ಬ್ರೇಕಿಂಗ್ ನ್ಯೂಸ್
28-11-26 09:08 pm HK News Staffer ಕರಾವಳಿ
ಮಂಗಳೂರು, ನ.28: ನಾನಾ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತದ ಅಗತ್ಯಗಳಿಗೆ ತಕ್ಕಂತೆ ಸಂವಿಧಾನದ ಮೊದಲ ಸಮಗ್ರ ಕರಡು ಸಿದ್ಧಪಡಿಸಿದ ಸರ್ ಬೆನೆಗಲ್ ನರಸಿಂಗ ರಾವ್ ಅವರ ಕೊಡುಗೆ ಮಹತ್ವದ್ದು. ನರಸಿಂಗ ರಾವ್ ಒಬ್ಬ ಅಧಿಕಾರಿ ಸ್ಥಾನದಲ್ಲಿದ್ದು ಹಲವು ದೇಶಗಳಿಗೆ ತೆರಳಿ, ಅಲ್ಲಿನ ಕಾನೂನು ಬಗ್ಗೆ ಅಧ್ಯಯನ ನಡೆಸಿ ಸಂವಿಧಾನಕ್ಕೆ ಸ್ಥೂಲ ರೂಪ ಕೊಡಲು ಬಹಳಷ್ಟು ಶ್ರಮ ಪಟ್ಟಿದ್ದರು ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಹೇಳಿದರು.
ಶನಿವಾರ ನಗರದ ಟಿ.ವಿ. ರಮಣ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ತನ್ನ ಹಳೆಯ ವಿದ್ಯಾರ್ಥಿ ಬಿ.ಎನ್. ರಾವ್ ಅವರ ಸ್ಮರಣಾರ್ಥ, ಅವರ ಬರಹಗಳನ್ನು ಒಳಗೊಂಡ ‘ಇಂಡಿಯಾಸ್ ಕಾನ್ಸ್ಟಿಟ್ಯೂಷನ್ ಇನ್ ದಿ ಮೇಕಿಂಗ್’ ಮರು ಪ್ರಕಟಿತ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಂವಿಧಾನ ರಚನಾ ಸಭೆಯ ಸಲಹೆಗಾರರಾಗಿದ್ದ ರಾವ್ ಅವರು ಅಮೆರಿಕ, ಕೆನಡಾ, ಐರ್ಲೆಂಡ್ ಮತ್ತು ಬ್ರಿಟನ್ಗೆ ಭೇಟಿ ನೀಡಿ ಅಲ್ಲಿನ ಸಂವಿಧಾನ ತಜ್ಞರೊಂದಿಗೆ ಚರ್ಚಿಸಿದ್ದರು. ನಾನಾ ದೇಶಗಳ ಆಡಳಿತ ಪದ್ಧತಿಗಳನ್ನು ಹೋಲಿಸಿ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಇಲ್ಲಿನ ಜನರ ಅಗತ್ಯಗಳನ್ನು ಗಮನದಲ್ಲಿಟ್ಟು ಸಂವಿಧಾನದ ಕರಡು ಸಿದ್ಧಪಡಿಸಿದ್ದರು. ಇದೇ ಕರಡು ರೂಪ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯ ಕೆಲಸಗಳಿಗೆ ಆಧಾರವಾಾುತು. ಸಂವಿಧಾನ ರಚನಾ ಸಭೆಯ ಸಮಾರೋಪ ಭಾಷಣದಲ್ಲಿ ಅಂಬೇಡ್ಕರ್ ಅವರೇ ನರಸಿಂಗ ರಾವ್ ಅವರ ಕೊಡುಗೆಯನ್ನು ಸ್ಮರಿಸಿದ್ದರು ಎಂದು ನಜೀರ್ ತಿಳಿಸಿದರು.
ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಕಲ್ಯಾಣದ ನಡುವೆ ಸಮತೋಲನ ಸಾಧಿಸಲು ರಾವ್ ಒತ್ತು ನೀಡಿದ್ದರು. ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿಯ ನಿರ್ದೇಶಕ ತತ್ವಗಳಿಗೆ ಸಂವಿಧಾನದಲ್ಲಿ ಸ್ಥಾನ ಕಲ್ಪಿಸುವ ಚೌಕಟ್ಟು ರೂಪಿಸುವಲ್ಲಿ ಅವರ ಪಾತ್ರವಿತ್ತು. ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ 14, 19 ಮತ್ತು 21ನೇ ವಿಧಿಗಳು ಸಂವಿಧಾನದ ‘ಸುವರ್ಣ ತ್ರಿಕೋನ’ ಎಂದು ನಜೀರ್ ಬಣ್ಣಿಸಿದರು. ಇದೇ ಸಂದರ್ಭ ಮರು ಪ್ರಕಟಿತ ಕೃತಿಯ ಮೊದಲ ಪ್ರತಿಯನ್ನು ಸರ್ ಬೆನೆಗಲ್ ನರಸಿಂಗ ರಾವ್ ಅವರ ಕುಟುಂಬಿಕರಾದ ಸಂತೋಷ್ ರಾವ್ ಅವರಿಗೆ ನೀಡಲಾಯಿತು.






ಬೆನೆಗಲ್ ನರಸಿಂಗ ರಾವ್ ಮಂಗಳೂರಿನ ಪ್ರತಿಭೆ
ಬೆನೆಗಲ್ ನರಸಿಂಗ ರಾವ್ ಅವರು ಮಂಗಳೂರಿನಲ್ಲಿ ಜನಿಸಿ ಕೆನರಾ ಹೈಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮುಂದೆ ಮದ್ರಾಸ್ನ ಪ್ರೆಸಿಡೆನ್ಸಿ ಕಾಲೇಜು ಹಾಗೂ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾಗಿ, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಹಾಗೂ ಹೇಗ್ನ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು ಎಂದು ಜಸ್ಟೀಸ್ ನಜೀರ್ ಸ್ಮರಿಸಿದರು.
ಭೂಸುಧಾರಣೆ ಕುರಿತು ದೂರದೃಷ್ಟಿ ಇತ್ತು..
ಕರ್ನಾಟಕ ಮತ್ತು ಒಡಿಶಾ ಹೈಕೋರ್ಟ್ಗಳ ಮಾಜಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಾಗಿ ಸೇರಿಸಿದರೆ ಭೂಸುಧಾರಣೆ ಜಾರಿಗೆ ಅಡ್ಡಿಯಾಗಬಹುದು ಎಂಬ ಪ್ರಶ್ನೆಯನ್ನು ರಾವ್ ಸಂವಿಧಾನ ರಚನೆಯ ಹಂತದಲ್ಲೇ ಎತ್ತಿದ್ದರು. ಭೂಮಿಯನ್ನು ಉಳುಮೆ ಮಾಡುವವರು ಮತ್ತು ಅದರ ಮಾಲೀಕರು ಬೇರೆ ಬೇರೆಯಾಗಿರುವ ಪರಿಸ್ಥಿತಿಯಲ್ಲಿ ಕೃಷಿ ಸುಧಾರಣೆಗಳನ್ನು ಹೇಗೆ ಜಾರಿಗೊಳಿಸುವುದು ಎಂಬುದು ರಾವ್ ಮುಂದಿಟ್ಟ ಪ್ರಶ್ನೆಯಾಗಿತ್ತು. ಮುಂದೆ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು, 300 ಎ ವಿಧಿಯಡಿ ಸಾಂವಿಧಾನಿಕ ಹಕ್ಕಾಗಿ ಉಳಿಸಲಾಾಯಿತು. ಸಂವಿಧಾನದ ಪ್ರಸ್ತಾವನೆಯ ಕರಡನ್ನು ಪರಿಷ್ಕರಿಸುವಲ್ಲಿಯೂ ರಾವ್ ಪಾತ್ರ ವಹಿಸಿದ್ದರು. ಸಂವಿಧಾನದ ಮೂಲ ಮೌಲ್ಯಗಳನ್ನು ಕಾಪಾಡುವಲ್ಲಿ ನಾಗರಿಕರಿಗೂ ಜವಾಬ್ದಾರಿ ಇದೆ ದೀಕ್ಷಿತ್ ಸ್ಮರಿಸಿದರು.
ಸಂವಿಧಾನದ ರಚನೆಯ ಹಿಂದಿನ ಆಶಯಗಳು, ಅದರ ಮೂಲ ತತ್ವಗಳು ಹಾಗೂ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸಮಕಾಲೀನ ಸವಾಲುಗಳ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಯಿತು. ಈ ಸಂದರ್ಭ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ನಿತಿನ್ ರಮೇಶ್ ಗೋಕರ್ಣ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ವಾಸುದೇವ ಕಾಮತ್, ಪ್ರಧಾನ ಕಾರ್ಯದರ್ಶಿ ಯೋಗೀಶ್ ಕಾಮತ್ ಉಪಸ್ಥಿತರಿದ್ದರು. ಶಾಸಕ ಡಿ.ವೇದವ್ಯಾಸ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
28-11-26 09:30 pm
HK News Staffer
ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಕಾಣಿಕೆ ;...
26-11-26 08:34 pm
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
28-11-26 04:08 pm
HK News Staffer
ಇಸ್ರೇಲ್ ನಲ್ಲಿ ಮಂಗಳೂರಿನ ಯುವಕ ನಿಗೂಢ ಸಾವು ; ಕೊಲೆ...
25-11-26 11:53 am
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
28-11-26 09:08 pm
HK News Staffer
ಸಂಕ್ರಾಂತಿ ವೇಳೆಗೆ ಕೆಐಒಸಿಎಲ್ ಸಮಸ್ಯೆಗೆ ಪರಿಹಾರ ;...
28-11-26 08:35 pm
ಶಾಶ್ವತ ವಿಳಾಸ ಇಲ್ಲದೆ ಸಂಚರಿಸುತ್ತಲೇ ಇದೆ ಮಂಗಳೂರು...
28-11-26 08:31 pm
ಮಂತ್ರಿಗಳ ಸೋಷಿಯಲ್ ಮೀಡಿಯ ಪ್ರಚಾರಕ್ಕೆ 450 ಕೋಟಿ, ಆ...
28-11-26 07:26 pm
ಆಶಾ ಕಾರ್ಯಕರ್ತರ ಬಗ್ಗೆ ಸಿಎಂ ದರ್ಪ ತೋರುತ್ತಿದ್ದಾರೆ...
28-11-26 04:10 pm
28-11-26 02:42 pm
HK News Staffer
ವಿಟ್ಲದಲ್ಲಿ ಪತ್ನಿಯನ್ನು ಹತ್ಯೆಗೈದು ಹೃದಯಾಘಾತದ ಕತೆ...
27-11-26 03:14 pm
ಗೂಗಲ್ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದ...
26-11-26 08:35 pm
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm