ಬ್ರೇಕಿಂಗ್ ನ್ಯೂಸ್
22-11-22 10:50 am Mangalore Correspondent ಕರಾವಳಿ
ಮಂಗಳೂರು, ನ.21: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡು ಸಿಕ್ಕಿಬಿದ್ದಿರುವ ಉಗ್ರ ಮೊಹಮ್ಮದ್ ಶಾರೀಕ್ ಮೈಸೂರಿನಿಂದ ಒಬ್ಬಂಟಿಯಾಗಿಯೇ ಮಂಗಳೂರಿಗೆ ಬಂದಿದ್ದನೇ ಅಥವಾ ಆತನ ಜೊತೆಗೆ ಇನ್ನೊಬ್ಬ ಬಂದಿದ್ದನೇ ಎಂಬ ಬಗ್ಗೆ ಶಂಕೆ ಮೂಡಿದೆ. ಪ್ರಕರಣದ ಹಿನ್ನೆಲೆ ಪೊಲೀಸರು ಪಡೀಲಿನಿಂದ ಪಂಪ್ವೆಲ್ ವರೆಗಿನ ಹೆದ್ದಾರಿಯ ಉದ್ದಕ್ಕೂ ಇರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಹಲವಾರು ಅನುಮಾನಗಳಿಗೆ ಈಡು ಮಾಡುವ ಸಾಕ್ಷ್ಯಗಳು ಪೊಲೀಸರಿಗೆ ಲಭಿಸಿವೆ.
ಪೊಲೀಸರ ಅಂದಾಜು ಪ್ರಕಾರ, ಆತ ಬಸ್ಸಿನಲ್ಲಿ ಬಂದಿದ್ದು ಮೈಸೂರು, ಮಡಿಕೇರಿಯಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ಬಂದು ಪಡೀಲಿನಲ್ಲಿ ಇಳಿದಿದ್ದಾನೆ. ಆನಂತರ, ಅಲ್ಲಿಂದ ನಡೆದುಕೊಂಡೇ ಒಂದು ಕಿಮೀ ಸಾಗಿದ್ದಾನೆ. ಈ ನಡುವೆ, ಹೆದ್ದಾರಿ ಬದಿಯ ವೈನ್ ಶಾಪ್ ನಲ್ಲಿ ದಾಖಲಾಗಿರುವ ಸಿಸಿಟಿವಿಯಲ್ಲಿ ಇಬ್ಬರು ಜೊತೆಯಾಗಿ ಅಲ್ಲಿಗೆ ಬಂದಿರುವುದು ಕಾಣಿಸಿದೆ. ಅದರಲ್ಲಿ ಒಬ್ಬಾತ ಮೊಹಮ್ಮದ್ ಶಾಕೀರ್ ಅನ್ನುವ ಅನುಮಾನ ಪೊಲೀಸರದ್ದು. ಆ ಸಂದರ್ಭದಲ್ಲಿ ಶಾಕೀರ್ ಜೊತೆಗೆ ಇನ್ನೊಬ್ಬ ಯುವಕನೂ ಇದ್ದ. ಇಬ್ಬರು ಕೂಡ ಕೈಯಲ್ಲಿ ಒಂದೇ ಗಾತ್ರದ ಬ್ಯಾಗ್ ಹಿಡಿದುಕೊಂಡಿದ್ದರು. ಶಾರೀಕ್ ಈ ಸಂದರ್ಭದಲ್ಲಿ ತನ್ನ ಕೈಯಲ್ಲಿ ಕುಕ್ಕರ್ ಬಾಂಬ್ ಹಿಡಿದುಕೊಂಡೇ ಬಂದಿದ್ದರೆ, ಇನ್ನೊಬ್ಬನ ಕೈಯಲ್ಲಿದ್ದ ಬ್ಯಾಗ್ ನಲ್ಲಿ ಏನಿತ್ತು ಅನ್ನುವ ಅನುಮಾನ ಎದ್ದಿದೆ. ಅದರಲ್ಲು ಇದ್ದಿರಬಹುದಾದ ಬಾಂಬ್ ಎಲ್ಲಿ ಹೋಯಿತು ಎನ್ನುವ ಅನುಮಾನ, ಪ್ರಶ್ನೆ ಎದುರಾಗಿದೆ.
ವೈನ್ ಶಾಪ್ ನಲ್ಲಿ ಕ್ವಾರ್ಟರ್ ಬಾಟಲಿ ಪಡೆದಿದ್ದ !
ವೈನ್ ಶಾಪ್ ಗೆ ಬಂದಿದ್ದ ಇಬ್ಬರು ಯುವಕರು ಅಲ್ಲಿಂದ ಐಬಿ ಬ್ರಾಂಡಿನ ಕ್ವಾರ್ಟರ್ ಬಾಟಲಿಯನ್ನು ಖರೀದಿಸಿದ್ದರು. ಕ್ವಾರ್ಟರ್ ಕುಡಿದು ಅದೇ ಭಂಡ ಧೈರ್ಯದಲ್ಲಿ ಅದೇ ಪರಿಸರದಲ್ಲಿ ಕುಕ್ಕರ್ ಒಳಗೆ ಬಾಂಬ್ ವೈರ್ ಕನೆಕ್ಟ್ ಮಾಡಿದ್ದನೇ ಅನ್ನುವ ಸಂಶಯಗಳಿವೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿಯಲ್ಲಿ ಬಂದು ರೈಲ್ವೇ ನಿಲ್ದಾಣದಿಂದ ಮೇಲೆ ಹೆದ್ದಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಕೈ ಹಿಡಿದು ನಿಲ್ಲಿಸಿ, ಅದರಲ್ಲಿ ಹತ್ತಿಕೊಂಡಿದ್ದ. ಆಟೋ ರಿಕ್ಷಾ ಅರ್ಧ ಕಿಮೀ ಸಾಗುವಷ್ಟರಲ್ಲಿ ಬ್ಲಾಸ್ಟ್ ಆಗಿತ್ತು. ಆದರೆ ಆಟೋದಲ್ಲಿ ಇದ್ದದ್ದು ಒಬ್ಬನೇ ಆಗಿರುವುದರಿಂದ ಆತನ ಜೊತೆಗಿದ್ದ ವ್ಯಕ್ತಿ ಎಲ್ಲಿ ಹೋದ ಅನ್ನುವ ಪ್ರಶ್ನೆ ಉಂಟಾಗಿದೆ.
ಜೊತೆಗಿದ್ದ ಇನ್ನೊಬ್ಬ ವ್ಯಕ್ತಿಯ ಕೈಯಲ್ಲೂ ಇನ್ನೊಂದು ಬಾಂಬ್ ಇತ್ತೇ ಎನ್ನುವ ಅನುಮಾನಗಳಿವೆ. ಅಲ್ಲದೆ, ಆ ವ್ಯಕ್ತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಬಗ್ಗೆ ಜೊತೆಗಿದ್ದ ವ್ಯಕ್ತಿ ಯಾರು ಎಂದು ಪತ್ತೆ ಮಾಡಲು ಇತ್ತ ಶಾರೀಕ್ ಮಾತನಾಡುತ್ತಿಲ್ಲ. ಹೀಗಾಗಿ ಪೊಲೀಸರು ಜೊತೆಗಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಲು ತಲೆಕೆಡಿಸಿಕೊಂಡಿದ್ದಾರೆ.
Autorickshaw bomb blast in Mangalore, CCTV footage shows Mohammed Shariq along with another friend buying alcohol. But the friend who was also carrying a big bag is not yet traced.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm