ಬ್ರೇಕಿಂಗ್ ನ್ಯೂಸ್
24-03-22 08:03 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನಮ್ಮ ಹೃದಯ ಅಥವಾ ಹಾರ್ಟ್ನ ಆರೋಗ್ಯದ ಕಾಳಜಿಯ ವಿಷ್ಯಕ್ಕೆ ಬಂದಾಗ ಎಷ್ಟು ಕಾಳಜಿ ವಹಿಸುತ್ತಿರೋ ಅಷ್ಟು ಒಳ್ಳೆಯದು. ಹೀಗಾಗಿ ನಮ್ಮ ದೇಹದ ಪ್ರಮುಖ ಅಂಗವಾಗಿರುವ ಈ ಹೃದಯ ಆರೋಗ್ಯವಾಗಿ ಇರಬೇಕೆಂದರೆ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಅಥವಾ ಜಿಡ್ಡಿನ ಆಹಾರ ಪದಾರ್ಥಗಳಿಂದ ದೂರ ಬೇಕು.
ಅದರಲ್ಲೂ ಒಂದು ವೇಳೆ ನಿಮಗೆ ಹೃದಯದ ಸಮಸ್ಯೆಗಳಿದ್ದರೆ ಅಥವಾ ಹೃದಯದ ಶಸ್ತ್ರಚಿಕಿತ್ಸೆ ಆಗಿದ್ದರೆ, ದಿನನಿತ್ಯ ಸೇವಿಸುವ ಆಹಾರ ಪದ್ಧತಿಯಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕು.
ವೈದ್ಯರು ಕೊಟ್ಟಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ ಸರಿಯಾದ ಆಹಾರ ಪದ್ಧತಿಗಳನ್ನು ಅನುಸರಿಸಬೇಕು. ಬನ್ನಿ ಇಂದಿನ ಲೇಖನದಲ್ಲಿ ಹೃದಯದ ಸಮಸ್ಯೆ ಇದ್ದವರು ಅಥವಾ ಹಾರ್ಟ್ ಸರ್ಜರಿ ಮಾಡಿಸಿಕೊಂಡವರು ಯಾವೆಲ್ಲಾ ಆಹಾರಗಳನ್ನು ಮಾಡಬಹುದು ಎಂಬುದನ್ನು ನೀಡಿದ್ದೇವೆ ಮುಂದೆ ಓದಿ...
ಸಕ್ಕರೆ ಕಾಯಿಲೆ ಹಾಗೂ ಹೈಬಿಪಿ ಸಮಸ್ಯೆ ಇದ್ದರೆ
ಒಂದು ವೇಳೆ ನಿಮಗೆ ಈಗಾಗಲೇ ಸಕ್ಕರೆ ಕಾಯಿಲೆಯ ಜೊತೆಗೆ ಹೈಬಿಪಿಯ ಸಮಸ್ಯೆ ಕೂಡ ಇದ್ದರೆ ಎಳನೀರು ಹಾಗೂ ತೆಂಗಿನಕಾಯಿ ಹಾಕಿದ ಪದಾರ್ಥಗಳಿಂದ ದೂರ ಉಳಿಯುವುದು ಒಳ್ಳೆಯದು. ಏಕೆಂದರೆ ಇದು ನಿಮ್ಮ ದೇಹಕ್ಕೆ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವನ್ನು ಸೇರಿಸುವ ಸಾಧ್ಯತೆ ಇರುತ್ತದೆ.
ಇನ್ನು ಬಾಳೆಹಣ್ಣು, ಮಾವಿನ ಹಣ್ಣು, ಪಪ್ಪಾಯ ಹಣ್ಣು, ಇಂತಹ ಹಣ್ಣುಗಳಿಂದ ಕೂಡ ದೂರ ಇದ್ದರೆ ಒಳ್ಳೆಯದು. ಇನ್ನು ಈ ಆಹಾರಗಳನ್ನು ಸೇವಿಸುವ ಮುನ್ನ ವೈದ್ಯರ ಜೊತೆಗೆ ಸರಿಯಾಗಿ ಸಲಹೆಗಳನ್ನು ಪಡೆದುಕೊಳ್ಳಿ. ಯಾಕೆಂದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಹೃದಯಕ್ಕೆ ಇದರಿಂದ ಹೆಚ್ಚು ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ, ಎಂದು ಸಂಶೋಧನೆಗಳಲ್ಲಿ ಕಂಡುಬಂದಿದೆ.
