ಬ್ರೇಕಿಂಗ್ ನ್ಯೂಸ್
28-08-23 02:06 pm Source: News18 Kannada ಸಿನಿಮಾ
ಕಾಟೇರ ಚಿತ್ರದ ಡೈರೆಕ್ಟರ್ ತುರಣ್ ಸುಧೀರ್ ತಮ್ಮ ಮಾತಾಡ್ತಾ ಹೋದ್ರು. ಸಿನಿಮಾದಲ್ಲಿ ಬೇರೆ ರೀತಿ ಕಾಣಿಸುತ್ತಾರೆ. ಬೇರೆ ಯಾವುದೇ ಚಿತ್ರದ ಇನ್ಫ್ಯೂಲೆನ್ಸ್ ಈ ಚಿತ್ರಕ್ಕೆ ಇಲ್ವೇ ಇಲ್ಲ. ಇದೊಂದು ಹಳ್ಳಿಬ್ಯಾಗ್ರೌಂಡ್‌ನಲ್ಲಿ ನಡೆಯೋ ಕಥೇನೆ. ಆದರೆ ರಿಯಲ್ ಇನ್ಸಿಡೆಂಟ್‌ಗಳ ಒಂದು ಒಟ್ಟು ಚಿತ್ರವೇ ಆಗಿದೆ.
ದರ್ಶನ್ ಇಲ್ಲಿವರೆಗೂ ಈ ರೀತಿಯ ಸಿನಿಮಾ ಮಾಡಿಯೇ ಇಲ್ಲ ಬಿಡಿ. ಭಾವತೀವ್ರತೆಯ ಸಿನಿಮಾ ಇದಾಗಿದೆ ಅನ್ನೋದು ಅಷ್ಟೆ ವಿಶೇಷವಾಗಿದೆ. ಹಳ್ಳಿಯ ಕಥೆ ಆಗಿರೋದ್ರಿಂದಲೇ ಅವರ ಲುಕ್ ಒಂದು ವಿಭಿನ್ನವಾಗಿಯೇ ಇದೆ. ಇದರೊಟ್ಟಿಗೆ ಇಲ್ಲಿ ಒಂದಷ್ಟು ವಿಶೇಷತೆಗಳು ಇವೆ.
ದರ್ಶನ್ ಸಿನಿಮಾಗಳಲ್ಲಿ ಆ್ಯಕ್ಷನ್ ಸಪರೇಟ್ ಪ್ಲಾನ್ ಮಾಡಲಾಗುತ್ತದೆ. ಕಾಟೇರ ಸಿನಿಮಾದಲ್ಲಿ ಆ ರೀತಿ ಇಲ್ಲ ನೋಡಿ. ಇಲ್ಲಿ ಬರೋ ಎಲ್ಲ ಆ್ಯಕ್ಷನ್‌ಗಳು ಕಥೆಯೊಳಗೇನೆ ಬರುತ್ತದೆ. ಆದರೆ ಎಲ್ಲೂ ಕಥೆ ಬಿಟ್ಟು ಯಾವುದೇ ಆಕ್ಷನ್ ಬರೋದೇ ಇಲ್ಲ. ಸಿನಿಮಾದ ಕೆಲಸ ನಡೀತಾನೇ ಇದೆ.
ಕಾಟೇರ ಸಿನಿಮಾ ಇದೇ ವರ್ಷ ರಿಲೀಸ್ ಪ್ಲಾನ್
ಕಾಟೇರ ಚಿತ್ರವನ್ನ ಇದೇ ವರ್ಷ ತೆರೆಗೆ ತರೋ ಪ್ಲಾನ್ ಇದೆ. ಅದಕ್ಕಾಗಿಯೇ ಎಲ್ಲ ಕೆಲಸ ಜೋರಾಗಿಯೇ ನಡೆಯುತ್ತಿದೆ. ಸಿನಿಮಾದ ನಾಯಕಿ ಆರಾಧನಾ ರಾಮ್ ಅವರಿಗೆ ಇದು ಮೊದಲ ಸಿನಿಮಾನೇ ಆಗಿದೆ. ನಮ್ಮ ಕಥೆಗೆ ಸೂಟ್ ಆಗ್ತಾರೆ ಅನ್ನುವ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ.
ಚಿತ್ರದ ನಿರ್ಮಾಪಕರಾದ ರಾಕ್ ಲೈನ್ ಅವರೇ ಚಿತ್ರದ ನಾಯಕಿಯ ಬಗ್ಗೆ ಹೇಳಿದರು. ಆಡಿಷನ್ ಮಾಡಿಯೇ ತೆಗೆದುಕೊಳ್ಳಿ, ಪಾತ್ರಕ್ಕೆ ಸೂಕ್ತ ಆಗ್ತಾರೆ ಅನಿಸಿದ್ರೆ ತೆಗೆದುಕೊಳ್ಳಿ ಅಂತಲೂ ಹೇಳಿದರು. ಆ ಪ್ರಕಾರ ಆಡಿಷನ್ ಮಾಡಿಯೇ ಆರಾಧನಾ ರಾಮ್ ಅವರನ್ನ ಚಿತ್ರಕ್ಕೆ ಹಾಕಿಕೊಂಡಿದ್ದೇವೆ.
ಕಾಟೇರ ಸಿನಿಮಾದಲ್ಲಿ ಶೃತಿ ವಿಶೇಷ ಪಾತ್ರದಲ್ಲಿ ಅಭಿನಯ
ಸಿನಿಮಾದಲ್ಲಿ ಕುಮಾರ್ ಗೋವಿಂದ್ ಅಭಿನಯಿಸಿದ್ದಾರೆ. ಬಹಳ ದಿನಗಳ ಬಳಿಕವೇ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ಜಗಪತಿಬಾಬು ನಟಿಸಿದ್ದಾರೆ. ನಟಿ ಶೃತಿ ಅವರು ವಿಶೇಷವಾಗಿಯೇ ಈ ಚಿತ್ರ ಪಾತ್ರವನ್ನೆ ನಿರ್ವಹಿಸಿದ್ದಾರೆ. ವೈಜನಾಥ್ ಬಿರಾದಾರ್ ಅಭಿನಯಿಸಿದ್ದಾರೆ.
ತರುಣ್ ಸುಧೀರ್ ತಮ್ಮ ಕಾಟೇರ ಚಿತ್ರದ ಮಾಹಿತಿಯನ್ನ ಕೊಟ್ಟಿದ್ದಾರೆ. ಇವರು ಹೇಳಿದಂತೆ ಈ ಒಂದು ಸಿನಿಮಾ ಬೇರೆ ರೀತಿನೇ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಸಿನಿಮಾ ಪ್ರತಿ ಕ್ಷಣವನ್ನ ಹಬ್ಬದಂತೆ ಆದರಿಸುತ್ತಿದ್ದಾರೆ.
ಕಾಟೇರ ಸಿನಿಮಾ ಬಗ್ಗೆ ಒಂದು ನಿರೀಕ್ಷೆ ಇದೆ. ಅಭಿಮಾನಿಗಳು ಕಾಯ್ತಾ ಇದ್ದಾರೆ. ಕಾಟೇರ ಚಿತ್ರದಲ್ಲಿ ದರ್ಶನ್ ಈ ಸಲ ಏನ್ ಹೇಳ್ತಿದ್ದಾರೆ ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ. ಉಳಿದಂತೆ ಕಾಟೇರ ಒಂದು ಕಲ್ಪ್ ಸಿನಿಮಾ ಆಗಲಿದೆ ಅಂತಲೇ ಹೇಳಬಹುದು.
Challenging Star Darshan Acted Kaatera movie Director Tharun Sudhir.
31-08-25 05:35 pm
HK News Desk
Bangalore Court, Dharmasthala, Delete Videos:...
30-08-25 04:51 pm
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 01:56 pm
Mangaluru Correspondent
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm