ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹಶ್ಮತುಲ್ಲ ಶಾಹಿದಿ

12-03-21 11:00 am       Source: MYKHEL   ಕ್ರೀಡೆ

ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಹಶ್ಮತುಲ್ಲ ಶಾಹಿದಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಅಬುಧಾಬಿ: ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಹಶ್ಮತುಲ್ಲ ಶಾಹಿದಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಹಶ್ಮತುಲ್ಲ ಅಫ್ಘಾನ್ ಪರ ಇತಿಹಾಸ ಬರೆದಿದ್ದಾರೆ. ಶಾಹಿದಿ ಮತ್ತು ನಾಯಕ ಅಸ್ಘರ್ ಅಫ್ಘಾನ್ ರನ್‌ ಕೊಡುಗೆಯೊಂದಿಗೆ ಅಫ್ಘಾನ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ರನ್ ಕಲೆ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನದಿಂದ 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಹಶ್ಮತುಲ್ಲ ಶಾಹಿದಿ, 443 ಎಸೆತಗಳಲ್ಲಿ 200 ರನ್ ಬಾರಿಸಿದ್ದಾರೆ. ಶಾಹಿದಿ ದ್ವಿಶತಕ ಬಾರಿಸುತ್ತಲೇ ಅವರ ಹಸರಿನಲ್ಲಿ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ.

ಹೊಸ ದಾಖಲೆ ನಿರ್ಮಾಣ

ಹೊಸ ದಾಖಲೆ ನಿರ್ಮಾಣ

ಜಿಂಬಾಬ್ವೆ ವಿರುದ್ಧದ ಮೊದಲನೇ ಇನ್ನಿಂಗ್ಸ್‌ನಲ್ಲಿ ಅಶ್ಮತುಲ್ಲ ಶಾಹಿದಿ ಬಾರಿಸಿದ 200 ರನ್‌ನಿಂದ ಶಾಹಿದಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಪರ ದ್ವಿಶತಕ ಬಾರಿಸಿದ ಮೊದಲನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಡಿಮೆ ಅನುಭವಿ ತಂಡವೆನಿಸಿರುವ ಅಫ್ಘಾನ್‌ಗೆ ಶಾಹಿದಿ ಸಾಧನೆ ಇನ್ನಷ್ಟು ಬಲ ತುಂಬಿದೆ.

ಭಾರತ ವಿರುದ್ಧ ಪಾದಾರ್ಪಣೆ

26ರ ಹರೆಯದ ಶಾಹಿದಿ, 5 ಟೆಸ್ಟ್‌ ಪಂದ್ಯಗಳಲ್ಲಿ 347 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ, 1 ದ್ವಿಶತಕ ಸೇರಿದೆ. ಇನ್ನು 42 ಏಕದಿನ ಪಂದ್ಯಗಳಲ್ಲಿ 1155 ರನ್ ಬಾರಿಸಿದ್ದಾರೆ. ಕೀನ್ಯಾ ವಿರುದ್ಧ 2013ರಲ್ಲಿ ಏಕದಿನ ಪಾದಾರ್ಪಣೆ ಮಾಡಿದ್ದ ಶಾಹಿದಿ 2018ರಲ್ಲಿ ಭಾರತ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು.

ಅಫ್ಘಾನಿಸ್ತಾನ ಭರ್ಜರಿ ರನ್

ಅಫ್ಘಾನಿಸ್ತಾನ ಭರ್ಜರಿ ರನ್

ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ರನ್ ಕಲೆ ಹಾಕಿದೆ. ಇಬ್ರಾಹಿಂ ಝದ್ರನ್ 72, ಝಾವೆದ್ ಅಹ್ಮದಿ 4, ರಹಮತ್ ಶಾ 23, ಹಶ್ಮತುಲ್ಲ ಶಾಹಿದಿ ಅಜೇಯ 200, ನಾಯಕ ಅಸ್ಘರ್ ಅಫ್ಘಾನ್ 164, ನಾಸಿರ್ ಜಮಾಲ್ ಅಜೇಯ 55 ರನ್ ಬಾರಿಸಿದ್ದರು. ಅಫ್ಘಾನ್ 160.4 ಓವರ್‌ಗೆ 4 ವಿಕೆಟ್ ಕಳೆದು 545 ರನ್ ಕಲೆ ಹಾಕಿ ಡಿಕ್ಲೇರ್ ಘೋಷಿಸಿತ್ತು.

This News Article Is A Cop Of MYKHEL