ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಐಸಿಸಿ ಸಿಇಒ ಮನು ಸಾಹ್ನಿ

11-03-21 01:30 pm       Source: MYKHEL   ಕ್ರೀಡೆ

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನು ಸಾಹ್ನಿಗೆ ಸ್ಥಾನ ಕಳೆದುಕೊಳ್ಳಬೇಕಾದ ಭೀತಿ ಎದುರಾಗಿದೆ.

ದುಬೈ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನು ಸಾಹ್ನಿಗೆ ಸ್ಥಾನ ಕಳೆದುಕೊಳ್ಳಬೇಕಾದ ಭೀತಿ ಎದುರಾಗಿದೆ. ಸಾಹ್ನಿ ನಡೆಯ ಬಗ್ಗೆ ಅನುಮಾನ ವ್ಯಕ್ತವಾಗಿರುವುದರಿಂದ ಅವರನ್ನು ರಜೆಯಲ್ಲಿ ಕಳುಹಿಸಿ ಐಸಿಸಿ ತನಿಖೆ ನಡೆಸುತ್ತಿದೆ. ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ಆರ್‌ಸಿಬಿಗೆ ಸೇರ್ಪಡೆ!

'ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್' ಎನ್ನುವ ಲೆಕ್ಕ ಪರಿಶೋಧಕ ಸಂಸ್ಥೆ ಐಸಿಸಿ ಸಿಇಒ ಮನು ಸಾಹ್ನಿ ವ್ಯವಹಾರಗಳ ಕುರಿತು ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ಸಾಹ್ನಿ ತನ್ನ ಅವಧಿ ಮುಗಿಯುವ ಮುನ್ನವೇ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ. 2019ರ ಐಸಿಸಿ ವಿಶ್ವಕಪ್‌ ಬಳಿಕ ಐಸಿಸಿ ಸಿಇಒ ಆಗಿದ್ದ ಡೇವ್ ರಿಚರ್ಡ್ಸನ್ ಅವರ ಬದಲಿಗೆ ಸಾಹ್ನಿ ಸ್ಥಾನಕ್ಕೇರಿದ್ದರು.

ಸಾಹ್ನಿ ಒಪ್ಪಂದದ ಅವಧಿ 2022ರ ವರೆಗಿತ್ತು. ಆದರೆ ವಿವಿಧ ನೀತಿ ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಭಾವಶಾಲಿ ಕ್ರಿಕೆಟ್ ಮಂಡಳಿಗಳೊಂದಿಗೆ ಸಾಹ್ನಿ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ.

ವಿರಾಟ್ ಕೊಹ್ಲಿ ದಾಖಲೆ ಸರಿದೂಗಿಸಿಕೊಂಡ ದೇವದತ್ ಪಡಿಕ್ಕಲ್ ಸಾಹ್ನಿ ಅವರ 'ಕೆಟ್ಟ ನಡವಳಿಕೆ'ಯ ಬಗ್ಗೆ ಐಸಿಸಿ ಅನೇಕ ಸಿಬ್ಬಂದಿಯಿಂದ ಸಾಕ್ಷ್ಯಗಳು ಸಿಕ್ಕಿವೆ. ಇದು ಅತ್ಯಂತ ಪರಿಣಾಮಕಾರಿಯಾಗಿರುವ ಈ ಗುಂಪಿನ ನೌಕರರ ಸ್ಥೈರ್ಯಕ್ಕೆ ಉತ್ತಮವಾಗಿಲ್ಲ,' ಎಂದು ಐಸಿಸಿಗೆ ಹತ್ತಿರವಾಗಿರುವ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.

This News Article Is A Copy Of MYKHEL