ಬ್ರೇಕಿಂಗ್ ನ್ಯೂಸ್
19-08-23 01:49 pm Source: News18 Kannada ಸಿನಿಮಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಮಾರ್ಟಿನ್ ಸಿನಿಮಾದ ಹೊಸ ವಿಚಾರ ಹೊರ ಬಿದ್ದಿದೆ. ಆ್ಯಕ್ಷನ್ ಮಾಸ್ಟರ್ ರವಿ ವರ್ಮ ಈ ಒಂದು ವಿಷಯ ಹೇಳಿಕೊಂಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ಗಳನ್ನ ಬರೋಬ್ಬರಿ 30ಕ್ಕೂ ಹೆಚ್ಚು ದಿನ ಚಿತ್ರೀಕರಿಸಿರೋ ವಿಷಯ ಗೊತ್ತೇ ಇದೆ.
ಆದರೆ ಇದೇ ಸಿನಿಮಾದ ಕೊನೆಯ ದೃಶ್ಯಗಳಿಗೆ ಮೂವರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ. ಟಾಲಿವುಡ್‌ನ ರಾಮ್-ಲಕ್ಷ್ಮಣ್ ಒಂದಷ್ಟು ದೃಶ್ಯಗಳನ್ನ ಡೈರೆಕ್ಟರ್ ಮಾಡಿದ್ದಾರೆ. ಉಳಿದ ಎರಡು ಚೇಜಿಂಗ್ ದೃಶ್ಯಗಳನ್ನ ಕನ್ನಡದ ಸಾಹಸ ನಿರ್ದೇಶಕ ರವಿ ವರ್ಮ ಅವರೇ ಮಾಡಿದ್ದಾರೆ.

ಈ ಎರಡೂ ಚೇಜಿಂಗ್ ದೃಶ್ಯಗಳಲ್ಲಿ ಒಂದೇ ಒಂದು ದೃಶ್ಯಕ್ಕೆ ಹೆಚ್ಚು ಕಡಿಮೆ ೧೦ ಕೋಟಿ ಖರ್ಚಾಗಿದೆ. ಈ ಒಂದು ದೃಶ್ಯಕ್ಕೆ ದುಬಾರಿ ಕಾರುಗಳಾ ಬಳಕೆ ಆಗಿದೆ. ಟ್ರಕ್‌ಗಳ ಉಪಯೋಗಿಸಿದ್ದೇವೆ. ವಿಶೇಷ ಅನಿಸೋ ಸಾಹಸಗಳೆಲ್ಲವನ್ನೂ ಇಲ್ಲಿ ಮಾಡಿರೋದಾಗಿಯೂ ರವಿ ವರ್ಮ ಹೇಳಿಕೊಂಡಿದ್ದಾರೆ.

ಮಾರ್ಟಿನ್ ಸಿನಿಮಾದಲ್ಲಿ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯ
ಈ ಒಂದು ಮಾತನ್ನ ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ಒಪ್ಪಿಕೊಳ್ತಾರೆ. ತಮ್ಮ ಸಿನಿಮಾದ ಆ್ಯಕ್ಷನ್ ದೃಶ್ಯಗಳು ಬೇರೆ ಲೆವಲ್‌ಗೆ ಇವೆ ಅನ್ನೊದು ಇವರ ಅಭಿಪ್ರಾಯ ಅಂತಲೂ ಹೇಳಬಹುದು. ಮಾರ್ಟಿನ್ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಬಗ್ಗೆ ಇನ್ನಿಲ್ಲದಂತೆ ಕುತೂಹಲ ಇದೆ.
ಸಿನಿಮಾದ ಮೊದಲ ಟೀಸರ್ ಕೂಡ ಈ ಒಂದು ನಂಬಿಕೆಯನ್ನ ಈಗಾಗಲೇ ಹೆಚ್ಚು ಮಾಡಿದೆ. ಮೂರು ಸಾಹಸ ನಿರ್ದೇಶಕರ ಕೆಲಸದ ಈ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೇಜಾನ್ ಆ್ಯಕ್ಷನ್ ಮಾಡಿದ್ದಾರೆ. ಸಾಹಸ ನಿರ್ದೇಶಕ ರವಿ ವರ್ಮ ಅವರ ಸಾಹಸಗಳ ಖದರ್ ಬೇರೇನೆ ಇದೆ.

ಮಾರ್ಟಿನ್ ಲುಕ್‌ಗೆ ವಾಪಾಸ್ ಆದ ಆ್ಯಕ್ಷನ್ ಪ್ರಿನ್ಸ್
ಇವರ ವಿಶೇಷ ಸಾಹಸಗಳ ಜೊತೆಗೆ ಟಾಲಿವುಡ್‌ನ ರಾಮ್-ಲಕ್ಷ್ಮಣ್ ಅವರ ಸಾಹಗಳೂ ಸಾಥ್ ಕೊಟ್ಟಂತಿವೆ. ಹಾಗಾಗಿಯೇ ಮಾರ್ಟಿನ್ ಸಿನಿಮಾದಲ್ಲಿ ಹೈವೋಲ್ಟೇಜ್ ಸಾಹಸಗಳನ್ನ ನಿರೀಕ್ಷೆ ಮಾಡಬಹುದಾಗಿದೆ.
ಚಿತ್ರದ ಬಾಕಿ ಉಳಿದ ಹಾಡಿನ ಚಿತ್ರೀಕರಣ ಇನ್ನೇನು ಶುರು ಆಗಬೇಕಿದೆ. ನಾಯಕ ನಟ ಧ್ರುವ ಸರ್ಜಾ ಅವರು ವಾಪಸ್ ಮಾರ್ಟಿನ್ ಲುಕ್‌ಗೆ ಬಂದಿದ್ದಾರೆ.
ಇನ್ನೇನು ಉಳಿದಿರೋ ಪ್ಯಾಚ್ ವರ್ಕ್ ಕೂಡ ನಡೆಬೇಕಿದೆ. ಉಳಿದಂತೆ ಮಾರ್ಟಿನ್ ಸಿನಿಮಾ ಕನ್ನಡದ ಮತ್ತೊಂದು ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ. ನಿರೀಕ್ಷೆ ಕೂಡ ಡಬಲ್ ಟ್ರಿಪಲ್ ಆಗಿಯೇ ಇದೆ.
Sandalwood Action Prince Dhruva Sarja Acted Martin Latest Updates.
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 07:19 pm
HK News Desk
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂ...
03-12-25 03:04 pm
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
03-12-25 10:35 pm
Mangalore Correspondent
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm