ಪೋರ್ಜರಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಸಾಲ ; ರಿಯಲ್ ಎಸ್ಟೇಟ್ ಉದ್ಯಮಿಗೆ ಪಂಗನಾಮ ಹಾಕಿದ ಒಡಿಯೂರು ಬ್ಯಾಂಕಿನ ಅಧ್ಯಕ್ಷರ ವಿರುದ್ಧ ಎಫ್ಐಆರ್ !

06-09-22 08:08 pm       Mangalore Correspondent   ಕ್ರೈಂ

ಒಡಿಯೂರು ಗುರುದೇವ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಲಯನ್ಸ್ ಸಂಸ್ಥೆಯಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯ ಪೋಸು ಕೊಡುವ ಸುರೇಶ್ ರೈ ಎಂಬವರು ತನ್ನದೇ ಬ್ಯಾಂಕಿನಲ್ಲಿ ಪೋರ್ಜರಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಸಾಲ ಪಡೆದು ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು, ಸೆ.6: ಒಡಿಯೂರು ಗುರುದೇವ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಲಯನ್ಸ್ ಸಂಸ್ಥೆಯಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯ ಪೋಸು ಕೊಡುವ ಸುರೇಶ್ ರೈ ಎಂಬವರು ತನ್ನದೇ ಬ್ಯಾಂಕಿನಲ್ಲಿ ಪೋರ್ಜರಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಸಾಲ ಪಡೆದು ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಲಯನ್ ಸುರೇಶ್ ರೈಯನ್ನು ಬಂಧಿಸಿದ್ದಾರೆ.  

ತನಗೆ ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ಬಿಲ್ಡರ್ ಆಗಿರುವ ಸದಾನಂದ ರೈ ಕಳೆದ ಜುಲೈ 24ರಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಲ ಪಡೆದು ವಂಚಿಸಿರುವ ಬಗ್ಗೆ ಸಾಕ್ಷ್ಯ ಸಹಿತ ದೂರು ನೀಡಿದ್ದರಿಂದ ಎಫ್ಐಆರ್ ದಾಖಲಾಗಿತ್ತು. ಮೇಲ್ನೋಟಕ್ಕೆ ಪೋರ್ಜರಿ ನಡೆಸಿರುವುದು ಸಾಬೀತಾಗಿದ್ದರಿಂದ ಸುರೇಶ್ ರೈ ಅವರನ್ನು ವಿಚಾರಣೆಗೆ ಕರೆಸಿದ ಪೊಲೀಸರು ಆಗಸ್ಟ್ ಮೊದಲ ವಾರದಲ್ಲಿ ಬಂಧಿಸಿದ್ದರು. ಬಂಧನದ ಬಳಿಕ ಸುರೇಶ್ ರೈಯನ್ನು ಕೋರ್ಟಿಗೆ ಹಾಜರು ಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ತನಗೆ ಆರೋಗ್ಯದಲ್ಲಿ ತೊಂದರೆಯಿದೆ ಎಂದು ಹೇಳಿ ಸುರೇಶ್ ರೈ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಜೈಲು ವಾಸವನ್ನು ತಪ್ಪಿಸಿಕೊಂಡಿದ್ದರು. ಎಂಟು ದಿನಗಳ ಕಾಲ ವೆನ್ಲಾಕ್ ಆಸ್ಪತ್ರೆಯಲ್ಲಿದ್ದು ಬಳಿಕ ಕೋರ್ಟಿನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.   

Kerala: Co-op banks offer interest-free loan | Indian Cooperative

ಉದ್ಯಮಿ ಹೆಸರಲ್ಲೇ ಪೋರ್ಜರಿ ಮಾಡಿ ಸಾಲ

ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಆಗಿರುವ ಸದಾನಂದ ರೈ ಮತ್ತು ಒಡಿಯೂರು ಬ್ಯಾಂಕಿನ ಅಧ್ಯಕ್ಷ ಸುರೇಶ್ ರೈ ಇಬ್ಬರು ಸೇರಿಕೊಂಡು ಪಚ್ಚನಾಡಿಯಲ್ಲಿ ಒಂದು ಎಕರೆ ಜಾಗದಲ್ಲಿ ಜಂಟಿ ಸಹಭಾಗಿತ್ವದಲ್ಲಿ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. 2015ರಲ್ಲಿ ಜಾಯಿಂಟ್ ವೆಂಚರ್ ಪ್ರಕಾರ ಈ ಬಗ್ಗೆ ಒಪ್ಪಂದ ಆಗಿತ್ತು. ಇದರಂತೆ, ಬಿಲ್ಡರ್ ಸದಾನಂದ ರೈ ಮತ್ತು ಸುರೇಶ್ ರೈ ಹಣ ಹೂಡಿಕೆ ಮಾಡಿ, ಅಲ್ಲಿ ಕಟ್ಟಡ ನಿರ್ಮಿಸಬೇಕಾಗಿತ್ತು. ಎರಡು ವರ್ಷದಲ್ಲಿ ಸದಾನಂದ ರೈ 3.82 ಕೋಟಿ ರೂಪಾಯಿ ಸುರಿದು ಕಟ್ಟಡ ಕಾಮಗಾರಿ ಕೈಗೊಂಡಿದ್ದರು. ಆದರೆ ಸುರೇಶ್ ರೈ ಸದ್ರಿ ಜಾಗದಲ್ಲಿ ಕಾಮಗಾರಿ ಕೈಗೊಳ್ಳಲು ಹಣ ಹೂಡಿಕೆ ಮಾಡಿರಲಿಲ್ಲ.

In simple cases the delay in lodging the first information cannot be held  as fatal : DK Court

ಇದೇ ವೇಳೆ, ಸುರೇಶ್ ರೈ ತನ್ನ ಹೆಸರಲ್ಲಿ ರಿಜಿಸ್ಟರ್ ಆಗಿದ್ದ ಯಶ್ ವರ್ಲ್ಡ್ ಹೆಬಿಟೇಟ್ ಎಂಡ್ ಪ್ರಾಜೆಕ್ಟ್ ಕಂಪನಿ ಹೆಸರಲ್ಲಿ ಜಾಯಿಂಟ್ ವೆಂಚರ್ ಒಪ್ಪಂದ ಮಾಡಿಕೊಂಡಿದ್ದ ಜಾಗವನ್ನು ಅಡಮಾನ ಇಟ್ಟು ಒಡಿಯೂರು ಬ್ಯಾಂಕಿನಿಂದ ನಾಲ್ಕು ಕೋಟಿ ಸಾಲ ತೆಗೆದಿದ್ದರು. ಅಲ್ಲದೆ, ಸದಾನಂದ ರೈ ಹೆಸರಲ್ಲಿ ಸೇಲ್ ಡೀಡ್ ಮಾಡಿದಂತೆ ತೋರಿಸಿ, ಪೋರ್ಜರಿ ದಾಖಲೆಯನ್ನೂ ಸೃಷ್ಟಿಸಿದ್ದರು. ನಾಲ್ಕು ಕೋಟಿ ಸಾಲಕ್ಕೆ ಸದಾನಂದ ರೈ ಹೊಣೆಗಾರ ಅನ್ನುವಂತೆ ತೋರಿಸಲಾಗಿತ್ತು. 2018ರ ವೇಳೆಗೆ ಒಡಿಯೂರು ಬ್ಯಾಂಕಿನಿಂದ ಸದಾನಂದ ರೈಗೆ ನೋಟೀಸ್ ನೀಡಿದ್ದು, ಸಾಲ ತೀರಿಸುವಂತೆ ಸೂಚಿಸಲಾಗಿತ್ತು. ಸದಾನಂದ ರೈಗೆ ಅಲ್ಲಿವರೆಗೂ ಸದ್ರಿ ಜಾಗದಲ್ಲಿ ಸಾಲದ ತೆಗೆದಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಅವರಿಗೆ ತಿಳಿಯದಂತೆ ಸಾಲ ಪಡೆದಿದ್ದಲ್ಲದೆ, ಆನಂತರ ಮಂಗಳೂರಿನ ಸಿವಿಲ್ ಕೋರ್ಟಿನಲ್ಲಿ ಸಾಲ ತೀರಿಸುವಂತೆ ಸದಾನಂದ ರೈ ವಿರುದ್ಧವೇ ದಾವೆ ಹೂಡಲಾಗಿತ್ತು.

7,333 Forgery Images, Stock Photos & Vectors | Shutterstock

ರಾಜಿ ಪಂಚಾಯ್ತಿಗೆ ಒಲ್ಲದ ಸುರೇಶ್ ರೈ

ಇದರಿಂದ ಇಕ್ಕಟ್ಟಿಗೆ ಬಿದ್ದ ಸದಾನಂದ ರೈ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟಿದ್ದರು. ರಾಜಕೀಯ ಪ್ರಭಾವಿಗಳ ಮೂಲಕ ಹಲವು ಬಾರಿ ರಾಜಿ ಪಂಚಾಯ್ತಿಯೂ ನಡೆದಿತ್ತು. ಆದರೆ ಫಲಪ್ರದ ಆಗಿರಲಿಲ್ಲ. ಈ ನಡುವೆ, ಮಂಗಳೂರಿನ ಕೋರ್ಟಿನಲ್ಲಿ ಜಟಾಪಟಿ ನಡೆಯುತ್ತಿರುವಾಗಲೇ ದಾಖಲೆ ಪೋರ್ಜರಿ ಮಾಡಿ ಸಾಲ ತೆಗೆದಿರುವುದು ಕಂಡುಬಂದಿತ್ತು. ಈ ನಡುವೆ, ವಕೀಲರ ಸಲಹೆಯಂತೆ ಸದಾನಂದ ರೈ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. ಯಶ್ ವರ್ಲ್ಡ್ ಹೆಬಿಟೇಟ್ ಸಂಸ್ಥೆಯ ಅಧ್ಯಕ್ಷ ಸುರೇಶ್ ರೈ ಮತ್ತು ನಿರ್ದೇಶಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಜಯಂತ್ ಕೋಟ್ಯಾನ್, ತಾರನಾಥ ಕೊಟ್ಟಾರಿ, ವೇಣುಗೋಪಾಲ ಮಾರ್ಲ, ಪುರುಷೋತ್ತಮ ಎಚ್.ಕೆ., ರವಿಚಂದ್ರ ಅಗರಿ ಹಾಗೂ ಬ್ಯಾಂಕಿನ ಸಿಇಓ ಆಗಿದ್ದ ಉಗ್ಗಪ್ಪ ಶೆಟ್ಟಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಾಲ್ಕು ಕೋಟಿ ರೂ. ಸಾಲ ಈಗ ಬಡ್ಡಿ ಸೇರಿ ಆರು ಕೋಟಿ ಆಗಿದೆ ಎನ್ನಲಾಗುತ್ತಿದ್ದು, ಸದಾನಂದ ರೈ ಮತ್ತು ಸುರೇಶ್ ರೈ ಕುತ್ತಿಗೆ ಸುತ್ತಿಕೊಂಡಿದೆ.

Man Arrested In Delhi For Cheating Bank Through Forged Loan Documents -  Indiaahead News

ಸುರೇಶ್ ರೈ ಮಂಗಳೂರಿನಲ್ಲಿ ಮಕರ ಜ್ಯೋತಿ ಚಿಟ್ ಫಂಡ್ ಮತ್ತು ಜಯಾಂಬಿಕಾ ಚಿಟ್ ಫಂಡ್ ಕಂಪನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅಲ್ಲದೆ, ಒಡಿಯೂರು ವಿವಿಧೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರೂ ಆಗಿದ್ದಾರೆ. ಬ್ಯಾಂಕಿನಲ್ಲಿ ಅಧ್ಯಕ್ಷನಾಗಿದ್ದುಕೊಂಡು ತನ್ನದೇ ಹೆಸರಿನಲ್ಲಿರುವ ಯಶ್ ವರ್ಲ್ಡ್ ಹೆಬಿಟೇಟ್ ಕಂಪನಿ ಹೆಸರಲ್ಲಿ ನಾಲ್ಕು ಕೋಟಿ ಸಾಲ ಪಡೆದಿರುವುದು ಸೊಸೈಟಿ ಕಾನೂನು ಪ್ರಕಾರ ಅಪರಾಧವಾಗಿರುತ್ತದೆ. ಅಲ್ಲದೆ, ಈ ಸಾಲವನ್ನು ಸದಾನಂದ ರೈ ಹೆಸರಲ್ಲಿ ತೆಗೆದ ರೀತಿ ತೋರಿಸಿ ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಸುರೇಶ್ ರೈ ಬಂಧನ ಆಗುತ್ತಲೇ ಇತರ ಆರೋಪಿತರು ಮಂಗಳೂರಿನ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ ಎನ್ನೋದು ಸದ್ಯದ ಮಾಹಿತಿ.

Mangalore Odiyoor Bank Director Lion Suresh Rai arrested for cheating Mumbai based businessmen  in crores, FIR registered. Sadanand Rai a Builder had lodged cheating case against Suresh Rai in which he was arrested in August first week and then was released on bail.