ಬ್ರೇಕಿಂಗ್ ನ್ಯೂಸ್
10-07-23 03:26 pm Source: News18 Kannada ಸಿನಿಮಾ
ನಾನು ಸುದೀಪ್ ಅವರ ಮೇಲೆ ಅರೋಪ ಮಾಡ್ತಿಲ್ಲ. ನಾನು ನ್ಯಾಯ ಕೇಳ್ತಿದ್ದೇನೆ ಎಂದು ನಿರ್ಮಾಪಕ ರೆಹಮಾನ್ ಹೇಳಿದ್ದಾರೆ. ಕುರಾನ್, ಬೈಬಲ್, ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ. ನನಗೆ ಸುಳ್ಳು ಹೇಳೊಕೆ ಬರಲ್ಲ ನಾನು ಯಜಮಾನ ಚಿತ್ರದ ನಂತ್ರ ಹುಚ್ಚ ಸಿನಿಮಾ ಮಾಡಿದ್ದೆ. ಸುದೀಪ್ ಈಗ ತುಂಬಾ ಬೆಳೆದಿದ್ದಾರೆ. ಅದ್ರೆ ಬೆಳೆದ ಮೇಲೆ ಹಳೆಯದನ್ನ ಮರಿಬಾರದು.
ಸಿನಿಮಾ ಮಾಡಿಕೊಡ್ತೀನಿ ಅಂತ ಮಾಡಿಕೊಡಲಿಲ್ಲ
ವಿಷ್ಣು ಸರ್ ಹಾಗೂ ನನ್ನ ಕಾಂಬಿನೇಶನ್ ನಲ್ಲಿ ಸಿನಿಮಾ ಮಾಡೋ ಅಂತ ಹೇಳಿದ್ರು. ಹಿಂದಿಯ ಸ್ವರ್ಗ್ ಸಿನಿಮಾ ರಿಮೇಕ್ ಮಾಡೋಣ ಅಂತ ಹೇಳಿದ್ರು. ನಾನು ಸುದೀಪ್ ಅವರ ಮಾತಿಗೆ ಗೌರವ ಕೊಟ್ಟು 10 ಲಕ್ಷ ಕೊಟ್ಟು ರಿಮೇಕ್ ರೈಟ್ಸ್ ತೆಗೆದುಕೊಂಡೆ. ಜೊತೆಗೆ ರವಿಶ್ರೀವತ್ಸ ಅವರನ್ನು ಡೈಲಾಗ್ ಬರೆಯಲು ಹೇಳಿದ್ದೆ. ಅದ್ರೆ ವಿಷ್ಣು ಸರ್ ಸಿನಿಮಾ ಮಾಡಲು ಹಿಂದೇಟು ಹಾಕಿದ್ರು.
ಅದಾದ ನಂತ್ರ ಅಮೀರ್ ಖಾನ್ ಹಾಗೂ ಸಲ್ಮಾನ್ ಖಾಲ್ ಅಭಿನಯದ ಅಂದಾಜ ಅಪ್ನ, ರಿಮೇಕ್ ಮಾಡೋಣ ಅಂದ್ರು ಅದು ಆಗಲಿಲ್ಲ. ಬಳಿಕ ಅಮಿತಾಭ್ ಬಚ್ಚನ್ ಅಭಿನಯದ ಒಂದು ಸಿನಿಮಾ ಮಾಡೋಣ ಅಂತ ಹೇಳಿದ್ರು. ನಾನು ಆ ಚಿತ್ರದ ರಿಮೇಕ್ ರೈಟ್ಸ್ ಕೂಡ ತಂದೆ ಅದ್ರೆ ಯಾವ್ದು ಸಿನಿಮಾ ಮಾಡಲಿಲ್ಲ.
ರಿಮೇಕ್ ರೈಟ್ಸ್ ಗಾಗಿ 35 ಲಕ್ಷ ಖರ್ಚು ಮಾಡಿದ್ದೇನೆ
ನನ್ನ ಮನೆಯಲ್ಲಿ ನನಗೆ ಬೈಯೋಕೆ ಶುರು ಮಾಡಿದ್ರು. ಹುಚ್ಚ ಟೈಟಲ್ ನಿಮಗೆ ಎಫೆಕ್ಟ್ ಆಯ್ತಾ ಅಂತ ಕೇಳಿದ್ರು. ನಾನು ಶೂಟಿಂಗ್ ಸೆಟ್ ಗೆ ಹೋಗಿ ಸುದೀಪ್ ಅವರ ಭೇಟಿ ಮಾಡಿ ಸಿನಿಮಾ ಮಾಡೊಣ ಅಂತ ಕೇಳಿದ್ದೆ. ಅದ್ರೆ ಅವರು ಈಗ ಮಾಡೊಣ ಆಗ ಮಾಡೋಣ ಅಂತ ಹೇಳ್ತಾನೆ ಇದ್ದಾರೆ. ನಾನು ಈಗಲೂ ಅವರ ಬಗ್ಗೆ ಗೌರವಯುತವಾಗಿಯೇ ಮಾತಾಡ್ತೀನಿ. ಆದ್ರೆ ಸುದೀಪ್ ಅವರೇ ನನ್ನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ
ಅದ್ರೆ ನಾನು ಈ ಬಗ್ಗೆ ಎಲ್ಲೂ ಕೂಡ ಮಾತನಾಡಿಲ್ಲ. ಕಳೆದ ಎಂಟು ವರ್ಷಗಳ ಹಿಂದೆ ನಿರ್ಮಾಪಕರ ಸಂಘಕ್ಕೂ ದೂರು ನೀಡಿದೆ. ಅದ್ರೆ ಆ ದೂರನ್ನ ಸೂರಪ್ಪ ಬಾಬು ಮುಚ್ಚಿಹಾಕಿ ಬಿಟ್ರು. ನಾನು ಸುದೀಪ್ ಅವರಿಗಾಗಿ ಸಿನಿಮಾ ಮಾಡಲು ಮೂರು ಸಿನಿಮಾಗಳ ರಿಮೇಕ್ ರೈಟ್ಸ್ ಗಾಗಿ 35 ಲಕ್ಷ ಖರ್ಚು ಮಾಡಿದ್ದೀನಿ.
