ಜ್ವರವಿಲ್ಲ,ನಾಲಗೆ ಒಣಗುವುದುದು ಕೊರೊನಾ ವೈರಸ್‌ನ ಹೊಸ ಲಕ್ಷಣವಾಗಿದೆ

19-05-21 10:46 am       Reena TK, BoldSky Kannada   ಡಾಕ್ಟರ್ಸ್ ನೋಟ್

ಕೊರೊನಾವೈರಸ್‌ 2ನೇ ಅಲ್ಲಲ್ಲಿ ವೈರಸ್‌ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿರುವುದರಿಂದ ಸೋಂಕಿತರ ಸಂಖ್ಯೆ ತುಂಬಾ ಅಧಿಕವಾಗಿದೆ.

ಕೊರೊನಾವೈರಸ್‌ 2ನೇ ಅಲ್ಲಲ್ಲಿ ವೈರಸ್‌ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿರುವುದರಿಂದ ಸೋಂಕಿತರ ಸಂಖ್ಯೆ ತುಂಬಾ ಅಧಿಕವಾಗಿದೆ. ಈ ಕೊರೊನಾವೈರಸ್‌ ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣ ತೋರುತ್ತಿದೆ. ಲಕ್ಷಣಗಳನ್ನು ಮೊದಲೇ ಗುರುತಿಸಿ, ಬೇಗನೆ ಗುರುತಿಸಿದರೆ ರೋಗ ಸ್ಥಿತಿ ಗಂಭೀರವಾಗುವುದನ್ನು ತಡೆಗಟ್ಟಬಹುದು.

ಕೊರೊನಾವೈರಸ್‌ ದಿನಗಳು ಕಳೆದಂತೆ ಹೊಸ ಬಗೆಯ ಲಕ್ಷಣಗಳು ಕಂಡು ಬರುತ್ತಿವೆ. ಇದೀಗ ತಜ್ಞರು ಈ ರೂಪಾಂತರಿ ಕೊರೊನಾ ವೈರಸ್‌ನ ಹೊಸ ಲಕ್ಷಣಗಳ ಬಗ್ಗೆ ಹೇಳಿದ್ದಾರೆ. ಆ ಲಕ್ಷಣಗಳೇನು ಎಂಬುವುದನ್ನು ನೋಡೋಣ ಬನ್ನಿ:

ಕೋವಿಡ್ ಡಂಗ್ ಅಥವಾ ನಾಲಗೆ

ಬೆಂಗಳೂರಿನ ವೈದ್ಯರು ಕೊರೊನಾವೈರಸ್ ಬಗ್ಗೆ ಹೊಸ ಲಕ್ಷಣ ತಿಳಿಸಿದ್ದಾರೆ. ಕೋವಿಡ್‌ ಟಾಸ್ಕ್‌ ಪೋರ್ಸ್‌ನ ಸದಸ್ಯರಾಗಿರುವ ಡಾ. ಜಿಬಿ ಸತ್ತೂರ್‌ ಹೇಳುವ ಪ್ರಕಾರ 55 ವರ್ಷದ ವ್ಯಕ್ತಿಯೊಬ್ಬರು ಬಾಯಿ ತುಂಬಾ ಒಣಗುತ್ತಿದೆ ಎಂದು ಹೇಳಿ ಬಂದಿದ್ದರು. ನಂತರ ಆ ರೋಗಿಯನ್ನು ಪರೀಕ್ಷಿಸಿದಾಗ ಕೋವಿಡ್ 19 ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂತು.

ಜ್ವರವಿಲ್ಲ, ಬಾಯಿ ಒಣಗುವುದು

ಆ ವ್ಯಕ್ತಿಯ ಸಕ್ಕರೆಯಂಶ ಪರೀಕ್ಷಿಸಿದಾಗ ನಾರ್ಮಲ್ ಆಗಿತ್ತು. ESR ( erythrocyte sedimentation rate) ಅಧಿಕವಿತ್ತು. ಆದರೆ ಜ್ವರವಿರಲಿಲ್ಲ, ತುಂಬಾ ಸುಸ್ತು ಇತ್ತು. ಇದು ಕೋವಿಡ್‌ನ ಲಕ್ಷಣವಿರಬಹುದೇ ಎಂದು ಪರೀಕ್ಷಿಸಿದಾಗ ಸೋಂಕು ಇರುವುದಾಗಿ ದೃಢಪಟ್ಟಿತ್ತು.

ಕೋವಿಡ್ ಟಂಗ್ ಆದರೆ ಕಂಡು ಬರುವ ಲಕ್ಷಣಗಳು

ನಾಲಗೆಯಲ್ಲಿ ತುರಿಕೆ, ಒಂಥರಾ ನೋವು ಬಾಯಿ ತುಂಬಾ ಒಣಗುವುದು ಹಾಗೂ ಬಾಯಿಯಲ್ಲಿ ಗುಳ್ಳೆಗಳು ಕಂಡು ಬರಬಹುದು. ಅಲ್ಲದೆ ಜ್ವರವಿಲ್ಲದಿದ್ದರೂ ತುಂಬಾ ಸುಸ್ತು ಇರುತ್ತದೆ.

ಆದ್ದರಿಂದ ನಾಲಗೆ ತುಂಬಾ ಒಣಗಿದ ಅನುಭವ ಆಗಿದ್ದರೆ ನಿರ್ಲಕ್ಷ್ಯ ಮಾಡದೆ ಕೊರೊನಾ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಕೊರೊನಾ ಸೋಂಕಿನ ಲಕ್ಷಣಗಳು

  • ಜ್ವರ
  • ಒಣ ಕೆಮ್ಮು
  • ಸುಸ್ತು
  • ವಾಸನೆ ಗ್ರಹಿಸಲು ಸಾಧ್ಯವಾಗದಿರುವುದು
  • ರುಚಿ ತಿಳಿಯದಿರುವುದು
  • ಉಸಿರಾಟದಲ್ಲಿ ತೊಂದರೆ

(Kannada Copy of Boldsky Kannada)