ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಜೋಸ್ ಬಟ್ಲರ್

10-03-21 03:58 pm       Source: MYKHEL   ಕ್ರೀಡೆ

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆಯುವ ಐದು ಪಂದ್ಯಗಳ ಟಿ20 ಸರಣಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆಯುವ ಐದು ಪಂದ್ಯಗಳ ಟಿ20 ಸರಣಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿದ್ದು ಅದರಲ್ಲೂ ತವರಿನಲ್ಲಿ ಸೋಲಿಸುವುದು ಅತ್ಯಂತ ಕಠಿಣ ಎಂಬ ಮಾತನ್ನು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಜೊಸ್ ಬಟ್ಲರ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಕಪ್ ಗೆಲ್ಲುವ ಫೇವರೀಟ್ ತಂಡ ಭಾರತ ಎಂಬ ಮಾತನ್ನು ಬಟ್ಲರ್ ಹೇಳಿದ್ದಾರೆ. ಮುಂಬರುವ ಅಕ್ಟೋಬರ್- ನವೆಂಬರ್ ತಿಂಗಳನಲ್ಲಿ ಭಾರತ ಈ ಮಹತ್ವದ ಟೂರ್ನಿಯನ್ನು ಆಯೋಜನೆ ಮಾಡಲಿದೆ. ವಿರಾಟ್ ಕೊಹ್ಲಿ ಪಡೆ ಸೇರಿಕೊಳ್ಳಲಿದ್ದಾರೆ ಯುವ ಸ್ಪಿನ್ನರ್ ರಾಹುಲ್ ಚಾಹರ್ 2013ರರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಯಾವುದೇ ಐಸಿಸಿ ಟೂರ್ನಿಯನ್ನು ಗೆದ್ದಿಲ್ಲ.

ಹೀಗಾಗಿ ಈ ಮಹತ್ವದ ಟೂರ್ನಿಯ ಮೇಲೆ ಭಾರತ ಕಣ್ಣಿಟ್ಟಿದೆ. ಮತ್ತೊಂದೆಡೆ ಟಿ20 ವಿಶ್ವಕಪ್ ಜಯಿಸಿ ಭಾರತ ದಶಕದ ಮೇಲಾಗಿದೆ. ಹೀಗಾಗಿ ಈ ಟೂರ್ನಿ ಗೆಲ್ಲಲು ಭಾರತ ತನ್ನೆಲ್ಲಾ ಪ್ರಯತ್ನವನ್ನು ನಡೆಸಲಿದೆ. 2007ರಲ್ಲಿ ನಡೆದ ಟಿ20 ಉದ್ಘಾಟನಾ ಟೂರ್ನಿಯಲ್ಲಿ ಭಾರತ ಪ್ರಶಸ್ತಿಯನ್ನು ಗೆದ್ದಿತ್ತು. "ವಿಶ್ವಕಪ್‌ನಂತಾ ಟೂರ್ನಿಯಲ್ಲಿ ಭಾರತ ಬಲಿಷ್ಠವಾಗಿರುತ್ತದೆ. ಅದರಲ್ಲೂ ಈ ಬಾರಿ ಭಾರತದಲ್ಲೇ ಈ ಟೂರ್ನಿ ನಡೆಯುತ್ತಿರುವುದು ಭಾರತ ಈ ಟೂರ್ನಿಯನ್ನು ಗೆಲ್ಲುವ ಫೇವರೀಟ್ ತಂಡ" ಎಂದು ಜೋಸ್ ಬಟ್ಲರ್ ಹೇಳಿಕೆಯನ್ನು ನೀಡಿದ್ದಾರೆ.

"ಸಾಕಷ್ಟು ಅತ್ಯುತ್ತಮ ತಂಡಗಳು ಇವೆ. ಕಳೆದ ಕೆಲ ವಿಶ್ವಕಪ್‌ಗಳನ್ನು ಗಮನಸಿದರೆ ಆಯೋಜನಾ ತಂಡಗಳು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿಕೊಂಡು ಬಂದಿದ್ದಾರೆ. ಭಾರತ ಖಂಡಿತವಾಗಿಯೂ ಪ್ರತಿಯೊಂದು ಮಾದರಿಯಲ್ಲೂ ಬಲಿಷ್ಠವಾದ ತಂಡವಾಗಿದೆ. ಟಿ20ಯಲ್ಲೂ ಅದು ಭಿನ್ನವಾಗಿಲ್ಲ. ಭಾರತದಲ್ಲಿ ಆಡುವಾಗ ಭಾರತ ಯಾವಾಗಲೂ ಫೇವರೀಟ್ ತಂಡವಾಗಿರುತ್ತದೆ" ಎಂದು ಜೋಸ್ ಬಟ್ಲರ್ ಹೇಳಿಕೆಯನ್ನು ನೀಡಿದ್ದಾರೆ.

This News Article Is A Copy Of MYKHEL