ಬ್ರೇಕಿಂಗ್ ನ್ಯೂಸ್
08-03-22 09:42 pm Mangalore Correspondent ಕ್ರೈಂ
ಮಂಗಳೂರು, ಮಾ.8: ಪಿಯುಸಿ ಓದುತ್ತಿದ್ದ ಅಪ್ರಾಪ್ತ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
17 ವರ್ಷದ ವಿದ್ಯಾರ್ಥಿನಿ ನೀಡಿದ್ದ ದೂರಿನಂತೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಮತ್ತಿತರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪಿಂಪ್ ಆಗಿದ್ದಲ್ಲದೆ, ಅತ್ತಾವರದ ತನ್ನದೇ ಅಪಾರ್ಟ್ಮೆಂಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಮೀನಾ ಎಂಬಾಕೆಯ ಹೈಟೆಕ್ ಜಾಲ ಹೊರಬಿದ್ದಿತ್ತು. ಬಳಿಕ ಪೊಲೀಸರು ಪಿಂಪ್ ಸೇರಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿಗಳನ್ನು ಕಳೆದ ಫೆಬ್ರವರಿ ಮೊದಲ ವಾರದಲ್ಲಿ ಬಂಧಿಸಿದ್ದರು.
ಇದೀಗ ಮಹಿಳಾ ಠಾಣೆಯಲ್ಲಿ ಲೈಂಗಿಕ ಶೋಷಣೆಗೊಳಗಾದ ಇನ್ನೊಬ್ಬ ಪಿಯುಸಿ ಹುಡುಗಿಯ ಹೇಳಿಕೆ ಆಧರಿಸಿ, ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಮತ್ತೆ ನಾಲ್ವರು ಮುದುಕರನ್ನು ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ಅಡ್ಡೆಯಲ್ಲಿ ಹರೆಯದ ಅಪ್ರಾಪ್ತ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಮತ್ತೆ ನಾಲ್ವರು ಅರೆಸ್ಟ್ ಆಗಿದ್ದಾರೆ. ಮಂಗಳೂರಿನ ವ್ಯಾಸನಗರದ ರಶೀದ್ ಸಾಹೇಬ್ (73), ಮಲ್ಲಿಕಟ್ಟೆ ಕದ್ರಿ ಗೇಟ್ ನಿವಾಸಿ ಮೊಹಮ್ಮದ್ ಆಲಿ(74), ಕುಲಶೇಖರದ ಗ್ರೆಗರಿ ಲಿಯನಾರ್ಡೋ ಸಿಕ್ವೇರಾ (63), ಉಪ್ಪಳ ಗೇಟ್ ನಿವಾಸಿ ಇಸ್ಮಾಯಿಲ್ (41) ಬಂಧಿತರು.
ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಯುವತಿ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಶಮೀನಾ ನಂದಿಗುಡ್ಡೆ , ಐಸಮ್ಮ ಅಡ್ಯಾರಪದವು, ರಹಮತ್ ತಲಪಾಡಿ, ಅಬೂಬಕರ್ ಸಿದ್ದಿಕ್ , ಸನಾ ಕಣ್ಣೂರು ಅವರನ್ನು ಯುವತಿಯನ್ನು ಗಿರಾಕಿಗಳಿಗೆ ಒಪ್ಪಿಸಿ, ಪಿಂಪ್ ಆಗಿ ವರ್ತಿಸುತ್ತಿದ್ದ ಆರೋಪದಲ್ಲಿ ಆರೋಪಿಗಳಾಗಿ ಸೇರಿಸಲಾಗಿದೆ. ಫೆ.7 ರಂದು ಪಿಂಪ್ ಗಳು ಸೇರಿ ಹತ್ತು ಮಂದಿಯನ್ನು ಬಂಧಿಸಲಾಗಿತ್ತು. ಈಗ ಒಟ್ಟು ಬಂಧಿತರ ಸಂಖ್ಯೆ 14 ಕ್ಕೇರಿದೆ.
ಹದಿಹರೆಯದ ಪಿಯುಸಿ ಓದುವ ಹುಡುಗಿಯರನ್ನು ಆಮಿಷವೊಡ್ಡಿ ಮತ್ತು ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ಮಾಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಈ ಜಾಲದಲ್ಲಿ ಮಂಗಳೂರಿನ ಕಾಲೇಜು ಓದುವ ಹಲವರಿದ್ದಾರೆ. ದೂರು ಕೊಡಲು ಮುಂದೆ ಬಂದವರ ಹೇಳಿಕೆ ಆಧರಿಸಿ ಸಿಸಿಬಿ ಪೊಲೀಸರು ಒಬ್ಬೊಬ್ಬರನ್ನೇ ಬಂಧಿಸುತ್ತಿದ್ದಾರೆ. ಪ್ರಕರಣದಲ್ಲಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಈಗ ಸಿಕ್ಕಿಬಿದ್ದಿರುವ ನಾಲ್ವರ ಪೈಕಿ ಮೂವರು ಮುದುಕರಾಗಿದ್ದು ಕಾಸು ಕೊಟ್ಟು ಸುಖ ಪಡೆಯಲು ಹೋಗಿ ಈಗ ಜೈಲು ಸೇರಿದ್ದಾರೆ.
The Pandeshwar Women’s police have arrested four more persons on March 7, in connection with the prostitution racket in an Apartment in Attavar. The police have earlier arrested ten persons including three women in this case. On February 3, A minor who was the victim of sexual abuse, unable to bear the torture, met her college principal and shared her plight. Later, on February 3, the victim filed a complaint at the Pandeshwar Women’s police station. Based on her complaint the police raided the apartment and arrested three women and a man. On February 7, the Pandeshwar police again arrested seven more persons in this case.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm