ಐಸಿಸ್ ಉಗ್ರ ಶಾರೀಕ್ ಒಂಟಿ ತೋಳ, ಒಬ್ಬಂಟಿಯಾಗಿಯೇ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಹಾಕಿದ್ದ ; ಗುಪ್ತಚರ ಸಂಸ್ಥೆಗಳು

22-11-22 09:31 pm       Bangalore Correspondent   ಕರ್ನಾಟಕ

ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಿಕ್ಕಿಬಿದ್ದಿರುವ ಐಸಿಸ್ ಉಗ್ರ ಮೊಹಮ್ಮದ್ ಶಾರೀಕ್ ಒಬ್ಬಂಟಿಯಾಗಿದ್ದ. ಒಂಟಿಯಾಗಿಯೇ ಮಂಗಳೂರಿನಲ್ಲಿ ಸರಣಿ ಸ್ಫೋಟಕ್ಕೆ ಸಂಚು ಹೂಡಿದ್ದ.

ಬೆಂಗಳೂರು, ನ.22: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಿಕ್ಕಿಬಿದ್ದಿರುವ ಐಸಿಸ್ ಉಗ್ರ ಮೊಹಮ್ಮದ್ ಶಾರೀಕ್ ಒಬ್ಬಂಟಿಯಾಗಿದ್ದ. ಒಂಟಿಯಾಗಿಯೇ ಮಂಗಳೂರಿನಲ್ಲಿ ಸರಣಿ ಸ್ಫೋಟಕ್ಕೆ ಸಂಚು ಹೂಡಿದ್ದ. ಆತ ಇದಕ್ಕಾಗಿ ಯಾವುದೇ ಗ್ಯಾಂಗ್ ಮಾಡಿಕೊಂಡಿರಲಿಲ್ಲ. ಯಾರದ್ದೇ ಸಹಾಯವನ್ನೂ ಪಡೆದಿರಲಿಲ್ಲ ಎಂದು ಗುಪ್ತಚರ ಮೂಲಗಳು ಹೇಳುತ್ತಿವೆ.

ಹೀಗಾಗಿ ಮೊಹಮ್ಮದ್ ಶಾರೀಕ್ ಜಮ್ಮು ಕಾಶ್ಮೀರದ ಉಗ್ರರ ರೀತಿ ಒಂಟಿ ತೋಳ ಆಗಿದ್ದ ನ್ಯೂಸ್ 18 ವೆಬ್ ಕೇಂದ್ರ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಆತ ಸುಸೈಡ್ ಬಾಂಬರ್ ಆಗಿರಲಿಲ್ಲ. ಬದಲಿಗೆ, ಮಂಗಳೂರು ಸೇರಿ ಹಲವು ಕಡೆ ಬಾಂಬ್ ಇಟ್ಟು ಸ್ಫೋಟಿಸಲು ಪ್ಲಾನ್ ಹಾಕಿದ್ದ ಎನ್ನುವ ಅಂದಾಜನ್ನು ಗುಪ್ತಚರ ಸಂಸ್ಥೆಗಳು ಮಾಡಿವೆ. ಅಲ್ಲದೆ, ಶಾರೀಕ್ ಇದಕ್ಕಾಗಿ ಯಾವುದೇ ತಂಡವನ್ನು ಕಟ್ಟಿಕೊಂಡಿರಲಿಲ್ಲ ಎಂದು ಹೇಳಿವೆ.

ಶಾರೀಕ್ ತನ್ನ ಕೃತ್ಯದ ಬಗ್ಗೆ ಯಾರ ಜೊತೆಗೂ ಹೇಳಿಕೊಂಡಿರಲಿಲ್ಲ. ಬಾಂಬ್ ತಯಾರಿಗೆ ಬಳಸಿದ ಸಾಮಗ್ರಿಗಳು ಸೇರಿದಂತೆ ಎಲ್ಲವನ್ನೂ ಆತನೇ ರೆಡಿ ಮಾಡಿಕೊಂಡಿದ್ದ. ಆತನ ಫೋನ್ ಕರೆ, ಇನ್ನಿತರ ದಾಖಲೆಗಳನ್ನು ಕಲೆ ಹಾಕುತ್ತಿದ್ದೇವೆ. ಆತನ ಜೊತೆಗೆ ಕ್ಲೋಸ್ ಇದ್ದವರನ್ನೂ ವಿಚಾರಣೆ ಮಾಡುತ್ತಿದ್ದೇವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.

Mangaluru auto rickshaw blast: Bomber identified as Mohammed Shariq, a  terror accused on the run - The Hindu

Mangaluru Auto-Rickshaw Blast an 'Act of Terror,' Says Karnataka Police

Mangalore: Mysterious blast of an auto running near Kankanadi: Suspicion  raised by passenger's statement – Mangalore running auto blast NIA Team to  visit spot Pipa News | PiPa News

ಐಸಿಸ್ ಉಗ್ರವಾದಿ ಸಂಘಟನೆಯಿಂದ ಪ್ರೇರಿತನಾಗಿದ್ದ ಶಾರೀಕ್, ಒಬ್ಬಂಟಿಯಾಗಿಯೇ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದ ಎನ್ನುವ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ. ಇದೇ ಆಧಾರದಲ್ಲಿ ಮಂಗಳೂರಿಗೆ ಬಂದಿದ್ದ ಎಡಿಜಿಪಿ ಅಲೋಕ್ ಕುಮಾರ್, ಆತನನ್ನು ಬದುಕಿಸುವುದೇ ನಮ್ಮ ಮೊದಲ ಆದ್ಯತೆ. ಆನಂತರ, ಆತನನ್ನು ಪ್ರಶ್ನೆ ಮಾಡಲಾಗುವುದು ಎಂದು ಹೇಳಿದ್ದರು. 

Mohammed Shariq, 24, the passenger and prime suspect in Saturday’s autorickshaw blast in Mangaluru, is a lone wolf, top intelligence sources told CNN-News18. The suspect has suffered 45% burns. He probably wanted to attack all places on his own and was not a suicide bomber, they said. “Shariq was not in touch with anyone and had no gang. The theory on his associates has been proved wrong,” they said.