ಬ್ರೇಕಿಂಗ್ ನ್ಯೂಸ್
28-11-26 08:31 pm HK News Staffer ಕರಾವಳಿ
ಉಳ್ಳಾಲ, ನ.27: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಗೆ ಶಾಶ್ವತ ವಿಳಾಸವೇ ಇಲ್ಲದಂತಾಗಿದೆ. ಕಳೆದೊಂದು ದಶಕದಿಂದಲೂ ಸ್ವಂತ ಕಟ್ಟಡದ ಭಾಗ್ಯ ಕಾಣದೆ ಸಂಚಾರಿ ಠಾಣೆಯು ಅಕ್ಷರಶಃ ಸಂಚಾರದಲ್ಲೇ ಇದೆ. ವಿವಿಧ ಬಾಡಿಗೆ ಕಟ್ಟಡಗಳಿಗೆ ಸ್ಥಳಾಂತರಗೊಳ್ಳುತ್ತ ಸಾಗಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಪದೇ ಪದೇ ಠಾಣೆ ಸ್ಥಳಾಂತರ ಆಗುತ್ತಿರುವ ಪರಿಣಾಮ ಪೊಲೀಸ್ ಸಿಬ್ಬಂದಿಗಳು ಮಾತ್ರವಲ್ಲದೆ, ವಿವಿಧ ಕಾರಣಕ್ಕೆ ಠಾಣೆಗೆ ಭೇಟಿ ನೀಡುವ ಸಾರ್ವಜನಿಕರೂ ತೀವ್ರ ತೊಂದರೆ ಅನುಭವಿಸುವ ಸ್ಥಿತಿ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಗೆ 2017 ರಲ್ಲಿ ಹೊಸತಾಗಿ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಮಂಜೂರಾಗಿತ್ತು. ಆರಂಭದಲ್ಲಿ ನಗರದ ನಾಗುರಿಯ ಬಾಡಿಗೆ ಮನೆಯೊಂದರಲ್ಲಿ ಠಾಣೆ ಕಾರ್ಯಾರಂಭ ಮಾಡಿತ್ತು. ನಂತರದ ದಿನಗಳಲ್ಲಿ ರಾ.ಹೆ 66ರ ಜಪ್ಪಿನಮೊಗರಿನ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು. ಅಲ್ಲಿಯೂ ಭದ್ರ ನೆಲೆ ಕಾಣದೆ ಇದೀಗ ಮಂಗಳೂರು ನಗರ ಪ್ರದೇಶವನ್ನೇ ತೊರೆದು ಉಳ್ಳಾಲ ತಾಲೂಕಿನ ಸಂಕೋಳಿಗೆಯ ಗ್ರಾಮಾಂತರ ಪ್ರದೇಶದ ಹಳೆಯ ಬಾಡಿಗೆ ಮನೆಯೊಂದಕ್ಕೆ ಸ್ಥಳಾಂತರಗೊಂಡಿದೆ. ಹಳೆಯ ತಾರಸಿ ಕಮ್ ಹಂಚಿನ ಕಟ್ಟಡದೊಳಗೆ ಇಲಾಖೆಯ ಫೈಲುಗಳು, ಕಂಪ್ಯೂಟರ್ಗಳನ್ನು ಇರಿಸಲಾಗಿದ್ದು ಮಳೆಗಾಲದಲ್ಲಿ ನೀರು ಸೋಕಿ ಹಾನಿ ಉಂಟಾಗಲೂ ಬಹುದು.


ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕಚೇರಿಗಳಿಗೆ ನೂತನ ಕಟ್ಟಡ ನಿರ್ಮಿಸಲು ಕೋಟೆಕಾರು ಹೆದ್ದಾರಿಯ ಸರ್ವಿಸ್ ರಸ್ತೆ ಅಂಚಿನ 30 ಸೆಂಟ್ಸ್ ನಿವೇಶನ ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ಈ ಪ್ರಸ್ತಾಪವನ್ನು ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆಯೆಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ.ರವಿಶಂಕರ್ ತಿಳಿಸಿದ್ದಾರೆ.
ಸಂಕೋಳಿಗೆಯ ನೂತನ ಠಾಣೆಗೆ ದೂರದ ಬಜ್ಪೆ, ಸುರತ್ಕಲ್ ನಿಂದ ಪೊಲೀಸ್ ಸಿಬ್ಬಂದಿಗಳು ನಿತ್ಯವೂ ಕರ್ತವ್ಯಕ್ಕೆ ಹಾಜರಾಗಬೇಕಿದ್ದು ಠಾಣೆಗೆ ಸೂಕ್ತ ಸ್ಥಳದಲ್ಲಿ ಶಾಶ್ವತ ಕಟ್ಟಡ ಇಲ್ಲದಿರುವುದು ಪೊಲೀಸರ ಕರ್ತವ್ಯದ ಮೇಲೂ ಪರಿಣಾಮ ಬೀರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಕಡೆ ಗಮನಹರಿಸಿ ಸಂಚಾರಿ ಠಾಣೆಗೆ ಸೂಕ್ತ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕಿದೆ.
ಪದೇ ಪದೇ ಠಾಣೆಯ ಸ್ಥಳಾಂತರದಿಂದಾಗಿ ಸಂಚಾರಿ ಠಾಣೆ ಎಲ್ಲಿದೆಯೆಂಬ ಗೊಂದಲ ಸಾರ್ವಜನಿಕರಲ್ಲಿ ಉಂಟಾಗುವುದಲ್ಲದೆ, ವಿಳಾಸ ಹುಡುಕಿ ಅಲೆದಾಡುವ ಸ್ಥಿತಿಯಾಗಿದೆ. ಇದರಿಂದ ಪೊಲೀಸ್ ಸಿಬ್ಬಂದಿಗೂ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪುರುಷೋತ್ತಮ ಕಲ್ಲಾಪು ತಿಳಿಸಿದ್ದಾರೆ.
ಸವಾಲಾಗಿದೆ ಬೃಹತ್ ವ್ಯಾಪ್ತಿ!
ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ, ಕಂಕನಾಡಿ ಗ್ರಾಮಾಂತರ ಸೇರಿದಂತೆ ನಾಲ್ಕು ಪೊಲೀಸ್ ಠಾಣೆಗಳು ದಕ್ಷಿಣ ಸಂಚಾರಿ ಠಾಣೆಯ ವ್ಯಾಪ್ತಿಗೊಳಪಡುತ್ತವೆ. ಮಂಗಳೂರು ನಗರದ ವಾಮಂಜೂರು, ಪರಾರಿ, ನೀರುಮಾರ್ಗ, ಬೈತುರ್ಲಿ, ಅಡ್ಯಾರ್ , ಅರ್ಕುಳ, ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಸೇತುವೆ ಕೊನೆಯ ತನಕ ಉಳ್ಳಾಲ ತಾಲೂಕಿನ ಕೊಣಾಜೆ, ಹರೇಕಳ, ಪಾವೂರು, ಬೋಳಿಯಾರು ರಂತಡ್ಕ ಕ್ರಾಸ್, ದೇವಿಪುರ, ತಲಪಾಡಿ- ಮಂಜೇಶ್ವರ ಗಡಿ ಪ್ರದೇಶದ ತನಕವೂ ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿ ವಿಸ್ತರಿಸಿದೆ. ಇಷ್ಟು ದೊಡ್ಡ ವ್ಯಾಪ್ತಿಯಲ್ಲಿ ಸಂಚಾರ ನಿಯಂತ್ರಣ, ರಸ್ತೆ ಅಪಘಾತಗಳ ನಿರ್ವಹಣೆ, ಪ್ರಕರಣಗಳ ತನಿಖೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಪೊಲೀಸರು ನಿಭಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಠಾಣೆಯ ವ್ಯಾಪ್ತಿ ಮರುವಿಂಗಡಣೆಯೂ ಅಗತ್ಯವಾಗಿದೆ.
28-11-26 09:30 pm
HK News Staffer
ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಕಾಣಿಕೆ ;...
26-11-26 08:34 pm
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
28-11-26 04:08 pm
HK News Staffer
ಇಸ್ರೇಲ್ ನಲ್ಲಿ ಮಂಗಳೂರಿನ ಯುವಕ ನಿಗೂಢ ಸಾವು ; ಕೊಲೆ...
25-11-26 11:53 am
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
28-11-26 09:08 pm
HK News Staffer
ಸಂಕ್ರಾಂತಿ ವೇಳೆಗೆ ಕೆಐಒಸಿಎಲ್ ಸಮಸ್ಯೆಗೆ ಪರಿಹಾರ ;...
28-11-26 08:35 pm
ಶಾಶ್ವತ ವಿಳಾಸ ಇಲ್ಲದೆ ಸಂಚರಿಸುತ್ತಲೇ ಇದೆ ಮಂಗಳೂರು...
28-11-26 08:31 pm
ಮಂತ್ರಿಗಳ ಸೋಷಿಯಲ್ ಮೀಡಿಯ ಪ್ರಚಾರಕ್ಕೆ 450 ಕೋಟಿ, ಆ...
28-11-26 07:26 pm
ಆಶಾ ಕಾರ್ಯಕರ್ತರ ಬಗ್ಗೆ ಸಿಎಂ ದರ್ಪ ತೋರುತ್ತಿದ್ದಾರೆ...
28-11-26 04:10 pm
28-11-26 02:42 pm
HK News Staffer
ವಿಟ್ಲದಲ್ಲಿ ಪತ್ನಿಯನ್ನು ಹತ್ಯೆಗೈದು ಹೃದಯಾಘಾತದ ಕತೆ...
27-11-26 03:14 pm
ಗೂಗಲ್ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದ...
26-11-26 08:35 pm
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm