ಬ್ರೇಕಿಂಗ್ ನ್ಯೂಸ್
29-11-26 04:34 pm HK News Staffer ಕರಾವಳಿ
ಮಂಗಳೂರು, ನ.29: ಮಹಿಳಾ ಮೀಸಲಾತಿ ತರುವುದಕ್ಕೆ ನಮ್ಮ ಯಾವ ವಿರೋಧವೂ ಇಲ್ಲ. 2009ರಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯಸಭೆಯಲ್ಲಿ ನಾವೇ ಪಾಸ್ ಮಾಡಿದ್ದೆವು. ಆದರೆ ಲೋಕಸಭೆಯಲ್ಲಿ ಪಾಸ್ ಮಾಡಲು ಸಾಧ್ಯ ಆಗಿರಲಿಲ್ಲ. ಈಗಲೂ ಮಹಿಳಾ ಮೀಸಲು ತರುವುದನ್ನು ಮಾಡಬಹುದು. ಅದಕ್ಕಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ, 850 ಲೋಕಸಭೆ ಕ್ಷೇತ್ರ ಮಾಡಬೇಕಾಗಿಲ್ಲ. ಡಿ ಲಿಮಿಟೇಶನ್ ಪ್ರಕ್ರಿಯೆ ಸಂವಿಧಾನ ಪ್ರಕಾರ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ವಿರೋಧ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಜನಸಂಖ್ಯೆ ಆಧರಿಸಿ ಏಕಾಏಕಿ 50 ಶೇ. ಸ್ಥಾನಗಳನ್ನು ಹೆಚ್ಚಿಸುತ್ತೇವೆ ಎನ್ನಲು ಅದು ವ್ಯಾಪಾರ ಅಲ್ಲ. ದಕ್ಷಿಣ ಭಾರತದಲ್ಲಿ ಜನಸಂಖ್ಯಾ ನೀತಿ ಅಳವಡಿಸಿದ್ದರಿಂದ ಜನಸಂಖ್ಯೆ ಬೆಳೆದಿಲ್ಲ. ಉತ್ತರ ಭಾರತದಲ್ಲಿ ಜನಸಂಖ್ಯೆ ಬೇಕಾಬಿಟ್ಟಿ ಹೆಚ್ಚಳ ಆಗಿದೆ. ಈಗ ಜನರ ಸಂಖ್ಯೆ ಆಧರಿಸಿ ಪ್ರಕ್ರಿಯೆ ಮಾಡಿದರೆ, ಅದರಿಂದ ದಕ್ಷಿಣ ರಾಜ್ಯಗಳಿಗೆ ನಷ್ಟವಾಗುತ್ತದೆ. ಈ ಹಿಂದೆ ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಅಲ್ಪಸಂಖ್ಯಾತರಿಗೆ ಅವಕಾಶ ಇಲ್ಲದಂತೆ ಮಾಡಿದ್ದಾರೆ. ಆಮೂಲಕ ಅಲ್ಲಿ ಬಿಜೆಪಿ ಗೆಲ್ಲಿಸುತ್ತಿದ್ದಾರೆ. ಅವರಿಗೆ ಅನುಕೂಲ ಆಗುವ ರೀತಿ ಕ್ಷೇತ್ರ ಪುನರ್ ವಿಂಗಡಣೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಮತ್ತು ಇತರ ಸ್ವತಂತ್ರ ಸಂಸ್ಥೆಗಳು ಅವರ ಕೈಯಲ್ಲೆ ಇರುವುದರಿಂದ ಮುಂದಿನ ಚುನಾವಣೆ ಗೆಲ್ಲುವುದಕ್ಕಾಗಿ ಈ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ನಿಮ್ಮದೇ ಮಿತ್ರಪಕ್ಷ ಡಿಎಂಕೆ, ಈ ವಿಚಾರದಲ್ಲಿ ಬಿಜೆಪಿ ಬೆಂಬಲಿಸಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ವಿರೋಧ ಪಕ್ಷಗಳನ್ನು ಐಟಿ, ಇಡಿ ಮುಂದಿಟ್ಟು ಬೆದರಿಸಿ ತಮ್ಮ ತೆಕ್ಕೆಗೆ ಹಾಕಿಸುವುದು ಇವರ ಛಾಳಿ. ಕೆಲವು ಪಕ್ಷಗಳನ್ನು ಮುರಿದು ಕೆಲವರನ್ನು ಖರೀದಿಸುತ್ತಿದ್ದಾರೆ. ಅವರ ಪಕ್ಷದ ನಿಲುವು ಹೇಳಲು ಅವರಿಗೆ ಸ್ವಾತಂತ್ರ್ಯ ಇದೆ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ತನ್ನ ನಿಲುವು ಹೇಳಿದೆ. 2027ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲಿ. 2011ರ ಗಣತಿಯಾಗಿ 15 ವರ್ಷಗಳಾಗಿದ್ದು ಅದರ ಮೇಲೆ ಕ್ಷೇತ್ರ ವಿಂಗಡಣೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿ ಕಳೆದ ಬಾರಿ 220ಕ್ಕೆ ಕುಸಿದಿತ್ತು. ಮುಂದಿನ ಸಲ ನೂರಕ್ಕೆ ಕುಸಿಯುವ ಭಯದಲ್ಲಿ ಡಿ ಲಿಮಿಟೇಶನ್ ಕೆಲಸಕ್ಕೆ ಮುಂದಾಗಿದ್ದಾರೆ. ಅದರ ಮೂಲಕ ಗೆಲುವು ದಕ್ಕಿಸಿಕೊಳ್ಳುವ ಹುನ್ನಾರ ಇದೆ. ಒಟ್ಟು ಪ್ರಕ್ರಿಯೆ ಸಂವಿಧಾನ ವಿರುದ್ಧವಾಗಿ ನಡೆಸುತ್ತಿದ್ದಾರೆ. ಕ್ರಿಕೆಟ್ ಮ್ಯಾಚ್ ಗೆಲ್ಲಲು ಅವರದೇ ವ್ಯಕ್ತಿಯನ್ನು ಅಂಪೈರ್ ಮಾಡುತ್ತಾರೆ. ಆಯೋಗ ಹೆಸರಿನಲ್ಲಿ ತಮ್ಮದೇ ತಂಡ ಮಾಡುತ್ತಾರೆ ಎಂದು ದೂರಿದರು.
28-11-26 09:30 pm
HK News Staffer
ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಕಾಣಿಕೆ ;...
26-11-26 08:34 pm
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
29-11-26 04:36 pm
HK News Staffer
ಕ್ಷೇತ್ರ ಪುನರ್ ವಿಂಗಡಣೆಗೆ ಕೇಂದ್ರ ಸಚಿವ ಸಂಪುಟ ಒಪ್...
28-11-26 04:08 pm
ಇಸ್ರೇಲ್ ನಲ್ಲಿ ಮಂಗಳೂರಿನ ಯುವಕ ನಿಗೂಢ ಸಾವು ; ಕೊಲೆ...
25-11-26 11:53 am
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
29-11-26 04:34 pm
HK News Staffer
ನ.30ರಂದು ಅಲೋಶಿಯಸ್ ಕಾಲೇಜು ಆವರಣದಲ್ಲಿ ಬೃಹತ್ ಉದ್ಯ...
29-11-26 04:33 pm
ಸಂವಿಧಾನ ಕರಡಿನ ಮೂಲಕರ್ತೃ ಮಂಗಳೂರಿನ ನರಸಿಂಗ ರಾವ್...
28-11-26 09:08 pm
ಸಂಕ್ರಾಂತಿ ವೇಳೆಗೆ ಕೆಐಒಸಿಎಲ್ ಸಮಸ್ಯೆಗೆ ಪರಿಹಾರ ;...
28-11-26 08:35 pm
ಶಾಶ್ವತ ವಿಳಾಸ ಇಲ್ಲದೆ ಸಂಚರಿಸುತ್ತಲೇ ಇದೆ ಮಂಗಳೂರು...
28-11-26 08:31 pm
28-11-26 02:42 pm
HK News Staffer
ವಿಟ್ಲದಲ್ಲಿ ಪತ್ನಿಯನ್ನು ಹತ್ಯೆಗೈದು ಹೃದಯಾಘಾತದ ಕತೆ...
27-11-26 03:14 pm
ಗೂಗಲ್ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದ...
26-11-26 08:35 pm
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm