊದಲ ಬಾರಿಗೆ ಆದಿಪುರುಷ್ ಸಿನಿಮಾ ತಂಡ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದೇನೆಂದರೆ ಆದಿಪುರುಷ್ ಸಿನಿಮಾ ರಿಲೀಸ್ ಆಗುವ ಪ್ರತಿ ಚಿತ್ರಮಂದಿರಲ್ಲಿ ಒಂದು ಖಾಲಿ ಸೀಟ್ ಇರಲಿದೆಯಂತೆ. ಪ್ರಿ ರಿಲೀಸ್ ಇವೆಂಟ್ನಲ್ಲಿ ನಿರ್ದೇಶಕ ಓಂ ರಾವತ್ ಅವರು ಎಲ್ಲಾ ಥಿಯೇಟರ್ ಮಾಲೀಕರಲ್ಲಿ ಈ ಬೇಡಿಕೆ ಇಟ್ಟಿದ್ದಾರೆ. ವಿದೇಶ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದು ಸೀಟ್ನನ್ನು ಹನುಮಾನ್ ದೇವರಿಗಾಗಿ ಖಾಲಿ ಇಡಿ ಎಂದು ಆದಿಪುರುಷ್ ಸಿನಿಮಾದ ನಿರ್ದೇಶಕ ಓಂ ರಾವತ್ ಅವರು ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಿನಿಮಾ ರಿಲೀಸ್ ದಿನ ಎಲ್ಲಾ ಥಿಯೇಟರ್ನಲ್ಲಿ ಒಂದು ಸೀಟ್ ಖಾಲಿ ಇರಲಿದೆಯಂತೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳಷ್ಟು ಜನರು ಚಿತ್ರತಂಡದ ಭಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹನುಮಾನ್ಗೆ ಗೌರವ ಕೊಡುವ ಈ ನಡೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಪ್ರತಿಕ್ರಿಯಿಸಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಬರದಿದ್ದರೆ ಏನು ಮಾಡುತ್ತೀರಿ? ಮೊದಲ ದಿನವೇ ನೆಗಟಿವ್ ಟಾಕ್ ಬಂದರೆ ಒಂದು ಸೀಟ್ ಅಲ್ಲ, ಇಡೀ ಥಿಯೇಟರ್ ಖಾಲಿಯಾಗುತ್ತದೆ ಎಂದು ಕಾಲೆಳೆದಿದ್ದಾರೆ.



ಇನ್ನೊಬ್ಬರು ಕಮೆಂಟ್ ಮಾಡಿ ಸಿನಿಮಾ ನೋಡಲು ಬರುವಾಗ ಚಪ್ಪಲಿ ಧರಿಸಿಕೊಂಡು ಬರಬಹುದೇ ಎಂದು ಪ್ರಶ್ನಿಸಿದ್ದಾರೆ. ಥಿಯೇಟರ್ನಲ್ಲಿ ಪ್ರಸಾದ ಅಥವಾ ಪಾಯಸ ಕೊಡುತ್ತೀರಾ ಎಂದು ಕಿಂಡಲ್ ಮಾಡಿದ್ದಾರೆ ಇನ್ನೊಬ್ಬರು. ಪಾಪ್ಕಾರ್ನ್, ಕೂಲ್ಡ್ರಿಂಕ್ಸ್ ಬದಲು ಪಾಯಸ ಮತ್ತು ಪ್ರಸಾದ ಕೊಡ್ತೀರಾ ಎಂದು ಕೇಳಿದ್ದಾರೆ ನೆಟ್ಟಿಗರು. ಇನ್ನು ಹನುಮಾನ್ ಥಿಯೇಟರ್ ಒಳಗೆ ಕುಳಿತ ಕೆಲವು ಫೋಟೋಶೋಪ್ ಮಾಡಿದ ಫೋಟೋಗಳು ವೈರಲ್ ಆಗುತ್ತವೆ ಎಂದಿದ್ದಾರೆ ಇನ್ನೊಬ್ಬರು. ಸಿನಿಮಾ ಚೆನ್ನಾಗಿದ್ರೆ ಇದನ್ನೆಲ್ಲಾ ಯಾಕೆ ಮಾಡ್ತೀರಿ ಎಂದು ಕೇಳಿದ್ದಾರೆ.



ಈ ರೀತಿ ಬೇಕಾಬಿಟ್ಟಿ ಕಮೆಂಟ್ ಮಾಡಿ ಚಿತ್ರತಂಡದ ಮಹತ್ವದ ಉದ್ದೇಶವನ್ನು ಸುಮ್ಮನೆ ನೋಯಿಸಬೇಡಿ ಎಂದಿದ್ದಾರೆ ಪ್ರಭಾಸ್ ಫ್ಯಾನ್ಸ್. ಅಂತೂ ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಹಾಗೂ ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ಮಾಡಲಿದ್ದಾರೆ. ಮಲ್ಟಿ ಸ್ಟಾರರ್ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
one empty seat in theaters during adipurush release.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 12:35 pm
HK News Staffer
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am