ರೋಡ್ ಸೈಡ್ ಫುಡ್ ಇಲ್ಲಾಂದ್ರೆ ಹೋಟೇಲ್ ಆಹಾರಗಳಿಂದ ದೂರವಿರಿ
ಹೃದಯದ ಸಮಸ್ಯೆ ಇದ್ದವರು ಅಥವಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು, ಆದಷ್ಟು ಮನೆ ಊಟ ಮಾಡಿದರೆ ತುಂಬಾನೇ ಒಳ್ಳೆಯದು. ಈ ಸಮಸ್ಯೆ ಸರಿಯಾಗಿ ಹತೋಟಿಗೆ ಬರುವವರೆಗೆ ಹೊರಗಿನ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ.
ಇನ್ನು ವೈದ್ಯರೇ ಹೇಳುವ ಪ್ರಕಾರ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕನಿಷ್ಠ ಮೂರು ತಿಂಗಳವರೆಗೆ ಮನೆಯಿಂದ ಹೊರಗಡೆ ರಸ್ತೆ ಬದಿಯಲ್ಲಿ ಆಹಾರ ಸೇವನೆ ಮಾಡಬಾರದಂತೆ! ಯಾಕೆಂದ್ರೆ ಕೆಲವೊಂದು ಎಣ್ಣೆಯುಕ್ತ ಆಹಾರ ಪದಾರ್ಥಗಳು ಅಥವಾ ಎಣ್ಣೆಯ ಜಿಡ್ಡಿನ ಅಂಶಗಳಿಂದಾಗಿ ಹೃದಯಕ್ಕೆ ಮತ್ತೆ ತೊಂದರೆಗಳು ಉಂಟಾಗುವ ಸಂಭವ ಜಾಸ್ತಿ ಇರುತ್ತದೆ.
ಆರೋಗ್ಯಕಾರಿ ಪಾನೀಯಗಳ ಸೇವನೆ
ಪ್ರೋಟೀನ್ ಅಂಶ
ಅಧ್ಯಾಯನಗಳು ಹೇಳುವ ಪ್ರಕಾರ, ಕಿಡ್ನಿ ಸಮಸ್ಯೆ ಇದ್ದವರು, ಆದಷ್ಟು ಪ್ರೋಟೀನ್ ಅಂಶವನ್ನು ಕಡಿಮೆ ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಯಾಕೆಂದರೆ ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಂಶ ಇದ್ದರೆ, ಇದರಿಂದಾಗಿ ಮುಂದಿನ ದಿನಗಳಲ್ಲಿ ಕಿಡ್ನಿಗಳ ಮೇಲೆ ಹೆಚ್ಚು ಒತ್ತಡ ಉಂಟು ಆಗುವ ಸಾಧ್ಯತೆ ಹೆಚ್ಚು ಇರುತ್ತದೆಯಂತೆ!
ಇದರಿಂದಾಗಿ ಹೃದಯದ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಉಂಟಾಗಬಹುದು. ಹಾಗಾಗಿ ಇವೆಲ್ಲಾ ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರೆ, ಪ್ರೋಟೀನ್ ಅಂಶ ಇರುವ ಆಹಾರಗಳನ್ನು ಸಮತೋಲನದಲ್ಲಿ ಇಟ್ಟುಕೊಂಡರೆ, ಒಳ್ಳೆಯದು.
ಇವುಗಳಿಂದ ದೂರವಿರಿ
ಸಕ್ಕರೆ ಮಿಶ್ರಿತ ಆಹಾರಗಳಿಂದ ಮತ್ತು ಪಾನೀಯಗಳಿಂದ ದೂರವಿರುವುದು ಒಳ್ಳೆಯದು. ಉದಾಹರಣೆಗೆ ನೋಡುವುದಾದರೆ, ಬೇಕರಿಯ ಸ್ವೀಟ್ಸ್, ತಂಪು ಪಾನೀಯಗಳು ಹಾಗೂ ಆಲ್ಕೋಹಾಲ್ಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ.
Foods To Eat And Avoid After Heart Surgery.
22-12-24 10:23 am
HK News Desk
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
Chikkamagaluru, Elephant Attack: ಚಿಕ್ಕಮಗಳೂರಲ್...
19-12-24 06:36 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 06:04 pm
Udupi Correspondent
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
Anil Lobo MCC Bank Arrest, Court: ಬ್ಯಾಂಕ್ ಸಾಲ...
20-12-24 09:48 pm
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm