ಬ್ರೇಕಿಂಗ್ ನ್ಯೂಸ್
03-07-23 02:27 pm Source: news18 ಸಿನಿಮಾ
ನನ್ನ ಹಾಗೂ ಸುದೀಪ್ ಅವರ ಜೊತೆಗಿನ ಬಾಂದವ್ಯ ಚೆನ್ನಾಗಿತ್ತು. ಸುಮಾರು ಎಂಟು ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ಸುದೀಪ್ ಇವತ್ತು ನಾಳೆ ಅಂತ ಹೇಳಿಕೊಂಡೆ ಬರ್ತಿದ್ದಾರೆ. ನಿಮ್ಮ ಸಿನಿಮಾನೇ ನೇಕ್ಸ್ಟ್ ಅಂತ ಹೇಳಿದ್ರು ಅದ್ರೆ ಇಲ್ಲಿಯವರೆಗೂ ಸಿನಿಮಾ ಬಗ್ಗೆ ಮಾತಾಡುತ್ತಿಲ್ಲ.
ಸುದೀಪ್ ಗೊಂದಲ ಉಂಟು ಮಾಡಿದ್ದ
ನಟ ಸುದೀಪ್ ಗೊಂದಲ ಕ್ರಿಯೇಟ್ ಮಾಡುತ್ತಿದ್ದಾರೆ. ಕೈಗೆ ಸಿಗದೆ ಓಡಾಡುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ವಾಣಿಜ್ಯ ಮಂಡಳಿಗೆ ಮನವಿ ಪತ್ರ ಬರೆದಿದ್ದೇನೆ. ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾವು ಯಾರತ್ರ ಹೋಗಿ ಹೇಳಬೇಕು ಎಂದು ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
ಹಣ ಫುಲ್ ಸೆಟಿಲ್‌ಮೆಂಟ್ ಆಗಿದೆ
ನಾನು 200ಕ್ಕೂ ಹೆಚ್ಚು ಕನ್ನಡ ಸಿನಿಮಾ ಮಾಡಿದ್ದೇನೆ. ನಟ ರವಿ ಚಂದ್ರನ್, ವಿಷ್ಣುವರ್ದನ್, ಪ್ರಭಾಕರ್ ಜೊತೆ ಕೆಲಸ ಮಾಡಿ ಹಲವು ಸಿನಿಮಾ ರಿಲೀಸ್ ಮಾಡಿದ್ದೀನಿ. ಚಿತ್ರರಂಗ ಉಳಿಬೇಕು ಅಂದ್ರೆ ನಿರ್ಮಾಪಕರು ಇರಬೇಕು. ಆದ್ರೆ ಅವ್ರಿಗೆ ತೊಂದರೆಯಾದ್ರೆ ಏನು ಮಾಡೋದು. ನಾನು ಸುದೀಪ್ಗೆ ಅಡ್ವಾನ್ಸ್ ಕೊಟ್ಟಿದ್ದೀನಿ. ಸಿನಿಮಾ ಮಾಡ್ತಿನಿ ಅಂತ ಹೇಳಿ ನನಗೆ ಸಿನಿಮಾ ಮಾಡಿ ಕೊಡ್ತಿಲ್ಲ. ಹಣ ಫುಲ್ ಸೆಟಿಲ್‌ಮೆಂಟ್ ಅಗಿದೆ ನನ್ನಿಂದ ಬೇರೆವ್ರಿಗೆ ದುಡ್ಡು ಕೊಡಿಸಿದ್ದಾರೆ ಅವ್ರು ಬಂದು ಹೇಳೋಕು ಕೂಡ ರೆಡಿಯಾಗಿದ್ದಾರೆ.
ಮುತ್ತತ್ತಿ ಸತ್ಯರಾಜ್ ಎಂಬ ಟೈಟಲ್ ಕೂಡ ರೆಡಿ ಇದೆ
ನಂಬಿಕೆ ಮೇಲೆ ದುಡ್ಡು ಕೊಟ್ಟಿದ್ದೀನಿ ಅದ್ರೆ ಇವತ್ತು ಸುದೀಪ್ ಕೈಗೆ ಸಿಗ್ತಿಲ್ಲ. ನಾನು ಹಣ ವಾಪಸ್ ಕೇಳುತ್ತಿಲ್ಲ. ಕಮೀಟ್ ಆದಂತೆ ನನಗೆ ನಟ ಸುದೀಪ್ ಸಿನಿಮಾ ಮಾಡಿಕೊಡಲಿ ಎಂದು ಕುಮಾರ್ ಆಗ್ರಹಿಸಿದ್ದಾರೆ. ಮುತ್ತತ್ತಿ ಸತ್ಯರಾಜ್ ಎಂಬ ಟೈಟಲ್ ಕೂಡ ರೆಡಿ ಇದೆ ನಂದ ಕಿಶೋರ್ ಸ್ಕ್ರಿಪ್ಟ್ ರೆಡಿ ಮಾಡಿದ್ರು. ಇಲ್ಲಿಯವರೆಗೂ ಸುದೀಪ್ ಈ ಬಗ್ಗೆ ಮಾತೇ ಆಡುತ್ತಿಲ್ಲ.
ಮಂಡಳಿಗೆ ಬಂದು ಎದುರಿಗೆ ಮಾತಾಡಲಿ
ಸುದೀಪ್ ಸಿಗದ ಹಿನ್ನೆಲೆ ನಾನು ಸುದ್ದಿಗೋಷ್ಠಿ ಮಾಡಲು ನಿರ್ಧಾರ ಮಾಡಿದೆ. ನಾನು ಅವರ ಜೊತೆ ಚರ್ಚೆ ಮಾಡಲು ರೆಡಿ, ಸುದೀಪ್ ವಾಣಿಜ್ಯ ಮಂಡಳಿಗೆ ಬರಲಿ ಎದುರಿಗೆ ಬಂದು ಮಾತಾಡಲಿ. ದುಡ್ಡು ಕೊಟ್ಟು ನಾವು ಅವ್ರತ್ರ ಬೇಡಬೇಕು.ಚೇಂಬರ್ ನಿಂದ 6 ಪತ್ರ ಬರೆದಿದ್ದಾರೆ ಅದರೆ ಒಂದು ಪತ್ರಕ್ಕೆ ರಿಪ್ಲೈ ಮಾಡಿಲ್ಲ. ಸಾಕ್ಷಿ ಇದ್ಯಾ ಅವರತ್ರ ಅಂತ ಸುದೀಪ್ ಕೇಳಿದ್ದಾರೆ. ನಾನು ನಂಬಿಕೆಯಿಂದ ಹಣ ಕೊಟ್ಟೆ ಸುದೀಪ್ ಈಗ ಸಾಕ್ಷಿ ಕೇಳ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
Producer Kumar alleged that Actor Sudeep did not give call Sheet after Receiving Money.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 11:08 pm
Mangalore Correspondent
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ...
30-08-25 09:16 pm
Talapady Accident, Mangalore, Ksrtc Bus: ತಲಪಾ...
30-08-25 04:23 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm