ಬ್ರೇಕಿಂಗ್ ನ್ಯೂಸ್
08-03-22 11:08 pm sources: ManoharV Shetty vijayakarnataka ಡಾಕ್ಟರ್ಸ್ ನೋಟ್
ನಮಗೆ ಆರೋಗ್ಯ ಒಂದು ಸರಿ ಇದ್ದರೆ ಎಲ್ಲವೂ ಸರಿ ಇದ್ದಂತೆ! ಕೈತುಂಬಾ ಹಣವಿದ್ದರೂ ಆರೋಗ್ಯ ಸರಿಯಿಲ್ಲ ಅಂದ ಮೇಲೆ, ಏನು ಪ್ರಯೋಜನ ಅಲ್ಲವೇ? ಅಂದರೆ ಸಕಲ ಭಾಗ್ಯಕ್ಕೂ ಆರೋಗ್ಯವೇ ದಾರಿದೀಪ. ಆದರೆ ಇಂದಿನ ಜಂಜಾಟ ಹಾಗೂ ಒತ್ತಡದ ಜೀವನದಲ್ಲಿ ಆರೋಗ್ಯ ಸಮಸ್ಯೆಗಳು ಮನುಷ್ಯನನ್ನು ಕಿತ್ತು ತಿನ್ನುತ್ತಿವೆ!
ಉದಾಹರಣೆಗೆ ನೋಡುವುದಾದರೆ, ಇಂದಿನ ದಿನಗಳ ಈ ಒತ್ತಡದ ಜೀವನದಿಂದಾಗಿ ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚಾಗಿ, ರಕ್ತದೊತ್ತಡದಲ್ಲಿ ಏರುಪೇರಾಗಿ ಹೃದಯದ ಸಮಸ್ಯೆಗಳು ಕಂಡುಬರಲು ಶುರುವಾಗಿದೆ. ಇಷ್ಟು ಸಾಲದು ಎನ್ನುವಂತೆ ದಿನನಿತ್ಯ ಕುಳಿತು ಮಾಡುವ ಕೆಲಸಗಳಿಂದಾಗಿ ಬೆನ್ನು ನೋವು, ಭುಜಗಳ ನೋವು, ಬೊಜ್ಜಿನ ಸಮಸ್ಯೆಗಳಂತಹ ಅನೇಕ ಅನಾರೋಗ್ಯಕರ ಕಾಯಿಲೆಗಳು ಮನುಷ್ಯನ ಬೆನ್ನು ಹತ್ತಿದೆ! ಹೀಗಾಗಿ ಸಾಮಾನ್ಯವಾಗಿ ಎಲ್ಲಾ ಆರೋಗ್ಯ ಸಮಸ್ಯೆಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದು ಕೊಂಡಿರುತ್ತವೆ ಎಂಬುದಂತೂ ಸತ್ಯ. ಬನ್ನಿ ಇಂದಿನ ಲೇಖನದಲ್ಲಿ ಕೆಲವೊಂದು ಕಾಯಿಲೆಗಳನ್ನು ನಿವಾರಿಸುವ ನೈಸರ್ಗಿಕ ಪಾನೀಯಗಳ ಬಗ್ಗೆ ನೋಡೋಣ...
ಹೈ ಬಿಪಿ ಅಥವಾ ರಕ್ತದೊತ್ತಡದ ಸಮಸ್ಯೆ ಇರುವವರಿಗೆ
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರಪದ್ಧತಿಗಳಿಂದಾಗಿ ಇಂದು ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಈ ಸಮಸ್ಯೆ ಎಷ್ಟು ಅಪಾಯಕಾರಿ ಎಂದರೆ ಇದನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ,
ಅದರಿಂದ ಹೃದಯದ ಕಾಯಿಲೆ ಬರುವ ಅಪಾಯ ಜಾಸ್ತಿ ಇರುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ಸಾಗಿಸಿದರೆ ಆಗ ಖಂಡಿತವಾಗಿಯೂ ಆರೋಗ್ಯ ಕಾಪಾಡಿ ಕೊಳ್ಳಬಹುದು.
ಹೀಗೆ ಮಾಡಿ
ರಾತ್ರಿ ಮಲಗುವ ಮುನ್ನ ಚಿಯಾ ಬೀಜವನ್ನು ನೀರಿನಲ್ಲಿ ನೆನೆಸಲು ಹಾಕಿ.
ಇನ್ನು ಮುಂಜಾನೆ ನೀರಿನಿಂದ ಬೀಜವನ್ನು ತೆಗೆಯಿರಿ.
ಆಮೇಲೆ ಈ ನೀರನ್ನು ಬೀಜಗಳು ಇಲ್ಲದೆ ಕುಡಿಯಿರಿ.
ಉತ್ತಮ ಫಲಿತಾಂಶಕ್ಕಾಗಿ ಇದನ್ನು ನೀವು ಒಂದು ತಿಂಗಳ ಕಾಲ ಮಾಡಿದರೆ ಅದರಿಂದ ಒಳ್ಳೆಯ ಫಲಿತಾಂಶ ಸಿಗುವುದು ಮತ್ತು ರಕ್ತದೊತ್ತಡ ಕೂಡ ಕಡಿಮೆ ಆಗುವುದು.
ಹೃದಯದ ಆರೋಗ್ಯಕ್ಕೆ ದಾಳಿಂಬೆ ಜ್ಯೂಸ್
ಆರೋಗ್ಯಕರವಾದ ಜೀವನಶೈಲಿ ಹಾಗೂ ಒಳ್ಳೆಯ ಆಹಾರಗಳನ್ನು ಮೈಗೂಡಿಸಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗಾಗಿ ಆರೋಗ್ಯಕಾರಿ ಆಹಾರ ಕ್ರಮವು ಅತೀ ಅಗತ್ಯವಾಗಿ ಇರುವುದು. ಸಾಧ್ಯವಾದಷ್ಟು ತಾಜಾ ಹಸಿರೆಲೆ ತರಕಾರಿಗಳು ಮತ್ತು ಹಣ್ಣುಗಳಿಂದ ಮಾಡಿರುವಂತಹ ಜ್ಯೂಸ್ ಹೃದಯದ ಆರೋಗ್ಯ ಸುಧಾರಣೆ ಮಾಡುವುದು.
ಅದರಲ್ಲೂ ನಿಯಮಿತವಾಗಿ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ, ಹೃದಯದ ಭಾಗಗಳಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆದು, ರಕ್ತನಾಳಗಳಲ್ಲಿ ಬ್ಲಾಕ್ ಆಗಿರುವಂತಹ ಸಮಸ್ಯೆಯು ಕಡಿಮೆ ಆಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ವಿಶೇಷವಾಗಿ ಇದು ಕೆಟ್ಟ ಕೊಲೆಸ್ಟ್ರಾಲ್‌ನ್ನು ರಕ್ತನಾಳದಿಂದ ತೆಗೆದು ಹಾಕುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು.
ತರಕಾರಿಗಳ ಜ್ಯೂಸ್
ಇತ್ತೀಚಿನ ದಿನಗಳಲ್ಲಿ ಒತ್ತಡದಿಂದ ಕೂಡಿದ ಜೀವನಶೈಲಿ, ಅನಾರೋಗ್ಯಕರ ಆಹಾರಗಳ ಸೇವನೆಯಿಂದಾಗಿ ಅನೇಕ ರೀತಿಯ ದೀರ್ಘಕಾಲಿತ ಕಾಯಿಲೆಗಳು ಇಂದು ಮನುಷ್ಯನನ್ನು ಕಾಡುತ್ತಿದೆ ಇದರಲ್ಲಿ ಒಂದು ಮಧುಮೇಹ!
ಇಂದಿನ ದಿನಗಳಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಒಂದು ಸಾಮಾನ್ಯ ಕಾಯಿಲೆ ಎನ್ನುವಂತಾಗಿದೆ. ಯಾಕೆಂದರೆ ಪ್ರತಿಯೊಂದು ಮನೆಯಲ್ಲೂ ಒಬ್ಬ ಮಧುಮೇಹಿ ಇದ್ದೇ ಇರುತ್ತಾನೆ ಎನ್ನುವ ಕಾಲಘಟ್ಟಕ್ಕೆ ನಾವು ಬಂದು ತಲುಪಿದ್ದೇವೆ! ಇತ್ತೀಚಿನ ಅಧ್ಯಾಯಾನದ ಪ್ರಕಾರ ಭಾರತದಲ್ಲಿ ಕೂಡ ಮಧುಮೇಹಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲೇ ಇದೆ. ಇದು ನಮಗೆಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ.
ಕೆಲವೊಂದು ಹಣ್ಣಿನ ಜ್ಯೂಸ್‌ಗಳಲ್ಲಿರುವ ಅತಿಯಾದ ಸಕ್ಕರೆ ಅಂಶವು ಸಕ್ಕರೆ ಕಾಯಿಲೆ ಇದ್ದವರಿಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಹಣ್ಣಿನ ಜ್ಯೂಸ್‌ಗಳಿಗಿಂತಲೂ ವಿವಿಧ ಬಗೆಯ ತರಕಾರಿಗಳ ಮಿಶ್ರಣದ ಜ್ಯೂಸ್ ಕುಡಿಯುವುದರಿಂದ ಸಕ್ಕರೆಕಾಯಿಲೆಯನ್ನ ತಕ್ಕಮಟ್ಟಿಗಾದರೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದರಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇರುವುದು. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ತಾಜಾ ಸೀಬೆ ಹಣ್ಣಿನ ಜ್ಯೂಸ್
These Natural Juices Will Help You To Control Diabetes High Bp And Heart Diseses.
14-11-24 10:08 pm
Bangalore Correspondent
Cm Siddaramaiah, Mysuru, BJP; ಬಿಜೆಪಿಗೆ ಆಪರೇಶನ...
14-11-24 02:09 pm
Shivamogga News, Three youths drowned; ಶಿವಮೊಗ...
14-11-24 01:55 pm
MLA Satish Sail, court stay, Jail: ಬೇಲೆಕೇರಿ ಬ...
13-11-24 07:07 pm
Marakumbi atrocity case, Bail: ಮರಕುಂಬಿ ದಲಿತ ದ...
13-11-24 06:45 pm
14-11-24 11:11 pm
HK News Desk
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
ಬಾಂಗ್ಲಾ ಅಲ್ ಖೈದಾ ಟೆರರ್ ಫಂಡಿಂಗ್ ; ಕರ್ನಾಟಕ, ಬಿ...
12-11-24 12:35 pm
ಬಾಬಾ ಸಿದ್ದಿಕಿಯನ್ನು ಕೊಲೆಗೈದು ತಲೆಮರೆಸಿದ್ದ ಬಿಷ್ಣ...
11-11-24 05:19 pm
15-11-24 01:47 pm
Mangalore Correspondent
Waqf row, Mangalore, CM Siddaramaiah; ವಕ್ಫ್ ಆ...
14-11-24 10:45 pm
Mangalore Accident, Thokottu, UT Khader: ತೊಕ್...
14-11-24 07:14 pm
Kota srinivas poojary, Sakaleshpura Subrahman...
14-11-24 02:48 pm
Mangalore Mulki Murder, Karthik bhat; ಪಕ್ಷಿಕೆ...
13-11-24 11:19 pm
14-11-24 04:32 pm
Bangalore Correspondent
Mangalore crime, Mulki case: ಪಕ್ಷಿಕೆರೆ ದುರಂತ...
12-11-24 07:02 pm
Mangalore crime, Bajarang Dal, Ullal News: ಉಳ...
12-11-24 11:41 am
Udupi police, lock up death, Crime: ಬ್ರಹ್ಮಾವರ...
11-11-24 12:16 pm
Mangalore crime, Bengare, Assult: ಹುಡುಗಿ ನೋಡ...
10-11-24 10:53 pm