ಬ್ರೇಕಿಂಗ್ ನ್ಯೂಸ್
25-04-22 06:09 pm Mangalore Correspondent ಕ್ರೈಂ
ಮಂಗಳೂರು, ಎ.25: ಪಿಯುಸಿ ಹುಡುಗಿಯರನ್ನು ಖೆಡ್ಡಾಕ್ಕೆ ಬೀಳಿಸಿ, ವೇಶ್ಯಾವೃತ್ತಿಗೆ ತಳ್ಳುತ್ತಿದ್ದ ಜನಸಾಮಾನ್ಯರು ಬೆಚ್ಚಿಬೀಳುವ ರೀತಿಯ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದರು. ಎರಡು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಒಂಬತ್ತು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿದ್ದು ಈಗ ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ.
ಪ್ರತೀ ಎಫ್ಐಆರ್ ನಲ್ಲಿಯೂ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಲು ರೆಡಿ ಮಾಡಲಾಗುತ್ತಿದೆ. ಪ್ರತೀ ಚಾರ್ಜ್ ಶೀಟ್ ನಲ್ಲಿಯೂ ಆಯಾ ಪ್ರಕರಣ ಸಂಬಂಧಿಸಿ ಸಮಗ್ರ ದಾಖಲೆಗಳನ್ನೂ ಜೊತೆಗಿರಿಸಲಾಗುತ್ತದೆ. ತಾಂತ್ರಿಕ ಸಾಕ್ಷ್ಯಗಳು, ಸಂತ್ರಸ್ತರ ಹೇಳಿಕೆಗಳು, ಪ್ರಕರಣದ ಸಾಕ್ಷಿಗಳು ಹೀಗೆ ಹಲವು ರೂಪದ ದಾಖಲೆಗಳು ಜೊತೆಗಿರಲಿದ್ದು, ಪ್ರತೀ ಎಫ್ಐಆರ್ ನಲ್ಲಿ ಇನ್ನೂರು ಪುಟಗಳ ದಾಖಲೆಯೇ ಇರಲಿದೆ. ಅಂದಾಜಿನಂತೆ ಒಂದು ಎಫ್ಐಆರ್ ಅಡಿ 1200 ಪುಟಗಳ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲು ರೆಡಿ ಮಾಡಲಾಗುತ್ತಿದೆ.

ಒಂಬತ್ತು ಪ್ರಕರಣಗಳಲ್ಲಿ ತಲಾ 1200ಕ್ಕೂ ಹೆಚ್ಚು ಪುಟಗಳ ಎಫ್ಐಆರ್ ಸಲ್ಲಿಕೆಯಾದಲ್ಲಿ ಒಟ್ಟು ಆರೋಪಪಟ್ಟಿಯೇ ಹತ್ತು ಸಾವಿರ ಪುಟಗಳು ಮೀರಲಿದೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಬಂಧಿಸಲಾಗಿದ್ದು ಜೈಲಿಗೆ ತಳ್ಳಲಾಗಿದೆ. ಇದರಲ್ಲಿ ವ್ಯಾಪಾರಿಗಳು, ವಿದೇಶದಲ್ಲಿದ್ದವರು, ವಿವಿಧ ವೃತ್ತಿಗಳಲ್ಲಿದ್ದವರು ಸೇರಿದ್ದಾರೆ. ಇನ್ನೊಬ್ಬ ವಿದೇಶದಲ್ಲಿರುವ ವ್ಯಕ್ತಿಯನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಆತ ದೇಶಕ್ಕೆ ಮರಳಿದ ಕೂಡಲೇ ಬಂಧಿಸಲು ಬೇಕಾದ ಕ್ರಮ ಜರುಗಿಸಲಾಗಿದೆ. ಅದಕ್ಕೂ ಮೊದಲೇ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ. ಒಂದು ಪ್ರಕರಣಕ್ಕೆ ಸಂಬಂಧಿಸಿ ಹತ್ತು ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಕೆಯಾದರೆ, ಮಂಗಳೂರಿನ ಮಟ್ಟಿಗೆ ಹೊಸ ದಾಖಲೆಯಾಗಲಿದೆ ಎನ್ನಲಾಗುತ್ತಿದೆ.

ಫೆಬ್ರವರಿ ಮೊದಲ ವಾರದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ಮೊದಲಿಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನು ಸಿಸಿಬಿಗೆ ವಹಿಸಿ ಸಮಗ್ರ ತನಿಖೆಗೆ ಒಳಪಡಿಸಲಾಗಿತ್ತು. ನಾಲ್ಕು ಅಪ್ರಾಪ್ತ ಯುವತಿಯರನ್ನು ದಂಧೆಗೆ ಬಳಸಿದ್ದು ಪತ್ತೆ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಅತ್ತಾವರದ ನಂದಿಗುಡ್ಡೆಯ ಫ್ಲಾಟ್ ಒಂದರಲ್ಲಿ ಮೊದಲ ಬಾರಿಗೆ ಹಣಕ್ಕಾಗಿ ಕಾಲೇಜು ಯುವತಿಯರನ್ನು ವೇಶ್ಯಾ ದಂಧೆಗೆ ನೂಕಿದ್ದನ್ನು ಪತ್ತೆ ಮಾಡಲಾಗಿತ್ತು. ಆನಂತರ ತನಿಖೆಯ ಸಂದರ್ಭದಲ್ಲಿ ಮಂಗಳೂರು ನಗರದ ಬೇರೆ ಬೇರೆ ಭಾಗದಲ್ಲಿ ಹಲವು ಕಾಲೇಜು ಯುವತಿಯರನ್ನು ಮುಂದಿಟ್ಟು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು.
College girls used for Prostitution at Attavar in Mangalore, 10 thousand page charge sheet to be submitted including FIR on nine persons. The Pandeshwar Women’s police have arrested four more persons on March 7, in connection with the prostitution racket in an Apartment in Attavar.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm