ಬ್ರೇಕಿಂಗ್ ನ್ಯೂಸ್
01-08-21 01:07 pm Udupi Correspondent ಕ್ರೈಂ
ಕುಂದಾಪುರ, ಆ.1: ಫೈನಾನ್ಸಿಯರ್ ಹತ್ಯೆ ಪ್ರಕರಣದಲ್ಲಿ ಕೃತ್ಯ ನಡೆಸಿದ್ದಾನೆ ಎನ್ನಲಾದ ಫೈನಾನ್ಸ್ ಪಾಲುದಾರನನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.
ಯಡಾಡಿ ಮತ್ಯಾಡಿ ಗ್ರಾಮದ ಜಗನ್ನಾಥ ಶೆಟ್ಟಿ ಎಂಬವರ ಮಗ ಅಜೇಂದ್ರ ಶೆಟ್ಟಿ (33) ಜು.30ರ ರಾತ್ರಿ ಕೊಲೆಗೀಡಾಗಿದ್ದರು. ಕೊಲೆಯ ಬಳಿಕ ನಾಪತ್ತೆಯಾಗಿದ್ದ ಫೈನಾನ್ಸ್ ಪಾಲುದಾರಿಕೆ ಹೊಂದಿದ್ದ ಮೊಳಹಳ್ಳಿ ನಿವಾಸಿ ಅನೂಪ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದು ಉಡುಪಿಗೆ ಕರೆತಂದಿದ್ದಾರೆ.
ಇವರು ಪಾಲುದಾರಿಕೆಯಲ್ಲಿ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್‌ನಲ್ಲಿ 2017ರಿಂದ ಫೈನಾನ್ಸ್ ವ್ಯವಹಾರ ನಡೆಸಿಕೊಂಡಿದ್ದರು. ಇತ್ತೀಚೆಗೆ ಇವರ ನಡುವೆ ಹಣಕಾಸು ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.
ಮೊನ್ನೆ ರಾತ್ರಿ ಕೊಲೆಯ ಬಳಿಕ ಅನೂಪ್‌ಗೆ ಫೋನ್ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸಮೀಪದ ಅಂಗಡಿಯವರನ್ನು ವಿಚಾರಿಸಿದಾಗ ಇಬ್ಬರು ಕೂಡ ರಾತ್ರಿ 8:30ರ ವರೆಗೆ ಫೈನಾನ್ಸ್‌ನಲ್ಲಿ ಒಟ್ಟಿಗೆ ಇದ್ದರು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅನೂಪ್ ಬಗ್ಗೆ ಶಂಕೆ ವ್ಯಕ್ತಪಡಿಸಿ ಹುಡುಕಾಟ ಆರಂಭಿಸಿದ್ದರು.
ಪೈನಾನ್ಸ್ ವ್ಯವಹಾರ ಹಾಗೂ ಹಣಕಾಸು ವಿಚಾರದಲ್ಲಿ ಅಜೇಂದ್ರನೊಂದಿಗೆ ಅನೂಪ್ ತಕರಾರು ಮಾಡಿರುವ ವಿಚಾರವನ್ನು ಅಜೇಂದ್ರ ತನ್ನ ಅಣ್ಣನಲ್ಲಿ ಹೇಳಿಕೊಂಡಿದ್ದನು. ಅಲ್ಲದೇ ಅಜೇಂದ್ರ ಇತ್ತೀಚೆಗೆ ಹೊಸದಾಗಿ ಖರೀದಿಸಿದ ಕಾರಿನ ಬಗ್ಗೆ ಕೂಡ ಅನೂಪ್‌ಗೆ ಅಸಮಾಧಾನ ಇತ್ತೆನ್ನಲಾಗಿದೆ. ಇದೇ ವೈಮನಸ್ಸಿನಿಂದ ಅನೂಪ್, ಅಜೇಂದ್ರನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಕೊಲೆಯ ಬಳಿಕ ಅನೂಪ್, ಅಜೇಂದ್ರನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಅಜೇಂದ್ರ ಖರೀದಿಸಿದ್ದ ಹೊಸ ಹೊಂಡಾ ಸಿಟಿ ಬಿಳಿ ಕಾರಿನಲ್ಲೇ ಎಸ್ಕೇಪ್ ಆಗಿದ್ದ. ಈ ಬಗ್ಗೆ ಮೃತರ ಸಹೋದರ ಮಹೇಂದ್ರ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದ ತಂಡ ಶನಿವಾರ ಸಂಜೆ ಆರೋಪಿ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಬಂಧಿಸಿದೆ. ಆತನಲ್ಲಿದ್ದ ಅಜೇಂದ್ರನಿಗೆ ಸೇರಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆ ನಡೆಸಲು ಏನು ಕಾರಣವಾಗಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೋಟೇಶ್ವರ ; ಫೈನಾನ್ಸ್ ಕಚೇರಿಗೆ ನುಗ್ಗಿ ಯುವಕನ ಕಗ್ಗೊಲೆ, ಹಣಕಾಸು ದ್ವೇಷದಲ್ಲಿ ಕೃತ್ಯ
ಸ್ನೇಹಿತನಿಂದಲೇ ಕೊಲೆಯಾದ್ನಾ ಫೈನಾನ್ಸ್ ಮಾಲಕ ! ಕೊಲೆಗೈದು ಆತನ ಕಾರಿನಲ್ಲೇ ಎಸ್ಕೇಪ್ ?
In a swift action, the district police succeeded in arresting the main accused in the Kundapur Financer Ajendra Shetty (33), murder case, in Goa on July 31. Ajendra Shetty’s Finance partner Anup Shetty and his car were traced in Goa, where he was arrested and taken to Kundapur, sources said. Ajendra Shetty and his friend Anup were running a Finance business at Kalavara. On July 30 night, when Ajendra did not come home after work, his family members tried to contact him to know the reason for the delay in coming home but there was no response from him.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm