ವೆಸ್ಟ್‌ ಇಂಡೀಸ್ ಟೆಸ್ಟ್‌ ನಾಯಕರಾಗಿ ಕ್ರೇಗ್ ಬ್ರಾಥ್‌ವೇಟ್ ಆಯ್ಕೆ

12-03-21 12:27 pm       Source: MYKHEL   ಕ್ರೀಡೆ

ವೆಸ್ಟ್‌ ಇಂಡೀಸ್ ಟೆಸ್ಟ್‌ ಕ್ರಿಕೆಟ್ ತಂಡಕ್ಕೆ ನೂತನ ನಾಯಕರಾಗಿ ಕ್ರೇಗ್ ಬ್ರಾಥ್‌ವೇಟ್ ಆಯ್ಕೆಯಾಗಿದ್ದಾರೆ.

ಆ್ಯಂಟಿಗುವಾ: ವೆಸ್ಟ್‌ ಇಂಡೀಸ್ ಟೆಸ್ಟ್‌ ಕ್ರಿಕೆಟ್ ತಂಡಕ್ಕೆ ನೂತನ ನಾಯಕರಾಗಿ ಕ್ರೇಗ್ ಬ್ರಾಥ್‌ವೇಟ್ ಆಯ್ಕೆಯಾಗಿದ್ದಾರೆ. ಟೆಸ್ಟ್‌ ತಂಡಕ್ಕೆ ನಾಯಕರಾಗಿದ್ದ ಆಲ್ ರೌಂಡರ್ ಜೇಸನ್ ಹೋಲ್ಡರ್ ಸ್ಥಾನಕ್ಕೆ ಬ್ರಾಥ್‌ವೇಟ್ ಆಯ್ಕೆಯಾಗಿರುವುದಾಗಿ ವೆಸ್ಟ್‌ ಇಂಡೀಸ್ ಕ್ರಿಕೆಟ್ ಹೇಳಿದೆ.

ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ಆರ್‌ಸಿಬಿಗೆ ಸೇರ್ಪಡೆ! ಈ ಮೊದಲು ಜೇಸನ್ ಹೋಲ್ಡರ್‌ ಜೊತೆಗೆ ಉಪನಾಯಕರಾಗಿದ್ದ ಕ್ರೇಗ್ ಬ್ರಾಥ್‌ವೇಟ್ ಒಟ್ಟು 7 ಪಂದ್ಯಗಳಲ್ಲಿ ಕೆರಿಬಿಯನ್ ತಂಡವನ್ನು ಮುನ್ನಡೆಸಿದ್ದರು. ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವಿಂಡೀಸ್, ಅಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-0ಯ ಜಯ ಗಳಿಸಿತ್ತು.

'ವೆಸ್ಟ್‌ ಇಂಡೀಸ್ ರಾಷ್ಟ್ರೀಯ ತಂಡಕ್ಕೆ ನಾಯಕತ್ವ ವಹಿಸೋದು ದೊಡ್ಡ ಹೆಮ್ಮೆಯ ಸಂಗತಿ. ತಂಡ ಮುನ್ನಡೆಸುವ ಅವಕಾಶ, ಜವಾಬ್ದಾರಿ ನೀಡಿದ್ದಕ್ಕೆ ನಾನು ಕ್ರಿಕೆಟ್ ಬೋರ್ಡ್ ಮತ್ತು ಆಯ್ಕೆದಾರರಿಗೆ ವಿನಮ್ರನಾಗಿದ್ದೇನೆ,' ಎಂದು ಬ್ರಾಥ್‌ವೇಟ್ ಪ್ರತಿಕ್ರಿಯಿಸಿದ್ದಾರೆ.

ಸದ್ಯ ವೆಸ್ಟ್ ಇಂಡೀಸ್‌ಗೆ ಪ್ರವಾಸ ಬಂದಿರುವ ಶ್ರೀಲಂಕಾ ತಂಡ 3 ಪಂದ್ಯಗಳ ಟಿ20ಐ ಸರಣಿ ಬಳಿಕ 3 ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ. ಮಾರ್ಚ್ 21ರಿಂದ ಇತ್ತಂಡಗಳ ಮಧ್ಯೆ 2 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ಪರ ಆಡುವ ಜೇಸನ್ ಹೋಲ್ಡರ್ ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಂಥ ಪ್ರದರ್ಶನ ನೀಡುತ್ತಿರಲಿಲ್ಲ. ಸದ್ಯ ಹೋಲ್ಡರ್ ಲಂಕಾ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ.

This News Article Is A Copy Of MYKHEL