"ನಾನು ಬೀದಿಯಿಂದ ಬಂದವನು, ತಿರುಗಿ ಬೀಳುವ ಸಾಮರ್ಥ್ಯವಿದೆ" ಎಂದ ಪೃಥ್ವಿ ಶಾ

13-03-21 02:53 pm       source: MYKHEL   ಕ್ರೀಡೆ

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಆಟಗಾರ ಪೃಥ್ವಿ ಶಾ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಆಟಗಾರ ಪೃಥ್ವಿ ಶಾ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. 7 ಇನಿಂಗ್ಸ್ ಗಳನ್ನು ಆಡಿರುವ ಪೃಥ್ವಿ ಶಾ ಕಲೆಹಾಕಿರುವುದು ಬರೋಬ್ಬರಿ 754 ರನ್ಸ್. ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 188.50 ಸರಾಸರಿ & 134.88 ಸ್ಟ್ರೈಕ್ ರೇಟ್ ಹೊಂದಿರುವ ಪೃಥ್ವಿ ಶಾ ಅವರ ಬ್ಯಾಟ್ ನಿಂದ ಬಂದ ಅತ್ಯಧಿಕ ರನ್ 227 ( ನಾಟ್ ಔಟ್ ).

13 ನೇ ಐಪಿಎಲ್ ಆವೃತ್ತಿಯಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ನಲ್ಲಿ ಇದೇ ಪೃಥ್ವಿ ಶಾ ತೀರಾ ಕಳಪೆ ಪ್ರದರ್ಶನವನ್ನು ನೀಡಿದ್ದರು. ಕಳೆದ ಐಪಿಎಲ್ ಸಂಪೂರ್ಣ ಟೂರ್ನಿಯಲ್ಲಿ ಪೃಥ್ವಿ ಶಾ ಕಲೆಹಾಕಿದ್ದು ಕೇವಲ 228 ರನ್ ಗಳನ್ನು ಮಾತ್ರ. ಹಾಗೆಯೇ ಕಳೆದ ಡಿಸೆಂಬರ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಸೇರಿ ಪೃಥ್ವಿ ಶಾ ಗಳಿಸಿದ್ದು ಕೇವಲ 4 ರನ್. ಪೃಥ್ವಿ ಶಾ ಅವರ ಈ ಕಳಪೆ ಫಾರ್ಮ್ ನಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಸಾಕಷ್ಟು ಟ್ರೋಲ್ ಗಳು ಕಂಡು ಬಂದಿದ್ದವು.

ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ಅತ್ಯದ್ಭುತ ಪ್ರದರ್ಶನ ದಿಂದ ಆ ಎಲ್ಲ ಟ್ರೋಲ್ ಗಳಿಗೆ ಉತ್ತರ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ನಾನು ಅಷ್ಟು ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ನಾನೊಬ್ಬ ವೀರರ ಹುಡುಗ, ನಾನು ಬೀದಿಯಿಂದ ಬಂದವನು ನನಗೆ ಬೌನ್ಸ್ ಬ್ಯಾಕ್ ಮಾಡಲು ಬರುತ್ತದೆ. ನನಗೆ ನನಗಿಂತ ನನ್ನ ತಂಡವೇ ಮುಖ್ಯ ಅದು ಕ್ಲಬ್ ಆದರೂ ಸರಿ ಮುಂಬೈ ಆದರೂ ಸರಿ ಅಥವಾ ಭಾರತ ತಂಡವೇ ಆದರೂ ಸರಿ ಎಂದು ಪೃಥ್ವಿ ಶಾ ಅವರು ತಮ್ಮ ಸಾಮರ್ಥ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

This News Article Is A Copy Of MYKHEL