ಸುದೀಪ್ ಅವರಿಗೆ 4.5 ಲಕ್ಷ ಹಣಕೊಟ್ಟಿದ್ದೇನೆ!
ಸುದೀಪ್ ಅವರಿಗೆ 4.5 ಲಕ್ಷ ಹಣಕೊಟ್ಟಿದ್ದೆ ಅದ್ರೆ ಅದರಲ್ಲಿ 1.8 ಲಕ್ಷ ವಾಪಸ್ ಕೊಟ್ಟಿದ್ದಾರೆ. ನನಗೆ ನಾಚಿಗೆ ಮಾನ ಮರ್ಯಾದೆ ಇಲ್ಲ 150 ಸಲ ಸುದೀಪ್ ಮನೆ ಬಳಿ ಹೋಗಿದ್ದೀನಿ. ನಾನು ಯಾವಾಗ ಮನೆ ಬಳಿ ಹೋದ್ರು ಮನೆಯಲ್ಲಿ ಇಲ್ಲ ಅಂತ ಹೇಳಿಸಿದ್ದಾರೆ.
ನಾನು ಸುದೀಪ್ ಅವರಿಗೆ ಹುಚ್ಚ ಸಿನಿಮಾ ಮಾಡಿದ್ದೆ ತಪ್ಪಾ.? ಜಾಕ್ ಮಂಜು ಸುದೀಪ್ ಅವರ ಬಳಿ ಮಾತನಾಡಿ 30 ಲಕ್ಷ ಕೊಡೊಕೆ ಹೇಳಿದ್ದಾರೆ ಅಂತ ಹೇಳಿದ್ರು. ಸ್ವಲ್ಪ ದಿನ ಅದ್ಮೇಲೆ ನಾನು ಜಾಕ್ ಮಂಜು ಅವರಿಗೆ ಎಷ್ಟು ಸಲ ಕಾಲ್ ಮಾಡಿದ್ರು ಪ್ರಯೋಜನ ಆಗಿಲ್ಲ. ಶೂಟಿಂಗ್ ಸೆಟ್ಗೆ ಹೋದ್ರೆ ಇಲ್ಲಿಗೆ ಬರಬೇಡಿ ಮನೆ ಹತ್ರ ಬನ್ನಿ ಅಂತ ಹೇಳಿದ್ರು. ಇಷ್ಟಾದ್ರು ನಾನು ಸುದೀಪ್ ವಿರುದ್ದ ಎಲ್ಲೂ ಅರೋಪ ಮಾಡಿರಲಿಲ್ಲ. ಮೂರು ದಿನಗಳ ಟಿವಿಯಲ್ಲಿ ಎಮ್ ಎನ್ ಕುಮಾರ್ ಅವರ ನೋಡಿ ಈಗ ಎಲ್ಲಾ ಎಚ್ಚೆತ್ತುಕೊಂಡ್ರ ಅನ್ಕೊಂಡೆ.
ನಾನು ಅವರ ಮೇಲೆ ಕೇಸ್ ಹಾಕಬಹುದು
ಕುಮಾರ್ ಅವರು ಅರೋಪ ಮಾಡಿದ್ರು ಅವರ ಮೇಲೆ ಡೆಫರ್ಮೆಶನ್ ಕೇಸ್ ಹಾಕಿದ್ದಾರೆ. ಎಷ್ಟು ಜನದ ಮೇಲೆ ಇವರು ಡೆಫರ್ಮೇಶನ್ ಕೇಸ್ ಹಾಕ್ತಾರೆ. ಕಿಚ್ಚ ಕ್ರಿಯೇಶನ್ಸ್ ಅಂತ ಇವರು ಬ್ಯಾನರ್ ಮಾಡಿದ್ದಾರೆ. ಕಿಚ್ಚ ಅನ್ನೋದು ನನ್ನ ಹುಚ್ಚ ಸಿನಿಮಾದ ಹಾಡು, ಇವರೇನು ನನ್ನ ಪರ್ಮಿಶನ್ ತಗೊಂಡು ಕಿಚ್ಚ ಹೆಸರು ಬಳಸಿದ್ದಾರಾ. ಹಾಗಾದ್ರೆ ಈಗ ನಾನು ಸುದೀಪ್ ಅವರ ಮೇಲೆ ಕೇಸ್ ಹಾಕಬಹುದು ಎಂದು ಹೇಳಿದ್ರು.
Huchcha Movie Producer Rehaman Serious Allegation over Kichcha Sudeep.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm